ಪ್ರೀತಿಯಲ್ಲಿರುವೆ ನೀನು
ಕವನ
ಆ ನೋವೆಂಬ ಕತ್ತಲಲಿ
ಸುಖವಾಗಿ ಹೊಳೆಯುವ ನಕ್ಷತ್ರ ನೀನು
ಸದ್ದಿಲ್ಲದೇ ಚೆಲಿಸುವ ಮನದಲಿ
ಮೋಡವಾದೆ ನೀನು
ಪ್ರೀತಿಯ ಬೆಳಕಿನ ಹಸಿವನ್ನು ನೀಗಿಸಲು
ಮೂಡಿದ ಚಂದ್ರ ನೀನು
ಮನದ ಮಾತು ತಿಳಿಯಲು ಆಳ ಹೃದಯ
ಹೊಂದಿದ ಕಡಲು ತೀರ ನೀನು
ನೀಲ ಸ್ವಚ್ಚಂದ ಪ್ರೀತಿ ಭಾವ ತುಂಬಿರುವ
ವಿಶಾಲ ಮನದ ಗಗನ ನೀನು
ಜೀವದ ದೀಪವನ್ನು ಎದೆಯಲ್ಲಿ ಬಚ್ಚಿಟ್ಟು
ಜಗ ಬೆಳಗುವ ಮಣ್ಣಿನ ಭೂಮಿ ನೀನು
ನನ್ನ ಹೃದಯದಲಿ ಕೇಳುವ ಬಡಿತದ
ಪ್ರೀತಿ ಉಸಿರಿನ ಪ್ರಿಯತಮ ನೀನು
Comments
ಉ: ಪ್ರೀತಿಯಲ್ಲಿರುವೆ ನೀನು
In reply to ಉ: ಪ್ರೀತಿಯಲ್ಲಿರುವೆ ನೀನು by karthik kote
ಉ: ಪ್ರೀತಿಯಲ್ಲಿರುವೆ ನೀನು