ರಾಧ -ಕೃಷ್ಣ

ರಾಧ -ಕೃಷ್ಣ

ಕವನ

ರಾಧೇ  ದ್ವಾರಕೆಗೆ  ಏಕೆ  ಬರಲಿಲ್ಲ ?
ಕೃಷ್ಣನ   ಒಡಗೂಡಿ  ಏಕೆ  ನಿಲಲಿಲ್ಲ ?
ಪ್ರಶ್ನಿಸಲು   ರಾಧೆಯನೆ ,
ನುಡಿದಳವಳು  ,

ದ್ವಾರಕೆಯಲಿ   ಬ್ರ೦ದಾವನವಿಲ್ಲ      ,
ಯಮುನಾ  ತೀರದ  ಲತೆಗಲಿಲ್ಲ ,
ತಂಪಾದ   ಬೆಳದಿಂಗಳು   ಹರಡಿ  ನಿಂತಿಲ್ಲ ,
ಗೋಪಾ  -ಗೋಪಿಯರಿಲ್ಲ , ಮೊಸರ  ಕುದಿಕೆಗಳಿಲ್ಲ ,
ರಾಜ  ಗಾಂಭೀರ್ಯ  ಕೃಷ್ಣನಲ್ಲಿ ,
ಗೋಕುಲದ   ತು೦ಟಾಟವಿಲ್ಲ.      .

ರಾಜ  ಸಭೆಯಲ್ಲಿ  ದಿನಂಪ್ರತಿ  ಕೊಳಲನೂದುತ  ಕೂಡಲಾರ ,
ಸಂಜೆಯಾದೊಡೆ  ಗೋಪಾ -ಬಾಲರೊಡನೆ  ಕೋಲಾಟ  ಆಡಲಾರ ,
ಸೀರೆ  ಸೆರಗ  ಹಿಡಿದು  ತುಂಟ  ನಗೆ  ಬೀರಿ  ಬೆಣ್ಣೆ  ಬೇಡಲಾರ ,
ತು೦ಟತನಕಿಂತ   ಕರ್ತವ್ಯ  ಹಿರಿದು ,
ತುಂಟ  ಕೃಷ್ಣನ  ಜೊತೆಗೆ  ತು೦ಟಾಟವಾಡಿದ  ಮನಸು ,
ನಾ  ದ್ವಾರಕೆಯಲಿದ್ದರು  ನೆನೆವುದು   ಬೃಂದಾವನದ  ಕೃಷ್ಣನನು ,
ಅದಕೆ , ಉಳಿದಿಹೆನು  ಬೃಂದಾವನದಲಿ ,
ನನ್ನ  ಮನದ  ಕೃಷ್ಣನ  ಒಡಗೂಡಿ.

                    --ಗೀತಾ

Comments