ಒಮ್ಮೆ ನಕ್ಕು ಬಿಡಿ _ ೧೦
ಕೈಲಾಸಂ ಹಾಗು ಅವರ ತಂದೆಯವರಿಗೆ ಅಷ್ಟಕಷ್ಟೆ , ಅಂತಹ ಮದುರ ಸಂಭಂದವೇನಿರಲಿಲ್ಲ. ತಂದೆ ಹಣವಂತನಾದರು ಬಂಗಲೆಯಲ್ಲಿದ್ದರು, ಮಗ ಅನಾಥನಂತೆ ಎಲ್ಲರನ್ನು ತೊರೆದು ಯಾರದೊ ಮನೆಯ ಕಾರಿನ ಶೆಡ್ ನಲ್ಲಿ ವಾಸವಾಗಿದ್ದರು. ಒಮ್ಮೆ ಹೀಗೆ ತಂದೆಗೆ ಅನಾರೋಗ್ಯವಾಗಿ ಹಾಸಿಗೆ ಹಿಡಿದಿದ್ದಾರೆ ಎಂದು ತಿಳಿದು ಅವರನ್ನು ನೋಡಲು ಹೋದರು ಕೈಲಾಸಂ. ಸಾಮನ್ಯವಾಗಿ ತಂದೆ ಮಗನ ಸಂಬಾಷಣೆ ಅಂಗ್ಲದಲ್ಲಿಯೆ. ಅರೋಗ್ಯ ವಿಚಾರಣೆಯ ನಂತರ ಮಗನನ್ನು ಕೇಳಿದರು ತಂದೆ , ನನ್ನ ಈ ಆಸ್ತಿಯಲ್ಲ ಯಾರಿಗೋ ನಿನಗೆ ಬೇಡವೇನೊ? ಎಂದು ಅದಕ್ಕೆ ಕೈಲಾಸಂ ತಮಗೆ ಬೇಡವೆಂದರು. ತಂದೆ ಆತಂಕ ದಿಂದ ಕೇಳಿದರು
"Are you serious ?" ( ನೀನು ನಿಜವಾಗಿ ಹೇಳುತ್ತಿದ್ದೀಯಾ? ) ,
ತಕ್ಷಣ ಕೈಲಾಸಂ ಉತ್ತರ
"no dad you are serious please take care"
ಸಾವಿನ ಮುಖದಲ್ಲು ಮಗನ ಹಾಸ್ಯ ಕಂಡ ತಂದೆ ಸರಿಯಪ್ಪ ಎಂದು ಕಣ್ಣು ಮುಚ್ಚಿ ಮಲಗಿದರು
(ಇಲ್ಲಿ serious ಎಂಬ ಪದವನ್ನು ಕೈಲಾಸಂ ಹೇಗೆ ಬಳಸಿದರು ಅನ್ನುವದನ್ನು ಗಮನಿಸಿ)
(ಓದಿದ್ದು)
(ಅಂಗ್ಲ ಬಾಷೆಯ ಬಳಕೆಗೆ ಕ್ಷಮೆ ಇರಲಿ)