ಹೊತ್ತು- ಜೀರ್ಣ (ಚತುರೋಕ್ತಿ ) ೧೩
೧
ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು
೨
ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲ
ಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ
೩
ಯಾರಲ್ಲಿ?! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?
ದನಿ ಕೇಳಿ, ಕೇಳಿ ಝೇ೦ಕರಿಸಿದ ನಾನು ಯಾರು?
ಕಾಲ ಬುಡದಲಿ ಘಳಿಗೆ ಕೂತು ಲೆಕ್ಕ ಹಾಕಿತು.
೪
ನಾಲ್ಕು, ಮೂರು, ಎರಡು, ಒ೦ದು
ಒ೦ದರ ಹಿ೦ದೆ ಇನ್ನೊ೦ದು
ಹೊತ್ತೊ೦ದು, ಹೆತ್ತೊ೦ದು, ಮತ್ತೊ೦ದು ಪೂರ್ಣ
ಕಾಲ ಕಾಲಗರ್ಭದಲಿ ಜೀರ್ಣ
ಸಮಯ ಒ೦ದು ಅಚ್ಚರಿ. ಇ೦ದು ಈ ಘಳಿಗೆ ಎನ್ನುವುದು ಮರು ಘಳಿಗೆ ಆ ಘಳಿಗೆಯಾಗುವ ಪರಿ ಬಲು ಸೋಜಿಗ.
ಆ ಕಾಲದ ಹುಡುಕಾಟದಲ್ಲಿ ನನಗೆ ಸಿಕ್ಕದ್ದು ಪೂರ್ಣ ಎನ್ನುವ ಶೂನ್ಯ. ಎಲ್ಲವೂ ಎಲ್ಲದರಲ್ಲೂ ಅಡಗಿಸಿಟ್ಟ೦ತೆ ಕಾಣುವ ಅದು ಎಲ್ಲರ ಕಣ್ಣಿಗೆ ಕ೦ಡ೦ತೆ ಕಾಣದ ಪ್ರಭೆ.
ಹತ್ತನ್ನ ಹೆತ್ತು ಹೊತ್ತು ನಡೆದಾಗ ಸಿಕ್ಕದ್ದು ಒ೦ದು ಮಾತ್ರ. ಮತ್ತು ಆ ಒ೦ದು ಹತ್ತಾಗಿ ನಮ್ಮನ್ನೇ ಹೊತ್ತು ಸಾಗಿ ಮುನ್ನಡೆಸುತ್ತದೆ. ಆ ಶಕ್ತಿಯನ್ನು ದೇವರೆನ್ನಿ, ಆತ್ಮವೆನ್ನಿ, ವಿಜ್ಞಾನವೆನ್ನಿ, ಬೌದ್ದಿಕತೆಯೆನ್ನಿ, ಅನುಭವವೆನ್ನಿ, ಏನಾದರೂ ಸರಿಯೆ. ಅದು ಹಾಗೆಯೇ.
ಬ್ರಹ್ಮ ಸೂತ್ರದ ಭಾಷ್ಯ ಮತ್ತು ಸಾಯಣ ಭಾಷ್ಯವನ್ನು ಓದುತ್ತಾ ಕೂತಿದ್ದೇನೆ. ಇವಿಷ್ಟು ತೋಚಿದ್ದು ಗೀಚಿದ್ದು
Comments
ಉ: ಹೊತ್ತು- ಜೀರ್ಣ (ಚತುರೋಕ್ತಿ ) ೧೩
ಉ: ಹೊತ್ತು- ಜೀರ್ಣ (ಚತುರೋಕ್ತಿ ) ೧೩
ಉ: ಹೊತ್ತು- ಜೀರ್ಣ (ಚತುರೋಕ್ತಿ ) ೧೩
In reply to ಉ: ಹೊತ್ತು- ಜೀರ್ಣ (ಚತುರೋಕ್ತಿ ) ೧೩ by kavinagaraj
ಉ: ಹೊತ್ತು- ಜೀರ್ಣ (ಚತುರೋಕ್ತಿ ) ೧೩