ನನ್ನೂರಿನ ನುಡಿ ಜಾತ್ರೆಗೆ ಸ್ಪಂದಿಸದ ರಾಜಕಾರಣಿಗಳಿಗೆ, ಕನ್ನಡ ಸಂಘಗಳಿಗೆ ನನ್ನದೊಂದು ಧಿಕ್ಕಾರ.

ನನ್ನೂರಿನ ನುಡಿ ಜಾತ್ರೆಗೆ ಸ್ಪಂದಿಸದ ರಾಜಕಾರಣಿಗಳಿಗೆ, ಕನ್ನಡ ಸಂಘಗಳಿಗೆ ನನ್ನದೊಂದು ಧಿಕ್ಕಾರ.

ಯಾಕೋ ಗೊತ್ತಿಲ್ಲ , ಬೆಳಿಗ್ಗೆಯಿಂದಲೇ ಮನಸ್ಸು ಕೋಪದಿಂದ ಕುದಿಯುತ್ತಿದೆ, ಕೋಪವನ್ನು ಯಾರ ಮೇಲೆ ತೀರಿಸಬೇಕೆಂದುತಿಳಿಯದಾಗಿದೆ.
ಬರಹ ಬರೆಯುವ ಸಮಯಕ್ಕೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಅರ್ಧ ಮುಗಿದಿರುತ್ತಿದೆ. ಇಡೀ ಬೆಂಗಳೂರೇ ಎದ್ದುನಿಂತು ಆಚರಿಸಬೇಕಾದ ನಮ್ಮ ನುಡಿ ಹಬ್ಬ ಬರೀ ಬಸವನಗುಡಿ ಸುತ್ತ ಮುತ್ತಲಿನ ಪ್ರದೇಶಕ್ಕೆ ಸಿಮೀತವಾಯಿತೆ ಎಂಬ ಭಾವನೆಮೂಡುತ್ತಿದ್ದೆ. ಬೇರೆ ಜಿಲ್ಲೆಗಳಲ್ಲಿ ನಡೆದ ಸಮ್ಮೇಳನವನ್ನು ನೋಡಿರುವ ನನಗೆ, ನನ್ನ ಬೆಂಗಳೂರು ಹಬ್ಬಕ್ಕೆ ಇಂದು ಸಿಂಗಾರವಾಗುತ್ತೆನಾಳೆ ಸಿಂಗಾರವಾಗುತ್ತೆ ಎಂದು ಕಾತುರದಿಂದ ಕಾದ ನನಗೆ ನಿರಾಶೆಯ ಕಾರ್ಮೋಡ ಕವಿದಿದೆ, ಮನಸ್ಸು ಪ್ರಕ್ಷುಬ್ದವಾಗಿದೆ.
ಬರಹದ ಮೂಲಕ ಖಂಡಿತ ನಾನು ಸಾಹಿತ್ಯ ಪರಿಷತ್ತನ್ನು ದೂಷಿಸುತ್ತಿಲ್ಲ. ನನ್ನ ಪ್ರಶ್ನೆ ನಾವು ಬೆಂಗಳೂರಿಗರು ನಮ್ಮ ನುಡಿಹಬ್ಬಕ್ಕೆ ಸ್ಪಂದಿಸದಷ್ಟು ಜಡತ್ವ ಬಂದಿದೆಯೇ.
ರಾಜಕೀಯ ಸಮಾವೇಶಗಳಿಗೆ ನೆಲಮಂಗಲದಿಂದ ಹೊಸೂರ್ ವರೆಗೂ ತಮ್ಮ ಪಕ್ಷದ ಬಾವುಟ ಮತ್ತು ಕಟ್ ಔಟ್ ಗಳಿಂದಸಿಂಗರಿಸುವ ಪಕ್ಷಗಳು ನುಡಿ ಜಾತ್ರೆಗೆ ನಗರವನ್ನು ಸಿಂಗಾರ ಮಾಡದಷ್ಟು ಉಪೆಕ್ಷೆಯೇ.
ನವೆಂಬೆರ್  ತಿಂಗಳ ನಂತರ ನಾಲ್ಕು ಬೀದಿಗೆ ಒಂದೊಂದು ರಾಜ್ಯೋತ್ಸವ ಮಾಡುವ ನಮ್ಮ ಬೆಂಗಳೂರಿನ ಕನ್ನಡ ಸಂಘಗಳುನಮ್ಮೂರಿನ ನುಡಿ ಜಾತ್ರೆಗೆ ಒಂದು ಬಾವುಟ ಹಾರಿಸಿ ನಗರವೆಲ್ಲ  ಹಬ್ಬದ ವಾತಾವರಣ ಸೃಷ್ಟಿಸುವುದನ್ನು ಮರೆತೆವೆ.
ಸಂಕ್ರಾಂತಿಗೆ , ಹೊಸ ವರುಷಕ್ಕೆ ಮತ್ತು ಯುಗಾದಿಗೆ, ಜನತೆಗೆ ಶುಭ ಕೋರಲು ಆಳೆತ್ತರದ ಕಟ್ ಔಟ್ ನಿಲ್ಲಿಸುವ ಪುಡಿರಾಜಕಾರಣಿಗಳು ಮತ್ತು ಧೀಮಂತ ರಾಜಕಾರಣಿಗಳು ನಮ್ಮ ನುಡಿ ಹಬ್ಬಕ್ಕೆ ಶುಭ ಕೋರುವ ಒಂದು ಬ್ಯಾನರ್ ಹಾಕಲುಆಗದಷ್ಟು ಬಡವರಾದರೆ.
ರಾಜ್ಯದ ನಾನ ಬಾಗಗಳಿಂದ ಬಂದಿಳಿದ ಸಾಹಿತ್ಯಾಭಿಮಾನಿಗಳಿಗೆ ಮೆಜೆಸ್ಟಿಕ್ ಸುತ್ತ ಮುತ್ತಲಿನ ವಾತಾವರಣವನ್ನು ನೋಡಿ ಊರಲ್ಲಿ ನಿಜವಾಗಲು ಸಮ್ಮೇಳನ ನಡೆಯುತ್ತಿದೆಯೇ ಎಂದು ಅನುಮಾನ ಬರುವಷ್ಟು ಬೋಳು ಬೋಲಾಗಿದೆ.
ಇನ್ನು ಮೂರು ದಿನಗಳು ನುಡಿ ಜಾತ್ರೆಯಲ್ಲಿ ಬೇಕಾದಷ್ಟು ಗೋಷ್ಠಿಗಳು ನಡೆಯಬಹುದು ಹೊಸ ಹೊಸ ಚಿಂತನೆಗಳುನಡೆಯಬಹುದು, ಬೆಂಗಳೂರಿನ ಸಮ್ಮೇಳನ ಮತ್ತು ಸಮ್ಮೇಳನವನ್ನು ಬೆಂಗಳೂರಲ್ಲಿ ನಡೆಸುವ  ಉದ್ದೇಶ ವಿಪಲವಾಗಿದೆ, ಇದಕ್ಕೆಖಂಡಿತ ಸಾಹಿತ್ಯ ಪರಿಷತ್ತು ಕಾರಣವಲ್ಲ. ಇದಕ್ಕೆ ಕಾರಣ ನಾವೇ, ಬೆಂಗಳೂರಿಗರೇ , ಹೌದು ನಾವೇ ಕಾರಣ.
ಬೆಳಿಗ್ಗೆ ಈಗೆ ನನ್ನ ಸ್ನೇಹಿತನೊಂದಿಗೆ ಮಾತನಾಡಬೇಕಾದರೆ, ಸಿಂಗಾರ ಮತ್ತು ಆಡಂಬರದಿಂದ ಏನು ಉಪಯೋಗ ಎಂದುಕೇಳಿದ ?
ಇದು ಆಡಂಬರವಲ್ಲ , ಹಬ್ಬಕ್ಕೆ ನಮ್ಮ ಮನೆ ಮತ್ತು ಕೇರಿಗಳನ್ನು ಸಿಂಗರಿಸಿಕೊಂಡು, ನುಡಿ ಜಾತ್ರೆಯಲ್ಲಿ ನಾವು ಪಾಲುದಾರರುಎಂದು ತೋರಿಸುವ ಒಂದು ವಿಧಾನ, ಬೆಂಗಳೂರಿನ  ಶೇಕಡಾ ೩೫% ಕನ್ನಡಿಗರು ( ಅಂಕಿ ಅಂಶ ವಾರ್ತೆಗಳು ) ಮಿಕ್ಕ ೬೫% ಇತರ ಬಾಷೆಯ ಜನಕ್ಕೆ ಒಂದು ಕನ್ನಡ ಅಲೆಯನ್ನು ಸೃಷ್ಟಿಸಿ ಅವರನ್ನು ನಮ್ಮ ಬಾಷೆಯೊಳಗೆ ಬರಮಾಡಿಕೊಳ್ಳುವ ವಿಧಾನ ಮತ್ತುನಮ್ಮ ಭಾಷೆಯ ಬಗ್ಗೆ ಅವರಲ್ಲಿ ಒಂದು ಸಣ್ಣ ಕುತೂಹಲ ಮೂಡಿಸುವ ಪ್ರಯತ್ನ ಅಷ್ಟೆ.
ನನ್ನೂರಿನ ನುಡಿ ಜಾತ್ರೆಗೆ ಸ್ಪಂದಿಸದ ರಾಜಕಾರಣಿಗಳಿಗೆ, ಕನ್ನಡ ಸಂಘಗಳಿಗೆ ನನ್ನದೊಂದು ಧಿಕ್ಕಾರ.
ಬರಹವನ್ನು ಖಂಡಿತ ಭಾವಾವೇಶದಲ್ಲಿ ಬರೆದಿರುವೆ, ತಪ್ಪುಗಳಿದ್ದರೆ ಕ್ಷಮಿಸಿ




Rating
No votes yet

Comments