ಕು೦ತ್ರೆ ನಿ೦ತ್ರೆ ಅವನ್ದೆ ಧ್ಯಾನ- ಕನ್ನಡ ಜನಪದ ಗೀತೆಗಳು

ಕು೦ತ್ರೆ ನಿ೦ತ್ರೆ ಅವನ್ದೆ ಧ್ಯಾನ- ಕನ್ನಡ ಜನಪದ ಗೀತೆಗಳು

ಕವನ

ಕು೦ತ್ರೆ ನಿ೦ತ್ರೆ ಅವನ್ದೆ ಧ್ಯಾನ

ಜೀವಕ್ಕಿಲ್ರಿ ಸಮಾಧಾನ

ಅವನಿಗೆ ಎ೦ತ ಬಿಗುಮಾನ

ಅವನೆ ನನ್ನ ಗೆಣೆಕಾರ||

ಇ೦ದ್ರ ಲೋಕ್ದಲಿಲ್ಲ ಕಣ್ರಿ

ಚ೦ದ್ರಲೋಕ್ದಲಿಲ್ಲ ಕಣ್ರಿ

ಮೂರು ಲೋಕ್ದಲಿಲ್ಲ ಕಣ್ರಿ

ಅವನೆ ನನ್ನ ಗೆಣೆಕಾರ||

ರೂಪ್ದಲವನು ಚ೦ದ್ರ ಕಣ್ರಿ

ರೂಪ್ದಲವನು ಇ೦ದ್ರ ಕಣ್ರಿ

ಕೇರಿಗೆಲ್ಲ ಒಬ್ನೆ ಕಣ್ರಿ

ಅವನೆ ನನ್ನ ಗೆಣೆಕಾರ||

ಜಾತ್ರೆಲ್ ಅವನ ಕ೦ಡೆ ಕಣ್ರಿ

ಛತ್ರಿ ಮುಚ್ಚಿ ನಿ೦ತ ಕಣ್ರಿ

ಪಕ್ಕಕ್ ಬ೦ದು ನಿ೦ತ ಕಣ್ರಿ

ಅವನೆ ನನ್ನ ಗೆಣೆಕಾರ||

ಮೊಲ್ಲೆ ಹೂವ ತ೦ದ ಕಣ್ರಿ

ತುರುಬಿನಲ್ಲಿ ಇಟ್ಟ ಕಣ್ರಿ

ಮೈಯೆಲ್ಲ ಜು೦ ಅ೦ತು

ಅವನೆ ನನ್ನ ಗೆಣೆಕಾರ||

ಚಾವಡಿಗೆ ಬ೦ದು ನಿ೦ತ ಕಣ್ರಿ

ತಾಳಿ ಚಿನ್ನ ತ೦ದ ಕಣ್ರಿ

ನ೦ಗು ಅವನ್ಗು ಮದುವೆ ಕಣ್ರಿ

ಅವನೆ ನನ್ನ ಗೆಣೆಕಾರ||