ಎ.ಆರ್.ರೆಹಮಾನ್ ಕನ್ನಡಕ್ಕೆ

ಎ.ಆರ್.ರೆಹಮಾನ್ ಕನ್ನಡಕ್ಕೆ

ಗೆಳೆಯರೆ ನಿಮಗೆ ಗೊತ್ತಿರಬಹುದು ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಸಜನಿ ಎಂಬ ಕನ್ನಡ ಚಿತ್ರದ ಸಂಗೀತ ನಿರ್ದೇಶನದ ಭಾರವನ್ನು ಹೊತ್ತಿದ್ದಾರೆ.ಎಲ್ಲರ ಹಾಗೆ ನನಗೂ ಹರ್ಷ ಮತ್ತು ಹಾಡುಗಳನ್ನು ಕೇಳುವ ಕುತೂಹಲ ಎರಡೂ ಇತ್ತು. ಮೊನ್ನೆ ಬಾನುಲಿಯಲ್ಲಿ ಆ ಚಿತ್ರದ ಹಾಡೊಂದನ್ನು ಕೇಳಿದೆ ಆದರೆ ಅದು ಪುಕಾರ್ ಎಂಬ ಹಿಂದಿ ಚಿತ್ರದ ಹಾಡೊಂದರ ಕನ್ನಡ ಅವತರಣಿಕೆ ಅಷ್ಟೆ.ಈ ಹಾಡನ್ನು ಕೇಳಿ ನನ್ನ ಆಸೆಗಳಿಗೆ ತಣೀರೆರಚಿದಂತಾಯಿತು. ನಿರ್ಮಾಪಕ ಹಾಗೂ ನಿರ್ದೇಶಕರ ಮೂರ್ಖತನಕ್ಕೆ ಮನದಲ್ಲೇ ನಕ್ಕೆ.ಹಾಗೊಂದು ವೇಳೆ ಅದೇ ಹಾಡನ್ನು ಬಳಸಬೇಕು ಅಂತಿದ್ದರೆ ಅಷ್ಟು ಹಣ ಸುರಿದು ರೆಹಮಾನ್ ಅವರನ್ನು ಯಾಕೆ ಕರೆಸಬೇಕಿತ್ತು?????? ನಮ್ಮ ರಾಜೇಶ್ ರಾಮನಾಥ್ ಅವರು ಆ ಕಾರ್ಯದಲ್ಲಿ ನಿಸ್ಸೀಮರುWink.

Rating
No votes yet

Comments