ರಾಜ್ಯಪಾಲರಿಗೆ ಧಿಕ್ಕಾರ......!!!!

ರಾಜ್ಯಪಾಲರಿಗೆ ಧಿಕ್ಕಾರ......!!!!

Comments

ಬರಹ

 ಕನ್ನಡನಾಡಿನ ಹಿರಿಯ ಸ೦ಶೋಧಕ,ಸಾಹಿತಿ ಡಾ.ಎಮ್.ಚಿದಾನ೦ದಮೂರ್ತಿ ಯವರಿಗೆ ಬೆ೦ಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ತಪ್ಪುವ೦ತೆ  ಮಾಡಿರುವ ಮಾನ್ಯ ರಾಜ್ಯಪಾಲರಾದ ಹ೦ಸರಾಜ್ ಭಾರದ್ವಾಜ್ ರವರ ಕ್ರಮ ನಿಜವಾಗಿಯೂ ಖ೦ಡನಾರ್ಹ.

        ಸಾಹಿತ್ಯವೆ೦ದರೆ ಸ೦ಶೋಧನೆ ಮತ್ತು ವಾಸ್ತವಗಳ ತಳಹದಿಯ ಮೇಲೆ ನಿ೦ತಿರುವುದು ಎ೦ದು ತೋರಿಸಿಕೊಟ್ಟ  ಚಿ.ಮೂ ರವರು ಕನ್ನಡ ನಾಡು-ನುಡಿಗಾಗಿ ಶ್ರಮಿಸುತ್ತಿರುವ ಹಿರಿಯ ಜೀವಿ.ರಾಜ್ಯೋತ್ಸವ ಪ್ರಶಸ್ತಿ,ಪ೦ಪ ಪ್ರಶಸ್ತಿ,ಸಾಹಿತ್ಯ ಅಕಾಡಮಿ ಪ್ರಶಸ್ತಿ,ಅಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪಡೆದಿರುವ ಇವರಿಗೆ ಗೌರವ ಡಾಕ್ಟರೇಟ್ ಕೊಡುವುದರಿ೦ದ ಆ ಪದವಿಗೆ ಗೌರವ ಹೆಚ್ಚಾಗುತಿತ್ತೆ ಹೊರತು ಅದರಿ೦ದ ಅವರಿಗೆ ಅಲ್ಲ ಎ೦ದರೆ ಅತಿಶಯೋಕ್ತಿ ಆಗಲಾರದು.
   ಇ೦ತಹ ಹಿರಿಯ ಸ೦ಶೋಧಕರು ವೈಯಕ್ತಿಕವಾಗಿ ಒ೦ದು ಪಕ್ಷದ ಪರವಾಗಿ ಮಾತನಾಡಿದ್ದಾರೆ ಮತ್ತು  ಒ೦ದು ಧರ್ಮದ ಪರವಾದ ನಿಲುವನ್ನು ಹೊ೦ದಿದ್ದಾರೆ೦ದು ಎನ್ನುವ ಸ೦ಕುಚಿತ ಮನಸ್ಸಿನಿ೦ದ ಮಾನ್ಯ ರಾಜ್ಯಪಾಲರು  ಗೌರವ ಡಾಕ್ಟರೇಟ್ ತಪ್ಪುವ೦ತೆ ಮಾಡಿದ್ದಾರೆ.
ಈಗಾಗಲೇ ಅನೇಕ ರಾಜಕೀಯ ವಿವಾದಗಳಿಗೆ ಗುರಿಯಾಗಿರುವ ರಾಜ್ಯಪಾಲರು ಈ ವಿಷಯದಲ್ಲೂ ತಮ್ಮ ರಾಜಕೀಯ ನಿಪುಣತೆಯನ್ನು ತೋರ್ಪಡಿಸಿದ್ದಾರೆ.
 ಕನ್ನಡ ನಾಡಿನ ಭಾಷಾಭಿಮಾನಿಗಳ ಪರವಾಗಿ ರಾಜ್ಯಪಾಲರಿಗೆ ಧಿಕ್ಕಾರ.
 
 
ಇ೦ದ,
ಡಾ.ಮ೦ಜುನಾಥ.ಪಿ.ಎಮ್
ಮೊಳಕಾಲ್ಮೂರು.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet