"ರಾಜಾ ಬಂಧನ"

"ರಾಜಾ ಬಂಧನ"

            ಮಾಜಿ ಸಚಿವ ಎ. ರಾಜಾ ಬಂಧನ ಒಂದು ರಾಜಾ ಬಂಧನವೇ ಹೌದು; ಇಂಗ್ಲಿಇಷ್‌ನಲ್ಲಿ ಹೇಳುವಂತೆ Great!


            ತಾವು ಆಯ್ಕೆಯಾದ ಸಂಸತ್ತೇ ಇನ್ನೂ ಅಸ್ತಿತ್ವದಲ್ಲಿರುವಾಗಲೇ, ತಾವು ದರ‍್ಬಾರು ನಡೆಸಿದ ಅದೇ ಸರಕಾರ ಮಂತ್ರಿಮಂಡಲಗಳು ಇನ್ನೂ ಜಾರಿಯಿರುವಾಗಲೇ, ಲಂಚದ ಆರೋಪಿ ಮಾಜಿ ಮಂತ್ರಿ, ಕ್ರಿಮಿನಲ್ ಆರೋಪದ ಮೇಲೆ ಬಂಧಿತರಾದದ್ದು, ಪ್ರಜಾಸತ್ತೆಯ ಸಮಾಧಾನದ ನಿಟ್ಟುಸಿರೆನ್ನಬಹುದು. ಇದು, ಮಾಹಿತಿ ಹಕ್ಕು ಕಾಯ್ದೆ, ಎಚ್ಚೆತ್ತಿರುವ ಮಾಧ್ಯಮ ಮತ್ತು ವ್ಯಾಪಕ ಸಂಪರ್ಕ ಕ್ರಾಂತಿಯ ಧನ್ಯತೆಯೂ ಹೌದು! ತಾವು ಮಾಡಿದ ಪಾಪ, ತಮ್ಮ ಅಧಿಕಾರವಧಿಯಲ್ಲಿರಲಿ, ಇಡೀ ಜೀವಿತಾವಧಿಯಲ್ಲೇ ಫಲ ನೀಡದಂತೆ ಆಡಳಿತದಲ್ಲಿ ನಿಧಾನವನ್ನೇ ಪ್ರಧಾನ ಮಾಡಿಕೊಳ್ಳುವ ಹೇಬ್ರೆಸೀ ರಾಜಕೀಯವೇ ಇನ್ನಾದರೂ ಎದ್ದೇಳಬೆಕಾಗಿದೆ; ಈ ರಾಜ್ಯ, ಮತ್ತಿತರ ರಾಜ್ಯಗಳ ಮುಖ್ಯಮಂತ್ರಿ ಮತ್ತವರ ಚೇಲ-ಬಾಲಗಳಿಗೂ ಇದು ಅಲಾರಾಂ ಆದೀತೇ?!


 

Rating
No votes yet

Comments