ಒಮ್ಮೆ ನಕ್ಕು ಬಿಡಿ - ೯

ಒಮ್ಮೆ ನಕ್ಕು ಬಿಡಿ - ೯


ನಾಟಕಕಾರ , ಬರಹಗಾರ ಕೈಲಾಸಂ ಆಗಾಗ್ಯೆ ಗೆಳೆಯರ ಮನೆಗೆ ಬರುತ್ತಿದ್ದರು. ಇವರು ಒಂಟಿ ಎಂಬುದು ಗೊತ್ತಿರುವ ಸ್ನೇಹಿತರು ಇವರನ್ನು ಬಿಡದೆ ಊಟಕ್ಕೆ ಎಬ್ಬಿಸುತ್ತಿದ್ದರು. ಒಮ್ಮೆ ಹೀಗೆ ಕೈಲಾಸಮ್ ವಿ.ಸೀ. ಯವರ ಮನೆಗೆ (?) ಬೇಟಿ ನೀಡಿದಾಗ ದಂಪತಿಗಳು ಕೈಲಾಸಮ್ ರವರನ್ನು ಊಟಕ್ಕೆ ಏಳಿ ಅಂದರು. ಆಗ ಒಪ್ಪಿದ ಕೈಲಾಸಮ್ ಹೇಳಿದರು "ನಾನು ಊಟ ಮಾಡಲು ಏನು ಅಭ್ಯಂತರವಿಲ್ಲ, ಆದರೆ ಈದಿನ ಒಂದು ಚಿಕ್ಕ ಬದಲಾವಣೆ, ಮೊದಲು ನೀವು ದಂಪತಿಗಳು ಊಟಕ್ಕೆ ಕೂತರೆ ನಿಮಗೆ ಬಡಿಸಿ ನಂತರ ನಾನು ಮಾಡುವೆ " ಅಂದರು.
ನಮ್ಮ ಮನೆಯಲ್ಲಿಯೆ ನಮಗೆ ಉಪಚಾರವೆ ಎಂದು ನಗುತ್ತ ವಿ.ಸೀ. ದಂಪತಿಗಳು ಒಪ್ಪಿದರು, ಇಲ್ಲದಿದ್ದರೆ ಹಟವಾದಿ ಕೈಲಾಸಂ ಬಿಡಬೇಕಲ್ಲ. ಕಡೆಗೆ ದಂಪತಿಗಳ ಊಟವಾಯಿತು ಕೈಲಾಸಂ ಊಟಕ್ಕೆ ಕುಳಿತರು. ಅವರಿಗೆ ಬಡಿಸುತ್ತ ಕೇಳಿದರು ವಿ.ಸೀ. ಈದಿನ ಏಕೆ ಈ ರೀತಿ ಅಂತ ಅದಕ್ಕೆ ಕೈಲಾಸಂ ಉತ್ತರ
"ಏನಿಲ್ಲ ಈ ದಿನ ನಮ್ಮ ತಾಯಿಯವರ ಶ್ರಾದ್ದ , ಅದನ್ನು ಮಾಡುವ ಶಕ್ತಿ ನನಗಿಲ್ಲ ಹಾಗಾಗಿ ನಿಮಗೆ ಊಟ ಬಡಿಸಿ ನಾನು ಸಮಾದಾನಪಟ್ಟೆ ಅಷ್ಟೆ"
ವಿ.ಸೀ ದಂಪತಿಗಳು ಏನು ಉತ್ತರಿಸಬೇಕೆಂದು ತಿಳಿಯದೆ ಮೂಕರಾದರು.
(ಓದಿದ್ದು)

 

Rating
No votes yet

Comments