ನಿಲ್ಲುವುದು ಹೃದಯ ಆ ನಿನ್ನ ಕಣ್ಣಲ್ಲಿ ಕಣ್ಣೀರ ಕಂಡು

ನಿಲ್ಲುವುದು ಹೃದಯ ಆ ನಿನ್ನ ಕಣ್ಣಲ್ಲಿ ಕಣ್ಣೀರ ಕಂಡು

ಕವನ


ಸುಂದರ ಅತಿ ಸುಂದರ ನಿನ್ನ ಆ ನಯನಗಳು..

ಮುಚ್ಚಬೇಡ ನೀ ಆ ನಯನವ ರೆಪ್ಪೆಯೆಂಬ ಪರದೆಯಿಂದ..

ನಿನ್ನ ನಯನದ ಅಂದದ ಅರಿವು ನಿನಗೇ ಇಲ್ಲ ಗೆಳತಿ..

ನಯನ ಮನೋಹರವಾಗಿದೆ ಆ ನಿನ್ನ ನಯನಗಳು..

 

ಮರೆತರೂ ಮರೆಯಲಾಗದ ಆ ನಿನ್ನ ನಯನಗಳು


ಬೇಡವೆಂದರೂ ಬಿಡದೆ ಕಾಡುತಿವೆ ಹಗಲಿರುಳು

ಅದೇನು ಮಾಯೆಯಿರುವುದೋ ಆ ನಿನ್ನ ಕಂಗಳಲಿ..

ಸೋತು ಮರುಳಾದೆನು ಆ ನಿನ್ನ ಕಂಗಳ ಕಾಂತಿಗೆ

 

ಕಣ್ಣಿನ ಮಾತುಗಳು ನಿನ್ನ ಮಾತಿಗಿಂತಲೂ ಸೊಗಸು

ಸಾವಿರ ಸಾವಿರ ಭಾವಗಳ ಸೂಸುವ ಆ ನಿನ್ನ ನಯನಗಳು..

ನಿಲ್ಲುವವು ಮಾತುಗಳು ಆ ನಿನ್ನ ನಯನಗಳ ಕಂಡು..

ನಿಲ್ಲುವುದು ಹೃದಯ ಆ ನಿನ್ನ ಕಣ್ಣಲ್ಲಿ ಕಣ್ಣೀರ ಕಂಡು...

 

Comments