ನಾನು ಬೆಂಗಳೂರಲ್ಲೇ ಇದ್ದೇನಾ??????
ಇದನ್ನು ನನ್ನ ಅಮಾಯಕತನವೋ ಇಲ್ಲಾ ನನಗಾದ ಸಾಂಸ್ಕೃತಿಕ ಆಘಾತ ಅಂತಾದರೂ ಅಂದ್ಕೋಬಹುದು.ಅಥವಾ ನನ್ನನ್ನು ತೀವ್ರ ಕ್ಶುಲ್ಲಕ ಬುದ್ಧಿಯ ಮನುಷ್ಯ ಅಂತಾದರೂ ಅನ್ನಿ ಆದರೆ ನನಗಾದ ಅನುಭವವನ್ನ ಹಂಚಿಕೋತಾ ಇದ್ದೇನೆ. ನಾನು ಬೆಂಗಳೂರಿಗೆ ಬಂದು ಸುಮಾರು ೫ ವರ್ಷ ಆಯ್ತು. ಇಲ್ಲಿಗೆ ಬರುವ ಮುಂಚೆ ಬೆಂಗಳೂರು ಹೀಗೆ ಬೆಂಗಳೂರು ಹಾಗೆ ಅಂತ ನಾನಾ ತರಹದ ರಂಗು ರಂಗಿನ ಕಥೆಗಳನ್ನ ಕೇಳಿದ್ದೆ, ಆದರೆ ಯಾವದೇ ರೀತಿಯ ಘಟನೆಗಳನ್ನು ಕಣ್ಣಾರೆ ನೋಡಿರಲಿಲ್ಲ.ಇಲ್ಲಿ ಬಂದ ಮೇಲೂ ನಾನಿದ್ದದ್ದು ಪಕ್ಕಾ ಕನ್ನಡಿಗರ ಪ್ರದೇಶಗವಾದ ಮಲ್ಲೇಶ್ವರಂ. ಓದಿದ್ದು ವಿಶ್ವೇಶ್ವರಯ್ಯ ಮಹಾವಿದ್ಯಾಲಯದಲ್ಲಿ.ಹಾಗಾಗಿ ಸಭ್ಯತೆಯನ್ನು ಮೀರದಿರುವ ಹುಡುಗಿಯರನ್ನೇ ನೋಡಿದ್ದು. ಆಗಾಗ ಮಹಾತ್ಮ ಗಾಂಧಿ ರಸ್ತೆಗೆ ಸುತ್ತಲು ಹೋಗುತ್ತಿದ್ದರೂ ನಮಗೇ ನಾಚಿಕೆ ತರುವ ಘಟನೆಗಳನ್ನು ಯಾವುದನ್ನು ನೋಡಿರಲಿಲ್ಲ. ಸುಮಾರು ೫ ತಿಂಗಳ ಹಿಂದಿನ ಕಥೆ ಅಂತ ಹೇಳಬಹುದು.. ನನಗೆ ಕಾರ್ಯನಿಮಿತ್ತ ಕೋರಮಂಗಲದಲ್ಲಿ ಜ್ಯೋತಿನಿವಾಸ ಮಹಾವಿದ್ಯಾಲಯದ ಎದುರುಗಡೆ ಇರುವ ನಮ್ಮ ಸಂಸ್ಥೆಯ ಕಛೇರಿಗೆ ವರ್ಗವಾಯಿತು.ಆಗ ಕಂಡಿದ್ದು ಬೆಂಗಳೂರಿನ ಇನ್ನೊಂದು ಮುಖವನ್ನು...
ಇನ್ನು ಎರಡನೇ ಪಿ.ಯು.ಸಿ. ಓದುತ್ತಿರುವಂತೆ ಕಾಣುವ ತರುಣಿಯರು ಕಾಫಿ ಡೇಯಲ್ಲಿ ಕುಳಿತು ಚಿಮಣಿಯಂತೆ ಹೊಗೆ ಬಿಡುತ್ತಿರುವ ಬಗೆ ನಮ್ಮ ಹೊಸೂರು ರಸ್ತೆಯಲ್ಲಿ ಓಡಾಡುವ ಖಾಸಗಿ ಬಸ್ಸುಗಳು ಉಗುಳುವ ಹೊಗೆಯನ್ನು ಮೀರಿಸುವಂತಿದ್ದವು.ಇದು ನಮ್ಮ ಉಪನ್ಯಾಸಕರ ಪ್ರವಚನಗಳಂತೆ ಒಂದಾದ ಮೇಲೊಂದು ಸಾಗುತ್ತಿತ್ತು. ಅಬ್ಬಾ ಮಹಾತಾಯಿಯೇ ಅಂತ ಅಲ್ಲೆ ಕೈ ಮುಗಿದೆ.
ಇನ್ನೋಂದು ನಾನು ಗಮನಿಸಿದ ಅಂಶ ಫೋರಂ ಮಳಿಗೆಯಲ್ಲಿ ಇನ್ನೂ ಮೀಸೆ ಬರದ ಮಧ್ಯಮ ಶಾಲೆಯಲ್ಲಿ ಓದುತ್ತಿರಬಹುದಾದ ಹುಡುಗ ಹುಡುಗಿಯರು ಸಾರ್ವಜನಿಕವಾಗಿ ಮುದ್ದಿಸುವದು. ನಮ್ಮ ಬೆಂಗಳೂರಲ್ಲಿ ಪಬ್ ಸಂಸ್ಕೃತಿ ಹೆಚ್ತಾ ಇದೆ ಹುಡುಗಿಯರು ತಾವು ಹುಡುಗರಿಗೇನು ಕಡಿಮೆ ಎಂದು ಸಡ್ಡು ಹೊಡೆದು ನಿಂತಿರುವಂತೆ ಕಾಣ್ತಾ ಇದೆ.
ಇದನ್ನ ಪಾಶ್ಚಾತ್ಯ ಸಂಸ್ಕೃತಿ ಅಂತ ಅಂದ್ರೆ, ನಮಗೆ ಪೂರ್ಣವಾಗಿ ಪಾಶ್ಚಾತ್ಯ ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ಧೈರ್ಯ ಇದೆಯ. ಇಲ್ಲ ಇದು ಅರೆ ಬೆಂದ ಪಾಶ್ಚಾತ್ಯ ಸಂಸ್ಕೃತಿಯೋ????
ಇಲ್ಲಿ ನನ್ನಲ್ಲೇ ಕೆಲವು ಪ್ರಶ್ನೆಗಳು ಹುಟ್ಕೊಳ್ತ್ವೆ ಬೆಂಗಳೂರಿನ ಇಷ್ಟೊಂದು ಬದಲಾವಣೆಗೆ ಕಾರಣ?????? ಇಲ್ಲಾ ಮೊದಲಿಂದಲೇ ಹೀಗಿತ್ತಾ???? ನನಗೆ ತಡವಾಗಿ ಅರಿವಾಯಿತಾ????ಗ್ಲೋಬಲೈಸೇಶನ್ ನಾ ಇದರ ಕಾರಣ ಅಂತ ಹೇಳ್ಬಹುದೇ??? ಹೌದಾದರೆ ನಾವು ಯಾವುದು ತಪ್ಪು ಯಾವುದು ಸರಿ ಎಂದು ಪರಿವಿಕ್ಶಿಸದಷ್ಟು ಮಂದಮತಿಗಳಾಗಿರುವವೇ????
Comments
ಉ: ನಾನು ಬೆಂಗಳೂರಲ್ಲೇ ಇದ್ದೇನಾ??????