ಹಾಲ ಹಿ೦ದಿನ ಕವನ

ಹಾಲ ಹಿ೦ದಿನ ಕವನ

ಕವನ

ಏರಿತು ಹಾಲಿನ ರೇಟು


ಮಧ್ಯಮದ ಮೇಲೊ೦ದೇಟು


ತು೦ಬೀತೆ ರೈತನ ತಾಟು


ಅಳಿಸೀತೆ ಚಿ೦ತೆಯ ಮಿನಿಟು? |1|


ರಾಸುಗಳು ತಿನ್ನುವ ಹುಲ್ಲ


ಅವುಗಳ ಕಾಯುವ ಗೊಲ್ಲ


ರೆಲ್ಲರನು ಕಾಡಿಹುದಲ್ಲ


ಬಡತನವೆ ನು೦ಗಿಹುದು ಎಲ್ಲ |2|


ಹಾಲ ಹಿ೦ಡಿದರೆ ರಕ್ತ ಒಸರುವುದು


ರಾಸಿಗೆ ಸಿಗದೆ ಹಿಡಿಮೇವು


ಕಾಲಾಡಲಿಲ್ಲ ಗೋಮಾಳ ಅವಕೆ


ಕೇಳುವರು ಯಾರವರ ನೋವು? |3|


ಬೆವರ ಬಸಿವ ಹಗಲಿರುಳು ಶ್ರಮದಲೂ


ಕೈತುಂಬಾ ಕಾಸು ಬರಿ ಕನಸೇ


ನಗರದತ್ತಲೀಗ ಅವರೊಲಸೆ


ಇದ ನೋಡೂ ಮರುಗೆಯಾ ಮನಸೇ?