ಒಲವೇ ಮಂದಾರ _ ಒಂದು ಸುಂದರ ಕಾವ್ಯ

ಒಲವೇ ಮಂದಾರ _ ಒಂದು ಸುಂದರ ಕಾವ್ಯ

ಗೆಳೆಯನ ಒತ್ತಾಯದ  ಮೇರೆಗೆ  ನಿನ್ನೆ  ಒಲವೇ  ಮಂದಾರ  ಚಲನಚಿತ್ರ  ನೋಡಲು  ಹೋಗಿದ್ದೆ  . ಬಹಳ  ದಿನಗಳ  ನಂತರ  ಒಂದು  ಒಳ್ಳೆಯ  ಸಿನಿಮಾ  ನೋಡಿದ  ಅನುಭವಾಹಿತು  . ರಂಗಭೂಮಿಯಲ್ಲಿ   ಪಳಗಿದ  ಜಯತೀರ್ಥ  ಪಕ್ವವಾದ  ಚಿತ್ರವನ್ನು  ನೀಡಿದ್ದಾರೆ . ಇಡೀ  ಚಿತ್ರ  ಪ್ರೀತಿಯ  ಹಲವು  ಮುಖಗಳ    ಮೆರವಣಿಗೆ  . ಚಿತ್ರದಲ್ಲಿ  ದೇಸಿ ಹಾಗೂ ಜಾಗತೀಕರಣದ  ಪ್ರೀತಿಯ  ಮುಖಾಮುಖಿ       ಕೂತೂಹಲವಾಗಿದೆ  . ಪ್ರೀತಿಯ  ಹಲವು  ಮುಖಗಳು  ತಣ್ಣನೆ  ನಮ್ಮನ್ನು  ಆವರಿಸಿಕೊಳ್ಳುತ್ತಾ    ಹೋಗುತ್ತವೆ . ಸತ್ಯಘಟನೆ    ಆದರಿಸಿದ  ಚಿತ್ರದೊಳಗಿನ  ಎರಡು  ಉಪಕಥೆಗಳು  ಚಿತ್ರದ  ಮುಖ್ಯ  ಆಖರ್ಷಣೆ  . ಒಳ್ಳೆಯ  ಹೋಂವರ್ಕ  ಮಾಡಿಕೊಂಡೆ  ನಿರ್ದೇಶಕರು      ಸಿನಿಮಾ ರಂಗಕ್ಕೆ  ಕಾಲಿಟ್ಟಿದ್ದಾರೆ  .  ಮುಖ್ಯ  ಕಥೆಗಿಂತ  ರಂಗಾಯಣರಘು  ಮಾಡಿದ   ಪ್ರೇಮಿಯ  ಪಾತ್ರ  ನಮ್ಮನ್ನು   ಬಹಳ  ಕಾಡುತ್ತದೆ.      ಚಿತ್ರದಲ್ಲಿ ನಾಯಕಿಗೆ  ಮಾತು  ಕಡಿಮೆ  .   ನಟನೆಯ  ಮೂಲಕ  ಮಾತಿಗಿಂತ  ಹೆಚ್ಚಿನದನ್ನು  ಕಟ್ಟಿಕೊಡುವಲ್ಲಿ  ನಿರ್ದೇಶಕರು  ಗೆದಿದ್ದಾರೆ  . ಕಲೆ  , ಸಾಹಿತ್ಯದ  ಅಭಿರುಚಿ  ಇರುವ  ನಿರ್ದೇಶಕನಿಂದ  ಮಾತ್ರ  ಇಂತಹ  ಚಿತ್ರ  ಸಾದ್ಯ  . ಎಂಟು  ರಾಜ್ಯಗಳ  ಮೂಲಕ  ಸಾಗುವ   ಕಥೆ  ಬಿನ್ನ  ಸಂಸ್ಕೃತಿ ಗಳ  ಅಂತರವನ್ನು  ,ಚೆಲುವನ್ನು  ತೋರಿಸಿಕೊಡುತ್ತದೆ  .  ಒಟ್ಟಿನಲ್ಲಿ  ಒಲವೇ  ಮಂದಾರ ನಾ  ನೋಡಿದ  ಅತ್ಯುತ್ತಮ  ಚಿತ್ರಗಳಲೊಂದು  . ಗೆಳೆಯರೇ  ಸಮಯವಿದ್ದರೆ  ಒಂದುಸಾರಿ  ನೋಡಿಕೊಂಡು  ಬನ್ನಿ  ನೀವು  ಶಭಾಶ ಹೇಳುವಿರಿ  .

Comments