ಬಯಕೆಯ ಪಾಡು

ಬಯಕೆಯ ಪಾಡು

ಕವನ

 ಬಯಕೆಯ ಬೀಜವೊಂದು ಬೇರು ಬಿಟ್ಟಿದೆ

ಗಟ್ಟಿಯಾಗಿ ಎದೆಗೆ ಅಂಟಿಕೊಂಡಿದೆ

ಕಿತ್ತೆಸೆಯಲು ಬಾರದ ಪ್ರೀತಿ ಬಯಕೆಯಾಗಿದೆ 

ಹೂವಾವಿ ಹಣ್ಣು ಕೊಡುವ ಕನಸು ಕಾಣಿದೆ 

ಬಳ್ಳಿ ಚಿಗುರಿದರೂ ಮೊಗ್ಗು ಕಾಣೆಯಾಗಿದೆ

ದಿನ ಕಳೆದು ಬಯಕೆ ಬಳ್ಳಿ ಗಿಡವಾಗಿ ಬೆಳೆದಿದೆ

ಮೊಗ್ಗು ಬಾರದೆ ಮನಸನ್ನು ಕೊಲ್ಲುತ್ತಿದೆ

ಚಿಗುರುವ ಎಲೆ ದುಃಖದಲಿ ಕಿತ್ತೆಸೆಯುತಿದೆ

ಕತ್ತಲಲಿ ಕುರುಡನೊಬ್ಬ ಕನಸು ಕಂಡಂತಾಗಿದೆ 

ನನಸಾಗುವ ಕೊರಗಲ್ಲಿ ಗಿಡವು ಒಣಗಿ ಮುರಿದಿದೆ 

ಹೊಸ ಬಯಕೆಯ ಬಳ್ಳಿಗೆ ಮೌನದ ಮಾತು ಹೇಳಿದೆ 

ಮೊಗ್ಗು ಕಾಣದ ಈ ಗಿಡವಾ ಸುಡುವೆಯಾ?

ದುಃಖದಲಿ ಕೇಳಿದೆ

ಸಿಗಲಾರದ ಬಯಕೆಯನ್ನು ಕೊಂದಿ 

ಭಸ್ಮ ಮಾಡು ಎಂದಿದೆ

ಕಣ್ಣೀರಿನ ಹಾಗೆ ತನ್ನ ಎಲೆಗಳನ್ನು ಉದುರಿಸಿದೆ 

ಬಯಕೆಯು ಇದ್ದರು ಗಿಡವು ಒನಗಿ ಏಕಾಂಗಿಯಾಗಿದೆ

 

 

Comments