ಒಮ್ಮೆ ನಕ್ಕು ಬಿಡಿ _ ೧

ಒಮ್ಮೆ ನಕ್ಕು ಬಿಡಿ _ ೧


ರೈಲ್ವೆ ನಿಲ್ದಾಣ ಹೊರಗಿನಿಂದ ಆಗ ತಾನೆ ರೈಲು ಬಂದಿತ್ತು ಗೇಟ್ ಬಳಿ ಜನದ ನೂಕುನುಗ್ಗಲು. ಟಿಕೆಟ್ ಕಲೆಕ್ಟರ್ ಹೊಸಬ ಹುರುಪು ಜಾಸ್ತಿ. ಆಗ ಒಬ್ಬ ಯುವಕ ಅವನನ್ನು ತಳ್ಳಿ ಜೋರಾಗಿ ಹೊರಗೆ ಓಡಿದ ಟಿಕೆಟ್ ತೋರಿಸದೆ ! ಯುವಕ  ಟಿಕೆಟ್ ಕಲೆಕ್ಟರ್ ಅವನ ಹಿಂದೆ ಓಡಿದ ಹಿಡಿಯಲು ಸ್ವಲ್ಪ ದೂರ ಓಡಿ ಸುಸ್ತಾದವನಂತೆ ನಿಂತ ಆ ಯುವಕ, ಅವನನ್ನು ಹಿಡಿದು ಕೇಳಿದ "ಎಲ್ಲಿ ಟಿಕೆಟ್ ತೋರಿಸು". ಆ ಯುವಕ ಜೇಬಿನೊಂದ ಟಿಕೆಟ್ ತೆಗೆದು ಕೊಟ್ಟ.
"ಮತ್ತೇಕೆ ಓಡಿದೆ ? " ಆಶ್ಚರ್ಯದಿಂದ ಕೇಳಿದ ಟಿ.ಸಿ.
"ನನ್ನ ಹಿಂದಿದ್ದ ನನ್ನ ಸ್ನೇಹಿತನ ಹತ್ತಿರ ಟಿಕೆಟ್ ಇರಲಿಲ್ಲ" ಅಂದ ಯುವಕ.
ಟಿಕೆಟ್ ಕಲೆಕ್ಟರ್ !!! (:

(ಕೇಳಿದ್ದು  , ಚಿತ್ರ ಇಂಟರ್ನೆಟ್ಗ  ಸೇರಿದ್ದು)

Rating
No votes yet

Comments