ತಂಗಳು ಬದುಕಿನ ಮಳೆ

ತಂಗಳು ಬದುಕಿನ ಮಳೆ

ಕುಟುಂಬದಲ್ಲಿ ಕಲಹಗಳು ಅತೀ ಸಣ್ಣ ಕಾರಣಗಳಿಗೆ ಹುಟ್ಟಿಕೊಂಡು, ಬದುಕು ಈಗಿನ ಸ್ಥಿತಿಗೆ ತಲುಪಿರಬೇಕು. ಅವನಣ್ಣ ಅರಬೀ ದೇಶದಲ್ಲಿದ್ದ.  ಪರದೇಶಕ್ಕೆ ಹೋಗುವಾಗ ಮದುವೆಯಾಗಿರಲಿಲ್ಲ. ಅಣ್ಣ ಅರಬೀ ದೇಶದಲ್ಲಿ ದುಡಿಯಲು ಹೋದ ನಂತರ ಮನೆಯಲ್ಲಿ ಅವನಮ್ಮ ಮತ್ತು ಅವನು ವಾಸವಾಗಿದ್ದರು. ಆದಾಗಿ ಹದಿನೈದು ವರ್ಷಗಳೇ ಕಳೆದು ಹೋದವು. ಇಬ್ಬರಿಗೂ ಮದುವೆಯಾಗಿತ್ತು. ಅಮ್ಮ ತೀರಿಕೊಂಡಿದ್ದರು. ಅರಬೀ ದೇಶದಲ್ಲಿದ್ದ ಅಣ್ಣ, ತಾನು ಹುಟ್ಟಿದ್ದ ಊರಿನಲ್ಲೇ ಹೊಸ ಮನೆ ಕಟ್ಟಿಸಿದ. ಹೊಸ ರೇಷನ್ ಕಾರ್ಡು ಮಾಡಿಸಿದ. ದಾಖಲೆಗಳಿಗೆ ಅನಿವಾರ್ಯವಾಗಿದ್ದ ಕಾರಣ ಹೊಸ ಮನೆಯ ವಿಳಾಸವಿರುವ ಕಾರ್ಡು ಮಾಡಿಸಿದ.  ಹಳೆಯ ರೇಷನ್ ಕಾರ್ಡಿನಲ್ಲಿ ಅಣ್ಣನ ಹೆಸರು ಅಳಿಸಿ ಹೋಯಿತು. ಈಗ ತಮ್ಮನೇ ಯಾಜಮಾನನಾಗಿರುವ ಹೊಸ ರೇಷನ್ ಕಾರ್ಡು, ತಮ್ಮನಿಗೂ ಸಿಕ್ಕಿತ್ತು.  ಅಣ್ಣ ಇನ್ನೂ ಅರಬೀ ದೇಶದಲ್ಲೇ ಇದ್ದ ಕಾರಣ ಹೊಸ ಮನೆಯನ್ನು ಎರಡು ವರ್ಷ ಬಾಡಿಗೆಗೆ ಕೊಟ್ಟಿದ್ದ. ಅಣ್ಣ ಅರಬೀ ದೇಶದಲ್ಲಿ ದುಡಿದದ್ದು ಸಾಕೆನಿಸಿ ತಾನು  ಬಾಡಿಗೆಗೆ ಕೊಟ್ಟಿದ್ದ ಮನೆಯನ್ನು ಬಾಡಿಗೆದಾರರಿಂದ ಬಿಡಿಸಿಕೊಂಡು ವಾಸಿಸತೊಡಗಿದ. ಹಳೆಯ ಕಾರ್ಡು ಇರುವಾಗ ಅಣ್ಣನ ಹೆಸರಿನಲ್ಲಿ ಗ್ಯಾಸು ಕನೆಕ್ಶನ್ ಇತ್ತು. ಗ್ಯಾಸು ಅಂಡೆ ಹಳೆಯ ಮನೆಯಲ್ಲಿತ್ತು. ಅದು ಅವರ ಆಗೀನ ಕುಟುಂಬದ ಮನೆಯಾಗಿತ್ತು. ತಮ್ಮ  ತಾನು ಯಜಮಾನನಾಗಿರುವ ಕಾರ್ಡು  ತೋರಿಸಿ ಇನ್ನೊಂದು ಹೊಸ ಗ್ಯಾಸು ಕನೆಕ್ಶನ್ ಪಡೆದಿದ್ದ. ಒಟ್ಟು ಎರಡು ಅಂಡೆಗಳು ಅವನ ಮನೆಯಲ್ಲಿದ್ದವು. ಅಣ್ಣ ಹೊಸ ಮನೆಗೆ ವಾಸ ಮಾಡಲು ನಿರ್ಧರಿಸಿದ ನಂತರ ತಮ್ಮನಿಗೆ ಹೇಳಿದ್ದ. ಹೇಗೂ ನಿನ್ನ ಕಾರ್ಡಿನಲ್ಲಿ ನೀನು ಹೊಸ ಕನೆಕ್ಶನ್ ಪಡೆದಿದ್ದಿ, ನನ್ನ ಹೆಸರಿನಲ್ಲಿಯೇ ಇರುವ ಇನ್ನೊಂದು ಅಂಡೆಯನ್ನು ನನಗೆ ಕೊಡು ಅಂದದಕ್ಕೆ, ತಮ್ಮ ಹೇಳಿದ್ದ, ನಿಮಗೆ ಅಂಡೆ ಕೊಟ್ಟರೆ ನನಗೆ ತೊಂದರೆಯಾಗುತ್ತದೆ, ಒಂದು ಅಂಡೆ ಮುಗಿದು ಇನ್ನೊಂದನ್ನು ಪಡೆಯಲು ಮೂವತ್ತು ದಿನಗಳ ಅಂತರ ಬೇಕು ನನ್ನ ಬಳಕೆ ತುಂಬಾ ಹೆಚ್ಚಿರುವ ಕಾರಣ ಗ್ಯಾಸು ಬೇಗ ಮುಗಿಯುತ್ತದೆ, ಮುಗಿದ ನಂತರ ಸಿಗುವುದಕ್ಕೆ ಕೆಲವು ದಿನಗಳ ಅಂತರವಿರುತ್ತದೆ ಆಗ ಬಳಸಲು ತುಂಬಿ ಸ್ಟಾಕ್ ಇಟ್ಟಿರುವ ಇನ್ನೊಂದು ಅಂಡೆ ನನಗೇ ಬೇಕಾಗುತ್ತದೆ, ಹಾಗಾಗೀ ಕೊಡುವುದಿಲ್ಲ, ಹೇಗೂ ನಿಮ್ಮ ಬಳಿ ಹೊಸ ಕಾರ್ಡು ಇದೆ ಅದನ್ನು ತೋರಿಸಿ ಕನೆಕ್ಶನ್ ಪಡೆಯಿರಿ ಅಂದಿದ್ದ. ಸಂಭಂದ ಒಡೆದು ಹೋದದ್ದು ಇಷ್ಟೇ ಇಷ್ಟು ಕ್ಷುಲ್ಲಕ ವಿಷಯಕ್ಕೆ. ತಪ್ಪು ಸರಿಯ ಚರ್ಚೆಗೆ ಬರೆದದ್ದಲ್ಲ, ಗ್ಯಾಸಿನಂಡೆಗೆ ಕಾರ್ಡು ಲೈಟು ಬಿಲ್ಲು ಕೊಡಬೇಕು ಎಂಬ ಹೊಸ ನಿಯಮದ ವಿಷಯ ನ್ಯೂಸ್ ಪೇಪರಿನಲ್ಲಿ ಓದುವಾಗ ತುಂಡಾಗಿ ಹೋದ ಸಂಭಂದವೊಂದರ ನೆನಪಾಯಿತು.  
 

Rating
No votes yet