ಒಮ್ಮೆ ನಕ್ಕು ಬಿಡಿ _ ೧೧

ಒಮ್ಮೆ ನಕ್ಕು ಬಿಡಿ _ ೧೧

ಅರವತ್ತರ ದಶಕದ ಕಾಲದ ಕಮ್ಯೂನಿಸಂ ಹಾಸ್ಯ

ರಶಿಯಾದ ನಾಯಿಯೊಂದು ಹೇಗೋ ಗಡಿಯಲ್ಲಿ ತಪ್ಪಿಸಿ ಭಾರತಕ್ಕೆ ಓಡಿ ಬಂತು, ಭಾರತದ ನಾಯಿಗಳು ಎದುರುಗೊಂಡು ಕುತೂಹಲಕ್ಕೆ ಕೇಳಿದವು
"ನೀನು ಅಲ್ಲಿಂದ ಏಕೆ ಓಡಿಬಂದೆ ಅಲ್ಲಿ ತಿನ್ನಲು ಕೊರತೆಯ?"
"ಹಾಗೇನು ಇಲ್ಲ ತಿನ್ನಲು ಬೇಕಾದಷ್ಟು ಸಿಗುತ್ತಿತ್ತು"  ಉತ್ತರಿಸಿತು ರಶಿಯಾದ ನಾಯಿ
"ಮತ್ತೆ ಇರಲು ಜಾಗದ ಕೊರತೆಯ ?" ಕೇಳಿದವು,
"ಜಾಗಕ್ಕೇನು ಕೊರತೆಯಿರಲಿಲ್ಲ "  ಉತ್ತರ
"ಮತ್ತೆ ಏನು ಯಜಮಾನ ಕ್ರೂರಿಯಾಗಿದ್ದನೇನು?"
"ಛೆ! ಛೇ! ತುಂಬಾ ಒಳ್ಳೆಯವನು"  ರ.ನಾಯಿ
"ಮತ್ತೇಕೆ ಓಡಿ ಬಂದೆ ?"  ಆಶ್ಚರ್ಯದಿಂದ ಪ್ರಶ್ನಿಸಿದವು ಬಾರತದ ನಾಯಿಗಳು,
ರಶಿಯಾದ ನಾಯಿ ಉತ್ತರಿಸಿತು ಸಂಕೋಚದಿಂದ
"ಮತ್ತೇನು ಇಲ್ಲ , ನಾಯಿಯಾಗಿ ಹುಟ್ಟಿದ ಮೇಲೆ ಒಮ್ಮೆಯಾದರು ಬೊಗಳಬೇಕು ಅಂತ ಆಸೆಯಾಯಿತು, ಹಾಗಾಗಿ ಭಾರತಕ್ಕೆ ಓಡಿ ಬಂದೆ"

(ಓದಿದ್ದು)

 

Rating
No votes yet

Comments