'ನಮ್ಮ ಜೀವನದ ಮುಂಬರುವ ದಿನಗಳು ಬಹುಶಃ ಹೀಗೆ ಇರುತ್ತವೆಯೇ' ?

'ನಮ್ಮ ಜೀವನದ ಮುಂಬರುವ ದಿನಗಳು ಬಹುಶಃ ಹೀಗೆ ಇರುತ್ತವೆಯೇ' ?

ಇವತ್ತಿನ (ಫೆಬ್ರವರಿ, ೪, ಗುರುವಾರದ ಮುಂಬೈ ಮಿರರ್ ಪತ್ರಿಕೆ)  ನೋಡಿದವರಿಗೆ ಇದು ಗೊತ್ತು. ಸುದ್ದಿ ವಿಚಿತ್ರವೆಂದು ಬೇರೆ ಹೇಳುವ ಅವಶ್ಯಕತೆಯಿಲ್ಲ.  ’ಅರುಣ್ ನಾಟೇಕರ್’ ಎಂಬ ಯಶಸ್ವಿ ಮೋಟರ್ ಪಾರ್ಟ್ಸ್ ಮಾರುವ ವ್ಯಕ್ತಿ,  ತನ್ನ ೬೦ ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಫ್ಲಾಟ್ ಬೀಗಹಾಕಿಬಂದು ಪಕ್ಕದ ರಸ್ತೆಯ ಫುಟ್ಪಾತ್ ನಲ್ಲಿ ಮಲಗಿ, (ಮುಂಬೈನ ಉಪನಗರ, ಘಾಟ್ಕೋಪರ್ ಪೂರ್ವದಲ್ಲಿ) ತನ್ನ ಮರಣದ ಎದುರುನೋಡುತ್ತಿರುವ ದಾರುಣ ದೃಶ್ಯವನ್ನು ಏನೆಂದು ಹೇಳಬೇಕೋ ತಿಳಿಯುತ್ತಿಲ್ಲ. ನಮ್ಮೆಲ್ಲ ಮುಂದಿನ ದಿಗಳಲ್ಲಿ ಆದರೂ ಆಗಬಹುದಾದಂಥಹ ಒಂದು ಉದಾಹರಣೆ ಇದೆಂದು ಹೇಳಲೂ ಅಡ್ಡಿಯಿಲ್ಲದಂತಹ ಪರಿಸ್ಥಿತಿ ನಿರ್ಮಣವಾಗಿದೆ. ’ಇಂದಿನ ದಾರುಣ ಪರಿಸ್ಥಿಗೆ ಯಾರು ಕಾರಣ’ ೧ ವಾರದಿಂದ, ಒಳ್ಳೆಯ ಇಂಗ್ಲೀಷ್ ಭಾಷೆಯಲ್ಲಿ ಮಾತಾಡುವ, ಸಂಗೀತದಲ್ಲಿ ಅತ್ಯಾಸಕ್ತಿಯಿರುವ, ಎಂದಾದರೊಂದು ದಿನ ಒಂದು ಏರೋಪ್ಲೇನ್ ನ್ನು ಓಡಿಸುವ ಆಸೆಯುಳ್ಳ, ಈ  ಮ್ಯಾಥೆಮೆಟಿಕ್ಸ್ ಪದವೀಧರ,  ಪುಟ್ಪಾತ್ ನಲ್ಲಿರಲು ಕಾರಣ, ಒಂಟಿಯಾಗಿ ತಮ್ಮ ಫ್ಲಾಟ್ ನಲ್ಲಿ ತಮ್ಮ ಅಸಹಾಯಕತೆಯ ಸ್ಥಿತಿಯಲ್ಲಿ  ಮರಣಿಸಿದರೆ, ಹೊರಗಿನವರಿಗೆ, ವಿಷಯ ತಿಳಿಯಲು ದಿನಗಳೇ ಬೇಕಾಗುತ್ತವೆ. ಹಾಗೆ ನಲುಗಿ, ಸತ್ತು ಅಸಹ್ಯ ದುರ್ನಾತದ ಹೆಣವಾಗಲು ಅವರಿಗೆ ಮನಸ್ಸಿಲ್ಲ. 


’ನಾಟೇಕರ್ ರ, ಸ್ವತಂತ್ರ್ಯ ಜೀವನಶೈಲಿ, ಯ ಪರಿಭಾಷೆ’  


ಬಾಲ್ಯದಿಂದಲೂ ಸ್ವತಂತ್ರಜೀವನ, ಯಾರ ಹಂಗೂ ಸಹಾಯ ಆಗ ಬೇಕಿರಲಿಲ್ಲ. ಅದೇ ನಿಜವೆಂಬಂತೆ ಜೀವನನಿರ್ವಹಣೆ ನಡೆಯಿತು. ಪಾರ್ಕಿನ್ಸನ್ ರೋಗದಿಂದ ನರಳುತ್ತಿರುವ ನಾಟೇಕರ್ ಗೆ  ಆದರೆ, ಈಗ ೭೨ ವರ್ಷದ ಪ್ರಾಯದಲ್ಲಿ ಮೇಲೇಳಲೂ ಸಾಧ್ಯವಿಲ್ಲ. ಯಾರಾದರೊಬ್ಬರ ಸಹಾಯವಿಲ್ಲದೆ ಏನೂ ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.
’ಹಣವಂತರ ಮನೆಯಿಂದ ಬಂದವರು’ 


ಚೆಂಬೂರಿನ ಜಯಾ ಅಪಾರ್ಟ್ಮೆಂಟ್ ವಾಸಿ ನಾಟೇಕರ್, ಮೊದಲಿಂದಲೂ ಒಳ್ಳೆಯ ಬಂಗೆಲೆಯಿದ್ದು ದೊಡ್ಡವರಾದವರು. ಸ್ಥಿತಿವಂತ ಬಿಝಿನೆಸ್ ಪರಿವಾರಕ್ಕೆ  ಸೇರಿದವರು. ಇಬ್ಬರು ತಮ್ಮಂದಿರೂ, ಇಂಜಿನಿಯರ್ ಆಗಿದ್ದಾರೆ. ಒಬ್ಬ ಸೋದರಿ ಪುಣೆಯಲ್ಲಿ. ಅವರೆಲ್ಲಾ ಮದುವೆಯಾಗಿ ತಂತಮ್ಮ ಪರಿವಾರದ ಜೊತೆ ಇದ್ದಾರೆ. ಆದರೆ ಹಿರಿಯ ನಾಟೇಕರ್ ಮದುವೆಯಾಗಲು ನಿರಾಕರಿಸಿ ಒಬ್ಬಂಟಿಗನಾಗಿ ಯಾರ ನಂಟನ್ನು ಹೆಚ್ಚಾಗಿ ಇಟ್ಟುಕೊಳ್ಳದೆ ಜೀವನ ಸಾಗಿಸುತ್ತಾ ಬಂದಿದ್ದಾರೆ. ಅವರಿಗೆ ಯಾರೂ ಬೇಡ. ಯುವಕಾವಸ್ಥೆಯಲ್ಲಿ ಎಲ್ಲವೂ ಸರಿಯೆಂಬಂತೆ ಕಾಣಿಸುತ್ತಿತ್ತು.  ನಾಟೇಕರ್ ಒಬ್ಬ ತಮ್ಮ ಮದುವೆಯೊಂದರಲ್ಲಿ ವ್ಯಸ್ತರಾಗಿದ್ದು ಬಿಡುವಿರಲಿಲ್ಲ. ಇನ್ನೊಬ್ಬ ತಮ್ಮನ ಆರೋಗ್ಯ ಅಷ್ಟೇನೂ ಸಮರ್ಪಕವಾಗಿಲ್ಲ. ತಂಗಿಯೂ ಪುಣೆಯಿಂದ ಬರಬೇಕು. ಯಾರಮನೆಯಲ್ಲೂನಿಲ್ಲಲು ಸಹಾಯಪಡೆಯಲು ನಿರಾಕರಿಸುವ ನಾಟೇಕರ್ ಹೊಂದಿಕೊಳ್ಳದೆ ಈ ಪರಿಸ್ಥಿಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಸ್ವಯಂಕೃತ ಅಪರಾಧವಾಗಿದೆ. ಇದನ್ನು ಕಂಡು ಬೇಸರಗೊಂಡು ತಮ್ಮ ಸಹಾಯಹಸ್ತವನ್ನು ಕೊಟ್ಟಿದ್ದಾರೆ. ಘಾಟ್ಕೊಪರ್ ನಲ್ಲಿನ ಒಬ್ಬ ಬಿಝಿನೆಸ್ ಮ್ಯಾನ್, ಸಮೀರ್ ಮೆಹ್ತ,  ಮಲಗಲು ಒಂದು ಜಮಖಾನ ಕೊಟ್ಟು ಊಟ ತಿಂಡಿಯನ್ನು ತಿನ್ನಿಸಲು ಸಹಕರಿಸುತ್ತಿದ್ದಾರೆ. ಅವರಿಗೂ ಬಿಡುವಿಲ್ಲ 


’ಮನೆಯ ಸದಸ್ಯರಿಗೂ ಮುಜುಗರ’  


ಮನೆಯ ಪಡೋಸಿ ಪಿನಾಕ್ ಮೆಹತಾ ನಾಟೇಕರ್ ರನ್ನು ಚೆನ್ನಾಗಿ ಬಲ್ಲರು. ಘಾಟ್ಕೋಪರ್ ನ, ರಾಜಾವಾಡಿ ಮತ್ತು ಪರೇಲ್ ನಲ್ಲಿರುವ, ಕೆ.ಇ,ಎಮ್ ಆಸ್ಪತ್ರೆಗೆ ಸೇರಿಸಿದಾಗ, ಔಷಧಿ ಕೊಡುವ ವೈದ್ಯರು ಆಸ್ಪತ್ರೆಯಲ್ಲಿ ದಾಖಲಾತಿಗೆ ಸಮ್ಮತಿ ನೀಡುವುದಿಲ್ಲ. ಈ ಕಾಯಿಲೆಗೆ ಮನೆಯಲ್ಲಿ ಶುಶ್ರೂಷೆಯ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಮೆಹ್ತಾ ಪೋಲೀಸ್ ಹೆಲ್ಪ್ ಲೈನ್ ಬಳಸಿ ಆಸ್ಪತ್ರೆಗೆ ಸೇರಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ರಾಜಾವಾಡಿ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್, ’ಮನೋಹರ್ ಭಾಸ್ಕರ್’ ಹೇಳುವಂತೆ ಇಂತಹ ಕೇಸ್ ಗಳನ್ನು ನಾವು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವ ಸೌಲಭ್ಯ ಹೊಂದಿಲ್ಲ. ಕೇವಲ ಆಸ್ಪತ್ರೆಯಲ್ಲೇ ಮಾತ್ರ ಉಪಚಾರಮಾಡಬೇಕಾದ ಕೇಸ್ ಗಳನ್ನು ಮಾತ್ರ ನಾವು ಬರಮಾಡಿಕೊಳ್ಳುತ್ತೆವೆ. ಮೆನೆಯಲ್ಲಿಯೇ ಉಪಚಾರ ಮಾಡುವುದೊಳ್ಳೆಯದು. ’ಡಾ ಮಾರಿಯೊ ಬಾರೆಟ್ಟೊ’ ಹೇಳುವಂತೆ ಪರ್ಕಿನ್ಸನ್ ಕಾಯಿಲೆಯಿಂದ ನರಳುವವರು ಬಡವರಾದರೆ ಧನಸಹಾಯಮಾಡಲು ಸೌಕರ್ಯಗಳನ್ನು ಕಲ್ಪಿಸಬಹುದು. ಅವರಿಗೆ ಕಾಯಿಲೆಯ-ಜೀವನಕ್ಕೆ ಹೊಂದಿಕೊಂಡು ಜೀವನ ನಿರ್ವಹಣೆ ಮಾಡುವ ಉಪಾಯವನ್ನು ಹೇಳಬಹುದಷ್ಟೆ.
ಮನುಷ್ಯ ಅಂದು-ಇಂದು-ಎಂದೆಂದಿಗೂ ಸಾಮಾಜಿಕ ಪ್ರಾಣಿ’



ಸಮಾಜದಲ್ಲಿ ಬದುಕುವಾಗ ನಾವು ನೆರೆಹೊರೆಯವರಿಗೆ ಸಹಾಯಮಾಡುವ ಸ್ವಭಾವವನ್ನು ಚಿಕ್ಕಂದಿನಿಂದ ಮಕ್ಕಳಿಗೆ ತಿಳಿಯಹೇಳಬೇಕು. ಸ್ವಾತಂತ್ರ್ಯ ಜೀವನ ಎಂದರೇನು ಎನ್ನುವುದನ್ನು ಸರಿಯಾಗಿ ಬೋಧಿಸುವುದೊಳ್ಳೆಯದು. ಬೇರೆಯವರಿಗೆ ಹೊರೆಯಾಗಬಾರದು ಎನ್ನುವ ಮಾತು ಅಕ್ಷರಶಃ ಸರಿ. ಆದರೆ, ಸಮಯಬಂದಾಗ ಕೆಲವು ಸಹಾಯಮಾಡುವುದು ಅಗತ್ಯವಿದ್ದಾಗ, ಅಗತ್ಯಕ್ಕಿಂತಾ ಹೆಚ್ಚು  ತೊಂದರೆ ಕೊಡದಂತೆ, ಸಹಾಯ ಪಡೆಯುವುದು ಒಂದು ಸಾಮಾಜಿಕ ಆವಶ್ಯಕತೆ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯ. 


 


-ಚಿತ್ರ ಹಾಗೂ ಸಂಬಂಧಿಸಿದ ವರದಿ, ’ಮುಂಬೈಮಿರರ್ ಪತ್ರಿಕೆಯ ಸೌಜನ್ಯ”ದಿಂದ. 


 

Comments