ಮುಕ್ತ ತಂತ್ರಾಂಶ ಅನುವಾದ ಕುರಿತು.....ಬನ್ನಿ ಕೈ ಜೋಡಿಸಿ
ನಾನು ಲೀನಕ್ಸ್ ಕನ್ನಡೀಕರಣಕ್ಕೆ ಕೈ ಹಾಕಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ . ಆಗ ಸುಮಾರು ೧೬೦೦೦ ಶಬ್ದ/ವಾಕ್ಯಗಳಿದ್ದವು ಸುಮಾರು ೫೦೦೦ ದಷ್ಟು ಅನುವಾದ ಪೂರ್ತಿಗೊಂಡು ಅನುಮೋದಿಸಲ್ಪಟ್ಟಿದ್ದವು.
ನಂತರದ ನಾಲ್ಕು ತಿಂಗಳಲ್ಲಿ ಇನ್ನೂ ಮೂರು ಕಡತ ಸೇರಿಸಲಾಗಿದೆ. ಅವುಗಲಲ್ಲಿ ೫೫೦೦ ಶಬ್ದ/ವಾಕ್ಯಗಳು. ನಾನು ನಾಲ್ಕು ತಿಂಗಳಲ್ಲಿ ಸುಮರು ೭೦೦೦ ಕ್ಕು ಹೆಚ್ಚು ಅನುವಾದ ಮಾಡಿದ್ದೇನೆ. django ಎಂಬುದರ ಅನುವಾದ ಸಂಪೂರ್ಣಗೊಂಡಿದ್ದು ಮುಂದಿನ ಪ್ರಕ್ರಿಯಗಳನ್ನು ಆರಂಭಿಸಲಾಗಿದೆ.
ಒಟ್ಟಿನಲ್ಲಿ ಸುಮಾರು ೬೫ % ರಷ್ಟು ಮುಗಿದಿದೆ. ಉಳಿದ ಭಾಗದ ಶಬ್ದ/ವಾಕ್ಯಗಳು ಒಂದಿಷ್ಟು Technical , ಕಠಿಣ ಅಥವಾ ದೊಡ್ಡವಾಗಿದ್ದು ಪ್ರಗತಿ ನಿಧಾನವಾಗಿದೆ. ಇಲ್ಲಿ Firefox (mozilla) ಎಂಬ ( internet explorer ನಂತಹ) ಬ್ರೌಸರ್ರೂ ಇದ್ದು ಅನುವಾದ ಪೂರ್ತಿಯಾದಲ್ಲಿ ಎಲ್ಲ windos/linux ಕಾರ್ಯವ್ಯವಸ್ಥೆ(OS)ಗಳಲ್ಲೂ ಕನ್ನಡ ಬ್ರೌಸರ್ ಬಳಸಬಹುದಾಗಿದೆ.
[:http://translate.sampada.net|ಬನ್ನಿ ಕೈ ಜೋಡಿಸಿ] , ಬೇಗನೆ ಕನ್ನಡ ಕಂಪ್ಯೂಟರ್ ಒಂದನ್ನು ಕಾಣೋಣ.