ಗೈಮ್ ಕನ್ನಡದಲ್ಲಿ ಲಭ್ಯ

ಗೈಮ್ ಕನ್ನಡದಲ್ಲಿ ಲಭ್ಯ

Comments

ಬರಹ

gaim in Kannada

ಮುಕ್ತ ತಂತ್ರಾಂಶವಾದ - [:http://gaim.sourceforge.net/|ಗೈಮ್ multi protocol instant messaging client] ಈಗ [:http://dev.sampada.net/wiki/Gaim_Kannada_Translation|ಕನ್ನಡದಲ್ಲಿ ಲಭ್ಯ]. ಹಿಂದಿನ ವಾಕ್ಯದಲ್ಲಿ ಬರೆದ ಟೆಕ್ನಿಕಲ್ ಪದವನ್ನೋದಿ ಯಾರೂ ಮೂರ್ಛೆ ಹೋಗಿರಲಿಕ್ಕಿಲ್ಲ ಎಂದು ಭಾವಿಸಿ ಅದರರ್ಥ ವಿವರಿಸಲು ಪ್ರಯತ್ನಿಸುತ್ತೇನೆ:

ನಿಮ್ಮ ಕಂಪ್ಯೂಟರಿನಲ್ಲಿ ಯಾಹೂ ಮೆಸೆಂಜರ್ ಬಳಸೇ ಇರುತ್ತೀರ. ಇಲ್ಲದಿದ್ದರೆ ಗೂಗಲ್ ಟಾಲ್ಕ್ ಅಂತೂ ಬಳಸಿರುತ್ತೀರ. ಇವಕ್ಕೆ instant messaging ಎನ್ನುತ್ತಾರೆ. ಇಂತಹ ಹಲವು ಇನ್ಸ್ಟಂಟ್ ಮೆಸ್ಸೇಜಿಂಗ್ ಪ್ರೋಗ್ರಾಮುಗಳಾಗಿಬಿಟ್ಟರೆ ಪ್ರತಿಯೊಂದು ಪ್ರೋಟೋಕಾಲ್ ಗೂ (ಅಂದ್ರೆ ಯಾಹೂ, ಗೂಗಲ್, MSN, AOL, ICQ ಮುಂತಾದವಕ್ಕೆ) ನೀವು ತಲಾ ಒಂದೊಂದು ಪ್ರೋಗ್ರಾಮು install ಮಾಡಿಕೊಂಡು ಅವುಗಳೊಂದಿಗೆ ಗುದ್ದಾಡಬೇಕಾಗುತ್ತದೆ.
ನಿಮ್ಮ ಕೆಲವು ಸ್ನೇಹಿತರು ಯಾಹೂ ಬಳಸಿದರೆ ಮತ್ತು ಹಲವರು ಗೂಗಲ್ ಟಾಲ್ಕ್ ಬಳಸುತ್ತಿರುತ್ತಾರೆ.

ಗೈಮ್ ಈ ಪರಿಸ್ಥಿತಿಯನ್ನು ತಿಳಿಯಾಗಿಸುತ್ತದೆ. ಹೇಗೆ? ನಿಮಗೆ ಎಲ್ಲ ಪ್ರೋಟೋಕಾಲ್ ಗಳಿಗೂ ಒಂದೇ ಮೆಸ್ಸೆಂಜರನ್ನು ಒದಗಿಸಿ! ಉದಾಹರಣೆಗೆ, ಯಾಹೂ, ಎಮ್ ಎಸ್ ಎನ್, ಗೂಗಲ್ ಟಾಲ್ಕ್ ಎಲ್ಲಕ್ಕೂ ಒಂದೇ ಪ್ರೋಗ್ರಾಮು ಬಳಸಿ ನೀವು ನಿಮ್ಮ ಸ್ನೇಹಿತರೊಂದಿಗೆ ಚ್ಯಾಟ್ ಮಾಡಬಹುದು! "ನಿಜವೇ? ಹೀಗೂ ಇದೆಯೇ?" ಎಂದು ಹಲವರು ನನಗೆ ಕೇಳಿದ್ದುಂಟು. :-)
ಕಳೆದ ಹಲವು ವರ್ಷಗಳಿಂದ ನಾನು ಮತ್ತು ನನ್ನ ಕೆಲವು ಲಿನಕ್ಸ್ ತಿಳಿದ ಸ್ನೇಹಿತರು ಇದನ್ನೇ ಬಳಸುತ್ತಾ ಬಂದಿದ್ದೇವೆ. ನಮಗಿದು ದಿನನಿತ್ಯದ ಸಂಗತಿ - ಹಾಗಾಗಿ ಇದರ ಬಗ್ಗೆ ಹೇಳುವಾಗ excitement usually ಕಡಿಮೇನೆ :-)

ಅದೇನೆ ಇರಲಿ - ಗೈಮ್ ಲಿನಕ್ಸ್ ಮತ್ತು ವಿಂಡೋಸ್ ಎರಡರಲ್ಲೂ ಬಳಸಬಹುದಾದಂತ ತಂತ್ರಾಂಶ. ಉಪಯೋಗಿಸಿ ನೋಡಿ.

ಕನ್ನಡದಲ್ಲಿ ಗೈಮ್ ಕುರಿತು ಹೆಚ್ಚಿನ ಮಾಹಿತಿಗೆೆ ಕೆಳಗಿನ ಪುಟ ನೋಡಿ:
[:http://dev.sampada.net/wiki/Gaim_Kannada_Translation]

ಅನುವಾದಗಳ Credits - [:http://translate.sampada.net] ನಲ್ಲಿ ಅನುವಾದಗಳಲ್ಲಿ ತೊಡಗಿಕೊಂಡಿರುವ ಎಲ್ಲ ಉತ್ಸಾಹಿ ಕನ್ನಡಿಗರದ್ದು.

ಓದುಗರ ಗಮನಕ್ಕೆ: ಚಿತ್ರದಲ್ಲಿ ಸ್ನೇಹಿತರ ಪಟ್ಟಿಯಲ್ಲಿರುವ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಬ್ಲರ್ ಮಾಡಲಾಗಿದೆ. ಹಾಗೆಯೇ ಇರುತ್ತದೆ ಅಂದುಕೊಂಡುಬಿಡಬೇಡಿ ಮತ್ತೆ :P

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet