ಇದು ಗಾಂಧಿ-ಸುಭಾಷ್-ಭಗತ್ ಕಂಡ ಸ್ವತಂತ್ರ ಭಾರತದ ಕನಸೇ.......???????

ಇದು ಗಾಂಧಿ-ಸುಭಾಷ್-ಭಗತ್ ಕಂಡ ಸ್ವತಂತ್ರ ಭಾರತದ ಕನಸೇ.......???????

 

 

ಇದೆಂಥಹ ಹೊಲಸು ರಾಜಕೀಯ ....... ಎಲ್ಲವೂ ಹಾಳು... ಕಳೆದ 22 ಜನವರಿಯಂದು ರಾತ್ರೋ ರಾತ್ರಿ ಬದಲಾದ ಪರಿಸ್ತಿತಿ ಶಾಕ್ ತರಿಸಿತ್ತು. ಯಾವುದೊ ಮುಖ್ಯ ಕೆಲಸಕ್ಕೆಂದು ಬೆಳಗ್ಗಯೇ ಹೊರಟಾಗ ದಾರಿಯಲ್ಲಿ ಸಿಕ್ಕ ಪೋಲಿಸ್ನವರು ಹೇಳಿದ್ದು ಇಂದು ಬಂದ್, ನನಗೋ ಆಶ್ಚರ್ಯ!!! ಕಾರಣ ಕೇಳಿದಾಗ ತಿಳಿದದ್ದು ಇಂದು ಆಡಳಿತ ಪಕ್ಷದವರು ರಾಜ್ಯಾದ್ಯಂತ  ಬಂದ್  ಕರೆ ನೀಡಿದ್ದಾರೆ ಎಂದು (ಭಾರತದ ಇತಿಹಾಸದಲ್ಲಿ ಇದೆ ಮೊದಲ ಬಾರಿ ಆಡಳಿತ ಪಕ್ಷವೊಂದು ಬಂದ್ ಗೆ ಕರೆ ನೀಡಿತ್ತು)... ಎಲ್ಲೆಡೆ ರಾತ್ರೋ ರಾತ್ರಿ ಗಲಭೆ-ಗದ್ದಲಗಳು ವಾಹನಗಳನ್ನ ಸುಟ್ಟ ವಿಷಯ.. ಅಂಗಡಿ ಮುಂಗಟ್ಟುಗಳ ದ್ವಂಸ.. ಟೀವಿಯಲ್ಲಿ "ಕಿಡಿಗೇಡಿಗಳಿಂದ ಸರ್ಕಾರಿ ವಾಹನ, ಸಾರ್ವಜನಿಕ ಸ್ವತ್ತುಗಳ ನಾಶ " ವೆಂಬ ಕೂಗು... ಹಾಗಾದರೆ ಕಿಡಿಗೇಡಿಗಳು ಯಾರಿಲ್ಲಿ?? ಅನ್ನೋದು ಪ್ರತಿಯೊಬ್ಬನಿಗೂ ತಿಳಿಯದ ವಿಷಯವೇನಲ್ಲ...  


 

 

 

ಇನ್ನು ಮನೆಗೆ ಬಂದು ಟೀವಿ ಹಾಕಿದರೋ ಎಲ್ಲ  ಚಾನಲ್ ಗಳಲ್ಲೂ ಇದೇ ಸುದ್ದಿ..... ಒಂದೆಡೆ ವಿರೋಧ ಪಕ್ಷಗಳ  ಅಬ್ಬರ (ಏನು ಮಾಡಲಾಗದವರು ), ಹೊರಗೆಲ್ಲೂ ಹೋಗಬಾರದೆಂಬ ಮನವಿ ಆಡಳಿತ ಪಕ್ಷದಿಂದ (ಲೋಕ ಹಿತದ ಸೋಗು ಹಾಕುವವರು)..... ಅಬ್ಬಾ!! ಆ ಇಡೀ ದಿನ ಇದೆ ವಿಷಯಗಳು (ಬೇಸತ್ತು ಹೋಗಿತ್ತು ).  ಇನ್ನು ವಿರೋಧ ಪಕ್ಷದವರೆಂದು ಹೇಳಿಕೊಳ್ಳುವವರು ಒಂದಷ್ಟು ಗುಂಪು ಕಟ್ಟಿಕೊಂಡು strike ಮಾಡಿದ ಹೊರತಾಗಿ ಮತ್ತೆಲ್ಲವೂ ಸ್ತಭ್ದ..... ಎಂದಿನಂತೆ.... ತಮ್ಮೆಲ್ಲಾ ಅಂಗಡಿ-ಮುಂಗಟ್ಟುಗಳನ್ನ ಕಳೆದುಕೊಂಡವರ ದ್ವನಿ ಅರಣ್ಯ ರೋದನವಷ್ಟೇ(ಯೇ)....



 

 

ಈಗ ನೇರ ವಿಷಯಕ್ಕೆ ಬರೋಣ ....

ಇಷ್ಟೆಲ್ಲಾ ಪೀಠಿಕೆಯ ಜೊತೆಗೆ .....

ರಾಜ್ಯದಲ್ಲೆಲ್ಲ ಇಷ್ಟೆಲ್ಲಾ ರಾಜಕೀಯ ಕಿತ್ತಾಟಗಳು, ಗಲಭೆ, ಹೊಡೆದಾಟ, ಹಣ-ಹೆಂಡಗಳ ಚೆಲ್ಲಾಟದ ಪರಿಮಿತಿ ಮೀರಿದ್ದರೂ ವಿಧ್ಯಾವಂತವರ್ಗವೆಂದೇ ಗುರುತಿಸಲ್ಪಡುವ ಡಾ||, ಇಂಜಿನೀಯರ್, ಉಪನ್ಯಾಸಕರುಗಳು, ಶಿಕ್ಷಕರುಗಳು, ವಿದ್ಯಾರ್ಥಿಗಳು (ಈಗಲೂ ಇವರುಗಳಷ್ಟೇ ವಿಧ್ಯಾವಂತರೆಂದು ನಂಬುವಿರ?!!!) ರಾಜ್ಯದ ಆಗು ಹೋಗುಗಳು ನಮಗೇನು ಸಂಬಂಧವೇ ಇರದಂತೆ ಅದೇ ಕಂಪ್ಯೂಟರ್, ಪುಸ್ತಕದ ಪುರಾಣಗಳ ಜೊತೆ ಮುಳುಗಿರುವುದು ಎಂತಹ ಅಸಹನೀಯ... ಹಳ್ಳಿಯ ಒಬ್ಬ ಅವಿಧ್ಯಾವಂತ ರೈತನಿಗಿರುವ ನಾವು-ನಮ್ಮ ರಾಜ್ಯ ಎಂಬ ಕಿಂಚಿತ್ ಕಾಳಜಿ ಈ ಬುದ್ದಿವಂತ  (ಹಾಗಂತ ಹೇಳಿಕೊಳ್ಳುವವರಲ್ಲಿ) ಇಲ್ಲದಿರುವುದು ಅಧುನಿಕ ವಿಧ್ಯಾಬ್ಯಾಸದ (ಪರಿಯ) ಅತಿ ದೊಡ್ಡ ಸೋಲು.....



 

 

ಹವಾನಿಯಂತ್ರಿತ ಕಟ್ಟಡದಲ್ಲಿ ಲಕ್ಷಗಟ್ಟಲೆ ಸಂಬಳ ಎಣಿಸಿ, ಬರಿ ನಾನು, ನನ್ನದು, ಫ್ಲಾಟ್, ಕಾರು ಎಂಬ ಕನಸಿನಲ್ಲಿ ಓಲಾಡುವ ಇವರುಗಳಿಗೆ.... ಸಂಜೆಯಾಯಿತೆಂದರೆ ಕಿಟ್ಟಿ ಪಾರ್ಟಿ, ವೀಕೆಂಡ್ ಟ್ರಿಪ್, ಕ್ಲಬ್ ಪಬ್ (ಹಣ ಕಳೆಯುವುದಾದರೂ ಎಲ್ಲಿಂದಾ? (ಎಲ್ಲರಿಗೂ ಸಂಬಂದಿಸಿದ್ದಲ್ಲ)) ಎಂದು ಮೆರೆವ ಯುವ ಜನಾಂಗದಿಂದ ನಿರೀಕ್ಷಿಸುವುದಾದರೂ ಏನನ್ನ....??

ವೆಚ್ಚಕ್ಕೆ ಹೊನ್ನಿರಲು, ಬೆಚ್ಚನೆಯ ಮನೆಯಿರಲು ಚಿಂತೆ ನಮಗ್ಯಾಕೆಂಬ ನಿಕೃಷ್ಟ ಭಾವನೆ ತೊಡೆದು, ಇಡೀ ವಿದ್ಯಾವಂತ ಸಮೂಹ ಪ್ರತಿಭಟಿಸಬಾರದ್ಯಾಕೆ ????????? ಮತ್ತೆ ಸುಭಾಷ್-ಭಗತ್-ಗಾಂಧಿ ಹಾಕಿ ಕೊಟ್ಟ ದಾರಿಯಲ್ಲಿ ನಡೆಯಬಾರದ್ಯಾಕೆ???..... ದೇಶವೆಂಬ ದೇಶವೇ ಹೊತ್ತಿ ಉರಿವಾಗ ಆ ಬೆಂಕಿಯಲ್ಲಿ ಬುತ್ತಿ ಬೇಯಿಸುವ ನೆಡೆ ಸರಿಯೇ..?

 
ಆತ್ಮಾವಲೋಕನಕ್ಕೆ ಅವಕಾಶ ಎಂದೂ ಇದೇ.. 


- ಆಶಾ