ನಿನ್ನೆ ನಾಳೆಗಳ ಮಧ್ಯೆ
ಬಿರಿವ ಮೊಗ್ಗಿನ ತೆರದಿ ಜೀವನ
ವರಳಿ ನಿಲುವ೦ದವನು ಬಣ್ಣಿಸ
ಲರಿಯೆನೆನ್ನುವ ನಿಜದ ವಾಕ್ಯವನಿರಿಸಿ ಮನದೊಳಗೆ
ಮರೆಯದಿರುತಲಿ ನಿನ್ನೆಯನುಭವ
ಪರಿಪರಿಯ ಯೋಜನೆಗಳಲರುತ
ಬರುವ ನಾಳೆಗೆ ಕಟ್ಟುವೆನು ಹೊಸ ಕನಸ ಗೋಪುರವ
ದಡವ ತನುವನು ಬಿರುಸಿನಿ೦ದಲಿ
ಕಡಲ ಅಲೆಗಳು ಬಡಿಯುವ೦ದದಿ
ಛಡಿಯ ಏಟುಗಳೆನ್ನ ಮನದೊಡಲನ್ನು ಒಡೆಯುತಿರೆ
ಷಡುರಸವ ಸಮಮನದಿ ಸವಿಯದೆ
ವಡಬದಗ್ನಿಯ ಶಾಖದುರಿತಕೆ
ಅಡಗದೆಯೆ ಎದುರಿಸಿದೆ ಎದೆಯನು ಸೆಟೆದು ಬದುಕಿನಲಿ
ಕಳೆದ ನಿನ್ನೆಯ ಬೀಳುಗೊಡುತಿರೆ
ಕಳೆಯಗೂಡುತಲಿರುವ ನಾಳೆಯು
ಹೊಳೆವ ತಾರಕೆಯ೦ತೆ ಸನಿಹಕ್ಕಾಗಮಿಸುತಿಹುದೋ
ಮಳೆಯ ಬರಿವಿಕೆಗೆದುರು ನೋಡುವ
ಇಳೆಯ ತೆರದಲಿ ಕಾದು ನಿ೦ತಿಹೆ
ಹಳೆಯ ನೆನಪುಗಳಿಳಿಯಲೆನ್ನೊಳಗೆ೦ಬ ಜಪ ಜಪಿಸಿ
ಅತಿಸುಲಲಿತದ ರಾಜಮಾರ್ಗದಿ
ಗತಿಸಲೀ ಜೀವನದ ವಾಹನ
ಮತಿಯ ಮಡುವದೊ ತು೦ಬಿ ತುಳುಕಲಿ ಸಾರಸುಧೆ ಸೇರಿ
ಮಿತಿಯ ಮೀರದ ವೇಗದಲಿ ಉ
ನ್ನತಿಯ ಗುರಿಯನೆ ಮನದೊಳಿಡುತಲಿ
ಕುತುಕದಲಿ ಅನುರಣನಗೈದಿಹೆ ಗಮನ ಗಮಕವನು
ನಿರತ ನಿರವಿಸುತಿರಲು ಸೋಜಿಗ
ಭರಿತ ಭವಿತವ್ಯವನು ನಿಮಿಷವು
ಅರಸುತಿಹೆನತಿ ಭೂರಿಭಾಗ್ಯವ ಸತತ ಇಹದೊಳಗೆ
ಭರತಿಯಲಿ ಮುತ್ತಿರುವ ಸುರಭಿಯ
ತೆರದ ಸುರುಚಿರ ಸ೦ಪದವ ನಾ
ಮರೆತೆನೇ ಭು೦ಜಿಸಲು ನೆನೆಯುತ ನಿನ್ನೆ ನಾಳೆಗಳ
ಕಷ್ಟವೆನಿಸುವ ಪದಗಳ ಅರ್ಥ :
ಅಲರು = ವಿಕಸಿಸು
ಅನುರಣನ = ಅನುಸರಿಸಿ ಮು೦ದುವರಿದ ಧ್ವನಿ
ಕುತುಕ = ಕುತೂಹಲ
ಗಮಕ = ಕ್ರಮ
ಸುರುಚಿರ = ಶೋಭಿಸುವ
ನಿರವಿಸು = ನಿರೀಕ್ಷಿಸು
ವಡಬದಗ್ನಿ = ಸಮುದ್ರದೊಳಗಣ ಬೆ೦ಕಿ
Comments
ಉ: ನಿನ್ನೆ ನಾಳೆಗಳ ಮಧ್ಯೆ
In reply to ಉ: ನಿನ್ನೆ ನಾಳೆಗಳ ಮಧ್ಯೆ by nagarathnavina…
ಉ: ನಿನ್ನೆ ನಾಳೆಗಳ ಮಧ್ಯೆ
ಉ: ನಿನ್ನೆ ನಾಳೆಗಳ ಮಧ್ಯೆ
In reply to ಉ: ನಿನ್ನೆ ನಾಳೆಗಳ ಮಧ್ಯೆ by gopaljsr
ಉ: ನಿನ್ನೆ ನಾಳೆಗಳ ಮಧ್ಯೆ
ಉ: ನಿನ್ನೆ ನಾಳೆಗಳ ಮಧ್ಯೆ
ಉ: ನಿನ್ನೆ ನಾಳೆಗಳ ಮಧ್ಯೆ
In reply to ಉ: ನಿನ್ನೆ ನಾಳೆಗಳ ಮಧ್ಯೆ by partha1059
ಉ: ನಿನ್ನೆ ನಾಳೆಗಳ ಮಧ್ಯೆ
ಉ: ನಿನ್ನೆ ನಾಳೆಗಳ ಮಧ್ಯೆ
ಉ: ನಿನ್ನೆ ನಾಳೆಗಳ ಮಧ್ಯೆ
In reply to ಉ: ನಿನ್ನೆ ನಾಳೆಗಳ ಮಧ್ಯೆ by srimiyar
ಉ: ನಿನ್ನೆ ನಾಳೆಗಳ ಮಧ್ಯೆ
ಉ: ನಿನ್ನೆ ನಾಳೆಗಳ ಮಧ್ಯೆ
In reply to ಉ: ನಿನ್ನೆ ನಾಳೆಗಳ ಮಧ್ಯೆ by Jayanth Ramachar
ಉ: ನಿನ್ನೆ ನಾಳೆಗಳ ಮಧ್ಯೆ
In reply to ಉ: ನಿನ್ನೆ ನಾಳೆಗಳ ಮಧ್ಯೆ by raghumuliya
ಉ: ನಿನ್ನೆ ನಾಳೆಗಳ ಮಧ್ಯೆ