ಆ ಮೊದಲ ಭೇಟಿಯ ಈ ಮಧುರ ಯಾತನೆ

ಆ ಮೊದಲ ಭೇಟಿಯ ಈ ಮಧುರ ಯಾತನೆ

 

 

 

 

ಆ ಮೊದಲ ಭೇಟಿಯ ಈ ಮಧುರ ಯಾತನೆ
ಒಬ್ಬಂಟಿ ಹೃದಯದೊಳು ಒಂಟಿ ಭಾವದ ವೇದನೆ
ಒಂದು ಕ್ಷಣದಲ್ಲಿ  ಕರಗಿ ಮತ್ತೆ ಹುಟ್ಟುವ ಭಾವನೆ
ಲೋಕದ ಕಿವಿಗೆ ಕೇಳದ ಭ್ರಮಿತ ಸಂಭಾಷಣೆ


ನಿನ್ನೊಳು ನಾ ಅಡಗಿ ಕುಳಿತಿರಲು
ಸಂಜೆಯೋಳು ನನ್ನದ್ಯಾಕೋ ಆ ಅನ್ವೇಷಣೆ, ತಿಂಗಳ ಆ  ಚಂದಿರನೋಳು
ಮನದೊಳು ನನ್ನದ್ಯಾಕೋ  ಆ ವಿಶ್ಲೇಷಣೆ, ಕನ್ನಡಿಯ ಆ ಬಿಂಬದೊಳು
ಕನವರಿಕೆಯೊಳು ನನ್ನದ್ಯಕೋ ಆ ಆಶ್ವಾಸನೆ , ಕಂಬನಿಯಿಳಿದ ಆ ದಿಂಬಿನೋಳು


ನಿನಗೆ ಮಾರಿಬಿಟ್ಟ ಈ ಮನವು
ಒಂಟಿ ಹೆಜ್ಜೆಯಿಟ್ಟು ಓಡುತಿರುವುದ್ಯಾಕೋ, ಜಾರುವ ಬಾನಿನ ಬಣ್ಣದೊಳು
ಕಂಬನಿಯಿಟ್ಟು ಮಿಡಿಯುತಿರುವುದ್ಯಾಕೋ, ಕುಂಕುಮದ ಬಟ್ಟಲಲಿ ರವಿ ಕರಗಲು
ಹಿಂದಿರುಗಲು ತುಡಿಯುತಿರುವುದ್ಯಾಕೋ, ಅರ್ಥವಾಗದ ಪ್ರಶ್ನಾತೀತ ಕಾರಣದೊಳು


ನಿಮ್ಮ
ಕಾಮತ್ ಕುಂಬ್ಳೆ

 

ಚಿತ್ರ : ಅಂತರ್ಜಾಲದಲ್ಲಿ ಜಾಲಾಡಿದ್ದು

Rating
No votes yet