*ಯಾವ ನ್ಯಾಯ*
ಅಲಮೇಲುಮಂಗಿ ಮುಸ್ಲೀಂ ಹುಡುಗಿಯನ್ನು
ಹಿಂದೂದೇವರಾದ ಕಲಿಯುಗದ ಕುಬೇರ
ಶ್ರೀನಿವಾಸ(ವೆಂಕಟೇಶ್ವರ) ವಿವಾಹವಾಗಿದ್ದರೂ
ಅವನಿಗೆ ತಪ್ಪದ ತುಪ್ಪದ ದೀವಿಗೆ ಪೂಜೆ
ಅಲಮೇಲಮ್ಮನ ಮಗಳು ಅನಿತಾಳನ್ನು
ವಿವಾಹವಾಗಲು ಎಲ್ಲಿಲ್ಲದ ಗೊಡವೆ
ಕಲಿಯುಗ ಇದುವೆ
ಶಿವನು ಶೈವನಾದರು ಕ್ಷತ್ರಿಯ ಕುಲದ
ದಾಕ್ಷಾಯಣಿಯನ್ನು ವರಿಸಿದ
ಇನ್ನು ನಮ್ಮ ಪೂರ್ವಿಕರಾದ
ಸಂತನು(ಮಹಾಬಾರತದ ಮೊಲಪುರುಷ)
ಕ್ಷತ್ರಿಯ ನಾಗಿದ್ದು ಮತ್ಸ್ಯಗಂಧಿಯನ್ನು
ಭೀಮ ರಾಕ್ಷಸಕನ್ನ್ಯಯಾದ ಹಿಡಂಬಿಯನ್ನು
ಅರ್ಜುನ ಗೊಲ್ಲರಕನ್ಯಯಾದ ಸುಬದ್ರೆಯನ್ನು ವರಿಸಿರುವಾಗ
ಸಾಮಾನ್ಯರಿಗೇಕೆ ಈ ನ್ಯಾಯ-ನೀತಿ
ಕೃಷ್ಣಮೊರ್ತಿಅಜ್ಜಹಳ್ಳಿ
Rating