ಶ್ರಿ. ಕಮಲೇಶ್ವರ್ - ಒಬ್ಬ ಶ್ರೇಷ್ಟ ಸಾಹಿತಿ, ಅಂದಿನ, ದೂರದರ್ಶನದ ಪಾದಾರ್ಪಣೆಯ ಸಮಯದ, ಶ್ರೇಷ್ಟ ಮಾತುಗಾರ, ಇನ್ನಿಲ್ಲ !

ಶ್ರಿ. ಕಮಲೇಶ್ವರ್ - ಒಬ್ಬ ಶ್ರೇಷ್ಟ ಸಾಹಿತಿ, ಅಂದಿನ, ದೂರದರ್ಶನದ ಪಾದಾರ್ಪಣೆಯ ಸಮಯದ, ಶ್ರೇಷ್ಟ ಮಾತುಗಾರ, ಇನ್ನಿಲ್ಲ !

ಬರಹ

(೧೯೩೨-೨೦೦೭) ಶ್ರಿ. ಕಮಲೇಶ್ವರ್- ಒಬ್ಬ ಶ್ರೇಷ್ಟ ಸಾಹಿತಿ, ಮಾತುಗಾರ, ದೂರದರ್ಶನ ಆಂಕರ್, ಶ್ರೇಷ್ಟ ಚಿತ್ರಪಟ ಲೇಖಕ. ಹೃದಯಾಘಾತದಿಂದ ಸ್ವಲ್ಪ ಸಮಯದಿಂದ ನರಳುತ್ತಿದ್ದ ೭೫ ವರ್ಷ ವಯಸ್ಸಿನ ಕಮಲೇಶ್ವರ್, ಶನಿವಾರದಂದು ತಮ್ಮ ಕೊನೆಯುಸಿರೆಳೆದರು. ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ೧೯೭೩-೭೫ ರಲ್ಲಿ ದೂರದರ್ಶನದ ಕಾರ್ಯಕ್ರಮಗಳು ಆಗ ತಾನೇ ಪ್ರಾರಂಭವಾಗಿ ಗರಿಕೆದರುತ್ತಿದ್ದ ಕಾಲ. ನಾನು ದೂರದರ್ಶನದಲ್ಲಿ ಕಂಡ ಕಮಲೇಶ್ವರ್, ಒಬ್ಬ ಪ್ರಭಾವಿ, ಪ್ರತಿಭಾನ್ವಿತ ಮತುಗಾರ ; 'ಪರಿಕ್ರಮ' ಕಾರ್ಯಕ್ರಮದಲ್ಲಿ ಪ್ರೇಕ್ಷಕರಮೇಲೆ ಜಾದುಮಾಡಿದ್ದರು. ಬರವಣಿಗೆ, ದೃಷ್ಯ ಮಾಧ್ಯಮಗಳಲ್ಲೂ ಯಾವಾಗಲೂ ಹೊಸ ದಿಶೆಯನ್ನು ಅರಸಿ ಅದನ್ನು ಸಕ್ಷಮವಾಗಿ ಬೆಳೆಸಿ ನಮ್ಮೆಲ್ಲರಿಗೆ ಕೊಟ್ಟ, ಉತ್ತರ ಪ್ರದೇಶದ 'ಮೈನ್ ಪುರಿ' ಯಲ್ಲಿ ಜನಿಸಿದ ಕಮಲೇಶ್ವರ್ ಪ್ರಸಾದ್ ಸಕ್ಸೇನ, ಇಲಹಾಬಾದಿನ ವಿಶ್ವವಿದ್ಯಾಲಯದ ಹಿಂದೀ ಭಾಷೆಯ ಸ್ನಾತಕೊತ್ತರ ಪದವೀಧರರು. 'ಸರಿಕ,' ಎಂಬ ಅತ್ಯುತ್ತಮ ಸಾಹಿತ್ಯಪ್ರಿಯ ಪತ್ರಿಕೆಯ, ಸಂಪಾದಕರಾಗಿ ದುಡಿದರು. ೧೯೫೦ ರಲ್ಲಿ ಆಗತಾನೇ ಸ್ವಾತಂತ್ರ್ಯಗಳಿಸಿದ್ದ ದೇಶದ ಆಸೆಗಳನ್ನು ಗಮನದಲ್ಲಿಟ್ಟುಕೊಂಡು ಓದುಗರಿಗೆ 'ಹೊಸ ದಿಶೆ'ಯನ್ನು ಕೊಡುವಲ್ಲಿ ಶ್ರಮಿಸಿದರು. 'ನಯೀ ಕಹಾನಿಯಾ' ಅಂತಹ ಹೊಸ ಪ್ರಯತ್ನ ಎಲ್ಲರನ್ನೂ ಚಕಿತಗೊಳಿಸಿತು ! ಹೊಸ ಹೊಸ ಪ್ರತಿಭೆಗಳನ್ನು ಓದುಗರಿಗೆ ಪರಿಚಯಿಸಿದರು. ಅವರ ಜೊತೆಗೆ ಇದಕ್ಕೆ ಸ್ಪಂದಿಸಿದವರಲ್ಲಿ ಮೊಹನ್ ರಾಕೇಶ್, ರಜೀಂದ್ರಸಿಂಗ್ ಬೇಡಿ, ಯಾದವ್ ಮುಖ್ಯರು. ಅವರು ಮಾಡಿದ ಮುಖ್ಯ ಕೆಲಸವೆಂದರೆ ದಲಿತ ಮರಾಠಿ ಲೇಖಕರನ್ನೂ ಪ್ರೊತ್ಸಾಹಿಸಿ, ಬೊಹ್ರಾ ಮುಸ್ಲಿಮರ ಸಾಹಿತ್ಯಗಳನ್ನೂ ಹಿಂದಿ ಓದುಗರಿಗೆ ಪರಿಚಯಿಸಿದ್ದು. 'ರಾಜ್ ನಿರ್ಬನ್ಸಿಯಾ,' 'ಖೊಯೆ ಹುಯೆ ದಿಶಾಯೆ,' ಎಂಬ ಪುಸ್ತಕಗಳನ್ನು ಬರೆದರು. 'ಸಮನಾಂತರ' ಎಂಬ ಹೊಸ ಅಲೋಚನಾ ಲಹರಿಯನ್ನು ೧೯೭೦ ರಲ್ಲಿ ಶುರುಮಾಡಿದರು. ಆ ಸಮಯದಲ್ಲಿ ಶ್ಯಾಮ್ ಬೆನೆಗಲ್, ರಂತಹವರು, 'ಬೆಳ್ಳಿಪರದೆಯ' ಮೇಲೆ ಇದೇ ತರಹದ ಪ್ರಯೋಗ ಮಾಡುತ್ತಿದ್ದರು. 'ಕಿತನೆ ಪಾಕಿಸ್ತಾನ್' ಎಂಬ ಪುಸ್ತಕಕ್ಕೆ ಪ್ರಶಸ್ತಿ ದೊರೆಯಿತು. ಅವರ ಸ್ಥಾನ, ಪ್ರೇಮ್ ಚಂದ್, ಅಮೃತ್ ಲಾಲ್ ನಾಗರ್ ರಂತಹ ಉನ್ನತ ಮಟ್ಟದ್ದಾಗಿತ್ತು. ಸ್ವಲ್ಪದಿನ 'ಪ್ರೂಫ್ ರೀಡರ್' ಆಗಿಯೂ, 'ನೈಟ್ ವಾಚ್ ಮನ್' ಆಗಿಯೂ ಕೆಲಸಮಾಡಿದ್ದರು. ಅವರು ಬಾಲೀವುಡ್ ಗೆ ಪಾದಾರ್ಪಣೆಮಾಡಿ, 'ಮೌಸಮ್', 'ಛೋಟೀಸಿ ಬಾತ್' ಚಲನ ಚಿತ್ರಗಳನ್ನು ಮಾಡಲು ತಮ್ಮ ಯೋಗದಾನ ನೀಡಿದರು. ಇಂತಹ ಪ್ರಯತ್ನ, ಕಲೆ ಮತ್ತು ವಾಣಿಜ್ಯಗಳ ಶ್ರೇಶ್ಟ ಸಂಗಮವೆಂದು ಸಮೀಕ್ಷಕರು ಅಭಿಪ್ರಾಯ ಪಡುತ್ತಾರೆ. ಅವರ ಕಾದಂಬರಿಯನ್ನು ಆಧರಿಸಿ ತಯಾರಿಸಿದ 'ಆಂಧೀ' ಗುಲ್ಜಾರರ ಅತ್ಯುತ್ತಮ ಚಿತ್ರ. ಆದರೆ ತುರ್ತುಪರಿಸ್ಥಿತಿಯಲ್ಲಿ ಬಿಡುಗಡೆಯಾದ, ಈ ಚಿತ್ರವನ್ನು ತಡೆಹಿಡಿಯಲಾಗಿತ್ತು.'ಪದ್ಮಾಭೂಷಣ,' 'ಸಾಹಿಯ ಅಕ್ಯಾಡಮಿಯ ಪ್ರಶಸ್ತಿಗಳು' ಸ್ವಲ್ಪ ತಡವಾಗಿ ಬಂದವು. ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಗುಲ್ಜಾರ್, ತಮ್ಮ ಚಿತ್ರಸಾಹಿತ್ಯದಲ್ಲಿ ಬಳಸಿದ 'ಕಜ್ರಾರೆ, ಮತ್ತು ಬೀದಿ' ಎಂಬ ಪದಗಳ ಬಗ್ಗೆ, ಕಮಲೇಶ್ವರರು ತಮ್ಮ ಪ್ರತಿಕ್ರಿಯೆ ನೀಡಿದ್ದನ್ನು, ಜ್ಞಾಪಿಸಿಕೊಳ್ಳುತ್ತಾರೆ. "ಈ ಬಾರಿ ದೆಹಲಿಗೆ ಹೋದರೆ, ಖಂಡಿತವಾಗಿಯೂ ಕಮಲೇಶ್ವರರ ಅನುಪಸ್ತಿಯನ್ನು ಎದುರಿಸಬೇಕಾಗುತ್ತದೆ" ! ಎನ್ನುತ್ತಾರೆ, ಅವರು.