ಮಲ್ಲಿಕಾ ಮೇಲೆ ಬಾರ್‌ಬಾರಿಕ್ ಕೇಸ್
ಬೊಗಳೂರು, ಜ.27- ಇತ್ತೀಚೆಗೆ ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿರುವಂತೆಯೇ, ಅವರು ಕಾನೂನು ರಕ್ಷಕರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಪ್ರಕರಣವೂ ವರದಿಯಾಗುತ್ತಿದೆ. (http://bogaleragale.blogspot.com/)
ಬಾರ್ ಡ್ಯಾನ್ಸರ್‌ಗಳಂತೆ ನರ್ತನ ಮಾಡುತ್ತಾ ತಮ್ಮದೇ ಆದ ಅಭಿಮಾನಿ ವಲಯವನ್ನು ಸೃಷ್ಟಿಸಿಕೊಂಡಿರುವ ಬಿಚ್ಚೋಲೆ ಮಲ್ಲಮ್ಮನ ವಿರುದ್ಧ ವೇಶ್ಯಾವಾಟಿಕೆಯ ಕೇಸು (ಬಿಯರ್ ಕೇಸ್ ಅಲ್ಲ ಎಂಬುದುಖಚಿತವಾಗಿದೆ) ಹಾಕಿರುವ ಬಾರ್ ಅಸೋಸಿಯೇಶನ್ ಅಧ್ಯಕ್ಷರೊಬ್ಬರು, ತಾವು ಕಾನೂನು ರಕ್ಷಣೆಯ ಸಾಮಾಜಿಕ ಕಳಕಳಿ ಹೊಂದಿರುವುದಾಗಿ ಸಾಬೀತುಪಡಿಸಿದ್ದಾರೆ.
ಆದರೆ ಅವರು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಭಾವಚಿತ್ರಗಳು, ಆಕೆಯ ಮೇಲೆ ಮತ್ತೊಂದು ಕೇಸು ಹಾಕಲು ವೇದಿಕೆ ಹಾಕಿಕೊಟ್ಟಿದೆ. ಆಕೆಯ ವಿರುದ್ಧ ಪುರುಷರ ಮೇಲೆ ಅತ್ಯಾಚಾರ ಯತ್ನ ಕೇಸು ದಾಖಲಿಸುವುದಾಗಿ ಪಕ್ಕದಲ್ಲೇ ಇದ್ದ ಬಾರ್‌ನ ಮುಖ್ಯಸ್ಥರೊಬ್ಬರು ಸಾರಿದ್ದಾರೆ.
ಈ ಮಧ್ಯೆ ಮ್ಯಾಕ್ಸಿಮ್ ಪತ್ರಿಕೆಯ ಮುಖಪುಟದಲ್ಲಿ ಮ್ಯಾಕ್ಸಿಮಮ್ ಆಗಿ ತೋರಿಸಲು ಪ್ರಯತ್ನಿಸಿದಳಾದರೂ, ಸಂಪಾದಕರು ಕತ್ತರಿ ಪ್ರಯೋಗ ಮಾಡಿರುವ ಮೂಲಕ ಅದು ಕೇವಲ ಮಿನಿಮಮ್ ಆಗಿತ್ತು ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಸ್ಟಾರ್‌ಗಳ ವಿರುದ್ಧ ಕೇಸು ದಾಖಲಿಸಿದಲ್ಲಿ ತಾವೂ ಅಂತಾರಾಷ್ಟ್ರೀಯ ಸ್ಟಾರ್ ಆಗಬಹುದು ಎಂಬ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೊಗಳೆ ರಗಳೆ ಬ್ಯುರೋ ಕೂಡ ಯಾರ ಮೇಲೆ ಯಾವ ಕೇಸು ಹಾಕಬಹುದು ಎಂದು ಹೊಂಚು ಹಾಕುತ್ತಿರುವುದಾಗಿ ವರದಿಯಾಗಿದೆ.