"ಬೇಕಿತ್ತಾ ಬಂದ್ "

"ಬೇಕಿತ್ತಾ ಬಂದ್ "

ಜನವರಿ ೨೨ ರಂದು ಕರ್ನಾಟಕದಲ್ಲಿ ಹಿಂದೆಂದು ಕಂಡು ಕೇಳರಿಯದ ರೀತಿಯಲ್ಲಿ ಕರ್ನಾಟಕ ಬಂದ್ ಮಾಡಿದ ಆಡಳಿತರೂಡ ಬಿ ಜೆ ಪಿ ಪಕ್ಷ ಯಶಶ್ವಿ ಆಯಿತೆಂದರೆ ಅದು ಕಂಡಿತ ಇಲ್ಲ ,
ಬಂದ್ ಕರೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರುಯಾಗುದರಲ್ಲಿ ಯಶಶ್ವಿಯಾಗಿದೆ ಅಂದರೆ ಅದರಲ್ಲಿ ಎರಡು ಮಾತಿಲ್ಲ ,.
ಯಾವ ಪುರುಷಾರ್ಥಕ್ಕೆ ಕರ್ನಾಟಕ ಬಂದ್ ಮಾಡಿದರೋ ಗೊತ್ತಿಲ್ಲ ,ಸಾಮಾನ್ಯ ಜನಜೀವನ , ವ್ಯಾಪಾರ ವಹಿವಾಟು , ಶಾಲಾ ಕಾಲೇಜ್ ,ದಿನಗೂಲಿ ಕೆಲಸದವರು ಮತ್ತು ಇತರೆ ಕಾರ್ಮಿಕರನ್ನು
ತೊಂದರೆಗೀಡುಮಾಡಿದ ಆಡಳಿತ ಪಕ್ಷ ಬಿ ಜೆ ಪಿ ಕಳೆದ ಎರಡೂವರೆ ವರ್ಷದಿಂದಲೂ ಜನ ಮೆಚ್ಚುವ ಕೆಲಸ ಮಾಡುವಲ್ಲಿ ಎಡವುತಿದೆ .ಮೊನ್ನೆ ಆದಂಥಹ ಕರ್ನಾಟಕ ಬಂದ್ ಗೆಪೋಲಿಸ್ ಇಲಾಕೆ ಇಂದನು ಪೂರ್ಣ ಪ್ರಮಾಣದ ಬೆಂಬಲ ದೊರೆತಿರುವುದು ಕರ್ನಾಟಕದ ಖಾಸಗಿ ನ್ಯೂಸ್ ಚಾನೆಲ್ ಒಂದರಲ್ಲಿ ಮೈಸೂರ್ ನ ಬಂದ್ ವಿವರಣೆ ನೀಡುತಿರುವಾಗ ಗೋಚರವಾಗಿದೆ .
ಬಿ ಜೆ ಪಿ ಹಾಗು ಜೆಡಿಎಸ್ ಕಾರ್ಯಕರ್ತರ ನಡುವೆ ಗರ್ಷಣೆ ಸಂದರ್ಭದಲ್ಲಿ ಬಿ ಜೆ ಪಿ ಕಾರ್ಯಕರ್ಥರೋಬ್ಬರಿಗೆ ಪೋಲಿಸ್  ಲಾಟಿ ರುಚಿ ತಾಳಲಾರದೆ,"ನಾನು ಬಿ ಜೆ ಪಿ ಅವನು ಸರ್ "ಅಂತ ಹೇಳಿದ ತಕ್ಷಣ ಅದಿಕಾರಿ ಕೂಡ ಸುಮ್ಮನಾದ  ದೃಶ್ಯ ಹಾಗು ಪೋಲಿಸ್ ಇಲಾಖೆ ಅವರು ಕೂಡ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿರುವುದು ಸಾಮಾನ್ಯ ಜನರಿಗೂ ಅರಿವಾಗುವಂತಿತ್ತು. ಯಾವ ಜನ ಸಾಮಾನ್ಯನಿಗೂ ಸಹಿಸದಂಥ ಕಳೆದ ಕರ್ನಾಟಕ ಬಂದ್ ಇಂದ ಅದು ಯಾವ ತರನಾದ ಪ್ರಚಾರ ಗಿಟ್ಟಿಸಿ ಕೊಂಡರೋ, ಯಾವ ತರನಾದ ಲಾಭ ಪದೆದುಕೊಂದರೋ ಗೊತ್ತಿಲ್ಲ , ಬಂದ್ ಮಾಡಿದ ಪುಂಡರು , ಕುಮ್ಮಕ್ಕು ನೀಡಿದ ಪೋಲಿಸ್ ಇಲಾಖೆ ಇವೆರಡು ಸಾರ್ವಜನಿಕರ ಹಿಡಿ ಶಾಪಕ್ಕೆ ಗುರಿಯಾಗಿದಂತು ಕಂಡಿತ .