ಒಮ್ಮೆ ನಕ್ಕು ಬಿಡಿ _ ೩
ರಾಜಕಾರಣಿಯೊಬ್ಬ ಸತ್ತ ನಂತರ ನರಕ ಸೇರಿದ. ಅವನಿಗೆ ಅಲ್ಲೆಲ್ಲ ನೋಡುತ್ತಲೆ ಗಾಭರಿ ಜಾಸ್ತಿಯಾಗಿತ್ತು. ಅಷ್ಟರಲ್ಲಿ ಯಮಧರ್ಮ ಬಂದು ಆಸೀನನಾದ. ಏನಾಯಿತೊ ರಾಜಕಾರಣಿ ಓಡಿಹೋಗಿ ಯಮನ ಕಾಲು ಹಿಡಿದುಬಿಟ್ಟ. "ಯಮ ನನಗೆ ನಿಜಕ್ಕು ಈ ನರಕ ಯಮಲೋಕ ಇರುವದೆಲ್ಲ ತಿಳಿದಿರಲಿಲ್ಲ ಎಲ್ಲ ಸುಳ್ಳು ಅಂದುಕೊಂಡು ಏನೇನೊ ಪಾಪ ಮಾಡಿಬಿಟ್ಟಿದ್ದೇನೆ, ನನ್ನನ್ನು ಕಾಪಾಡು" ಎನ್ನುತ್ತ ಬೇಡಿಕೊಂಡ. ರಾಜಕಾರಣಿಯ ಕಾಟ ತಾಳಲಾರದೆ ಕಡೆಗೆ ಯಮ ಹೇಳಿದ "ನಮ್ಮ ಲೋಕಕ್ಕೆ ಬಂದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು, ನಿನಗಾಗಿ ಒಂದು ರಿಯಾಯಿತಿ ಕೊಡುತ್ತಿದೇನೆ,ನಿನ್ನ ಶಿಕ್ಷೆ ನೀನೆ ಆಯ್ಕೆ ಮಾಡಿಕೋ" ಎನ್ನುತ್ತ ಹೊರಗಟ್ಟಿದ. ಸದ್ಯ ಅಷ್ಟಾದರು ಆಯಿತಲ್ಲ ಅಂತ ಯಮದೂತನ ಜೊತೆ ಹೊರಟ ಅವನು. ದಾರಿಯಲ್ಲಿ ಏನೇನೊ ಶಿಕ್ಷೆಗಳನ್ನು ನೋಡಿದ ಕಾದ ಎಣ್ಣೆಯಲ್ಲಿ ಮುಳುಗಿಸುವುದು, ಕಾಲನ್ನು ಗರಗಸದಿಂದ ಕತ್ತರಿಸುವುದು, ಬೆಂಕಿಯಲ್ಲಿ ಹಾಕುವುದು .. ಇನ್ನು ಏನೇನೊ ಬೆವತು ಹೋದ ರಾಜಕಾರಣಿ, ಕಡೆಗೆ ಕೊನೆಯಲ್ಲಿ ನೋಡಿದ ಕೆಲವರು ಒಂದು ಗುಂಡಿಯಲ್ಲಿ ನಿಂತು ಟೀ ಕುಡಿಯುತ್ತಿದ್ದರು, ಅವರ ಎದೆಯಮಟ್ಟದವರೆಗು ಗುಂಡಿಯಲ್ಲಿ ಕೊಚ್ಚೆ, ಹೊಲಸು, ಹೆ...ಹೆಮ್ಮಣ್ಣು ಎಲ್ಲವನ್ನು ತುಂಬಿಸಿದ್ದರು, ಕೆಟ್ಟವಾಸನೆ.ರಾಜಕಾರಣಿ ಖುಷಿಯಾದ , ಸ್ವಲ್ಪವಾಸನೆಯಿದ್ದರೆ ಏನಂತೆ, ಗುಂಡಿಯಲ್ಲಿ ನಿಂತು ಟೀ ಕುಡಿಯುವುದು ಎಂತಹ ಸುಲುಭವಾದ ಶಿಕ್ಷೆ , ಇದೆ ಇರಲಿ ಎಂದು ನಿರ್ದರಿಸಿ ಯಮನ ಹತ್ತಿರ ಹೋದ. ಪ್ರಾರ್ಥಿಸಿದ "ಪ್ರಭು ಅದೇ ಕಡೆಯಲ್ಲಿದೆಯಲ್ಲ ಕೊಚ್ಚೆಗುಂಡಿಯ ಶಿಕ್ಷೆ ಅದನ್ನೆ ಕೊಡು ಪ್ರಭು" ಯಮ ನಗುತ್ತ ಆಗಲಿ ಅಂತ ಅವನನ್ನು ಅಲ್ಲಿಗೆ ಕಳಿಸಿದ. ಈಗ ಅಲ್ಲಿಗೆ ಬಂದು ನೋಡುತ್ತಾನೆ ದೃಷ್ಯವೆ ಬದಲಾಗಿದೆ, ಆಗ ಟಿ ಕುಡಿಯುತ್ತಿದ್ದವರೆಲ್ಲ. ಈಗ ತಲೆಕೆಳಗೆ ಕಾಲುಮೇಲೆ ಮಾಡಿ ಅದೇ ಕೊಚ್ಚೆಯಲ್ಲಿ ನಿಂತಿದ್ದಾರೆ. ರಾಜಕಾರಣಿ ಬೆರಗಾದ ತಕ್ಷಣವೆ ಕೂಗಾಡತೊಡಗಿದ "ಮೋಸ ಮೋಸ ಆಗ ನೇರನಿಂತಿದ್ದರು ಈಗ ತೆಲೆಕೆಳಗು ನಾನು ಒಪ್ಪಲ್ಲ " ಅಂತ ಅಲ್ಲಿದ ನರಕದ ಕೆಲಸಗಾರ ಹೇಳಿದ"ಇಲ್ಲಿ ಯಾವಗಲು ಹೀಗೆ ತಲೆಕೆಳಗೆ ನಿಲ್ಲಬೇಕು ಈ ಕೊಚ್ಚೆಯಲ್ಲಿ ಗಲೀಜಿನಲ್ಲಿ ಮುಖ ಮುಳುಗಿಸಿ, ಆಗಲೆ ನೀನು ಬಂದಿದ್ದಾಗ TEA BREAK . ದಿನಕ್ಕೆ ಎರಡುಬಾರಿ ಹತ್ತು ನಿಮಿಷ ಮಾತ್ರ ನೆರವಾಗಿ ನಿಂತು ಟೀ ಕುಡಿಯಬಹುದು ಉಳಿದಂತೆ ಹೀಗೆ" ಎಂದ ಪಾಪ ರಾಜಕಾರಣೀ !!!
(ಕೇಳಿದ್ದು)
ಸೂಚನೆ: ರಾಜಕಾರಣೀ ಎಂದಿರುವದು ಯಾರಿಗಾದರು ಬೇಸರವಾದಲ್ಲಿ ಆ ಜಾಗದಲ್ಲಿ ನನ್ನ ಹೆಸರು ಹಾಕಿಕೊಳ್ಳಿ
Comments
ಉ: ಒಮ್ಮೆ ನಕ್ಕು ಬಿಡಿ _ ೩
In reply to ಉ: ಒಮ್ಮೆ ನಕ್ಕು ಬಿಡಿ _ ೩ by Jayanth Ramachar
ಉ: ಒಮ್ಮೆ ನಕ್ಕು ಬಿಡಿ _ ೩
In reply to ಉ: ಒಮ್ಮೆ ನಕ್ಕು ಬಿಡಿ _ ೩ by partha1059
ಉ: ಒಮ್ಮೆ ನಕ್ಕು ಬಿಡಿ _ ೩
ಉ: ಒಮ್ಮೆ ನಕ್ಕು ಬಿಡಿ _ ೩
In reply to ಉ: ಒಮ್ಮೆ ನಕ್ಕು ಬಿಡಿ _ ೩ by asuhegde
ಉ: ಒಮ್ಮೆ ನಕ್ಕು ಬಿಡಿ _ ೩
ಉ: ಒಮ್ಮೆ ನಕ್ಕು ಬಿಡಿ _ ೩
In reply to ಉ: ಒಮ್ಮೆ ನಕ್ಕು ಬಿಡಿ _ ೩ by gopaljsr
ಉ: ಒಮ್ಮೆ ನಕ್ಕು ಬಿಡಿ _ ೩