*ಪ್ರೀತಿಯ ಹೊಳೆಯಲ್ಲಿ*

*ಪ್ರೀತಿಯ ಹೊಳೆಯಲ್ಲಿ*

ನೀ ಬಾ ಎಂದು ಹೇಳಿದ್ದೆ
ಆಲದ ಮರದ ಕಡಿ(ಕಡೆ)
ಆದರಾಗ ಬರುತ್ತಿತ್ತು ತುಂತುರು ಜಡಿ(ಮಳೆ)
ಆ ಮಳೆಯಲ್ಲೂ ನಾ ಬರುತ್ತಿದ್ದಾಗ ಓಡಿ
ನಗುತ್ತಿದ್ದವು ಮಳೆಹನಿ
ನೀನಿಲ್ಲದಿದ್ದರೂ ನೆನೆವ ನನ್ನ ನೋಡಿ
ನಿನ್ನ ಮಾತದೇನು ಮೋಡಿ
ಮಾತುತಪ್ಪದ ನನ್ನ ನೀ ಮಳೆಯಲ್ಲಿ ನೆನೆಸಿ
ಮನೆಯಲ್ಲಿ ಕೂರಬಹುದೇ
ನನ್ನ ಬಯಸಿ
ಪ್ರೀತಿಸುವುದು ಎಂದರೆ ನೀ ಏನೆಂದುಕೊಂಡೆ
ಅದು ನಿನ್ನ ಕೈಲಿರುವ ಚಂಡೇ
ನಾ ಎಂದೂ ನೆನೆದವನಲ್ಲ ಮಳೆಯಲ್ಲಿ
ಇಂದು ಕೊಚ್ಚಿ ಹೋಗುತ್ತಿದ್ದೇನೆ
ನಿನ್ನ ಪ್ರೀತಿಹೊಳೆಯಲ್ಲಿ

ಕೃಷ್ಣಮೊರ್ತಿಅಜ್ಜಹಳ್ಳಿ

Rating
No votes yet