ಏಕಾಂಗಿ......

ಏಕಾಂಗಿ......

ಬರಹ



ಆ ದಿನ ನೀನಿದ್ದೆ ಬಾಳಿನಲಿ
ಮುಂಜಾನೆಯ ಎಳೆ ಕಿರಣದಂತೆ,
ಹುಣ್ಣಿಮೆ ಬೆಳದಿಂಗಳಿನಂತೆ,
ನೆತ್ತಿಗೆ ನೆರಳಿನಂತೆ,
ಹಣೆಗೆ ಸಿಂಧೂರದಂತೆ.....

ಮರುಭೂಮಿಯಂತಿದ್ದ ಈ ಬಾಳಿನಲಿ
ಕಲ್ಪನೆಯ ನೆಪದಲ್ಲಿ
ನೀನಿದ್ದೆ ನನ್ನೊಡನೆ,
ನನ್ನಂತೆ,ಆ ಮುಂಗಾರಿನಂತೆ ,
ಚಿಗುರೊಡೆದ ಮರದಂತೆ,
ಅದರಲ್ಲಿನ ಹಕ್ಕಿಯಂತೆ...

ನನ್ನ ಮನದ ಏರಿಳಿತವ ತಿಳಿದು ನೀನಿದ್ದೆ,ಅಂದು,
ಮಲ್ಲಿಗೆಯಂತೆ ,ಮುದನೀಡುವ ಸಂಗೀತದಂತೆ,
ಜಟಿಹಿಡಿದ ಮಳೆಯಂತೆ...

ಆದರೆ,,,,
ಇಂದು ,
ಕಾಣೆಯಾಗಿರುವೆ ಮಾಯಾಜಿಂಕೆಯಂತೆ.
ಬೇಡದ ಆಸೆಗಳ ಮನದಲ್ಲಿ ಬಿತ್ತಿ,
ಅದು ಚಿಗುರೊಡೆವ ಮುನ್ನ
ಸನಿಹ ತೊರೆದು ಸರಿದೆ ಸಹಿಸಲಾರದಷ್ಟು ದೂರಕ್ಕೆ.

ಇಂದು ..
ನೀನಿಲ್ಲದೆ, ನೀನಿಲ್ಲದೆ,
ನನ್ನ ಬಾಳು,
ಚುಕ್ಕಿಯಿಲ್ಲದ ಆಕಾಶದಂತೆ,
ಚಂದ್ರನಿಲ್ಲದ ಪೌರ್ಣಿಮೆಯಂತೆ,
ಎಲ್ಲವೂ ಇದ್ದು, ಇಲ್ಲದಂತೆ .
ಒಮ್ಮೊಮ್ಮೆ
ನಾ ಏಕಾಂಗಿಯಂತೆ!!!