ಚುಟುಕಗಳು

ಚುಟುಕಗಳು

*ಪರಿಣಾಮ*

ಇಳಿದದ್ದೇ ತಪ್ಪಾಯಿತು
ಪ್ರಿಯೆ ನಿನ್ನ ಪ್ರೀತಿಯ
ಹೊಳೆಯಲ್ಲಿ
ನಿತ್ಯ ಬೇಯುತ್ತಿದ್ದೇನೆ
ಈಗ ವಿರಹದ ಉರಿಯಲ್ಲಿ.

*ಐಕ್ಯ(ಲೀನ)*

ಅವಳ ಎದೆ (ಗೂಡಲ್ಲಿ)ಮೇಲೆ
ನಾನು ಬಂಗಾರದ
ತುಂಡು
ಈ ಬಾಹುಗಳ ನಡುವೆ
ಅವಳು ಬಾಳೆಯ
ದಿಂಡು
ಒಲವಲ್ಲಿ ನಾವು ಐಕ್ಯಗೊಂಡು.

*ಅಶಾಶ್ವತ*

ದಿನಬಿಡದೆ ದೇವರ ಸ್ಮರಿಸಿದ
ಕನಕ,ಪುರಂದರರಿಲ್ಲ,ಅಕ್ಕ,ಬಸವರಿಲ್ಲ
ಗುರುರಾಜ,ಘಂಟಸಾಲರಿಲ್ಲ
ಗುಡಿ,ಚರ್ಚು,ಮಸೀದಿ,ಕಟ್ಟಿಸಿದ
ರಾಜ,ಪಾದ್ರಿ,ಮಹಮದೀಯರಿಲ್ಲ
ಎಂದಮೇಲೆ ಅಲ್ಪರಾದ ನಾವು
ಅಶಾಶ್ವತರಲ್ಲವೇ.

ಕೃಷ್ಣಮೊರ್ತಿಅಜ್ಜಹಳ್ಳಿ

Rating
No votes yet