ತರಚು ಗಾಯ

ತರಚು ಗಾಯ

ಬೈಕ್‍ನಲ್ಲಿ ಹೋಗುವಾಗ
ಕಾಲಿಗೆ
ತರಚು ಗಾಯವಾಯ್ತೆಂದು
ತನಗೆ ತಗುಲಿಸಿದ
ಟಾಕ್ಸಿ ಡ್ರೈವರ್ ಜೊತೆ
ರಸ್ತೆ ಮಧ್ಯೆ
ವಾಗ್ವಾದಕ್ಕಿಳಿದ
ಟಪೋರಿಗೆ
ಒಂದು ಕಿಲೋಮೀಟರ್ ಉದ್ದದ

ಟ್ರಾಫಿಕ್ ಜ್ಯಾಮ್ ಹಿಂದೆ
ಆಂಬುಲೆನ್ಸ್‍ನಲ್ಲಿದ್ದ
ಪ್ರಾಣಪಕ್ಷಿ
ಹಾರಿಹೋಯ್ತೆಂಬ ಅರಿವಿರಲಿಲ್ಲ...

--ಶ್ರೀ
(೬-ಫೆಬ್ರವರಿ-೨೦೧೧)

Rating
No votes yet