ಈಜಿಪ್ಟ್ ನಲ್ಲಿ ಆದ ಕ್ರಾಂತಿ, ಭಾರತದಲ್ಲಿ ಆಗದೇಕೆ?
ನಾ ಮೊದಲೇ ಹೇಳಿಕೊಂಡಂತೆ ಪ್ರತಿನಿತ್ಯ ಬರೆಯುವ ಬರಹಗಾರನಲ್ಲ, ಆದರೆ ಕೆಲವೊಮ್ಮ್ಮೆ ಕೆಲವೊಂದು ,ದಿನ ನಿತ್ಯ ನಡೆಯುವ ವಿದ್ಯಮಾನಗಳಿಗೆ ಪ್ರತಿ ಸ್ಪಂದಿಸದೇ ಇರಲು ಆಗುವುದಿಲ್ಲ, ಅದರ ಪರಿಣಾಮವೇ ಈ ಲೇಖನ,
ಎಲ್ಲರಿಗೂ ಗೊತ್ತಿರುವ ಹಾಗೆ ಈ ಮದ್ಯೆ ಈಜಿಪ್ಟ್ ನಲ್ಲಿ ಬಹು ದೊಡ್ಡ ಆಂದೋಲನವೇ ನಡೆಯುತ್ತಿದೆ, ಅದಕ್ಕೆ ಮುಖ್ಯ ಕಾರಣ ಅಲ್ಲಿಯ ದುರಂಕುಶ ಆಡಳಿತಕ್ಕೆ ಹೆಸರಾದ ವ್ಯಕ್ತಿ 'ಹೋಸ್ನಿ ಮುಬಾರಕ್'...
ಬಹು ವರ್ಷಗಳಿಂದ ಅದೇಗೋ ಮುಬಾರಕ್ ದುರಾಡಳಿತ ಸಹಿಸಿಕೊಂಡು ಬಂದಿದ್ದ ಆ ದೇಶದ ಜನ ಬೇಸತ್ತು ಬುದ್ಧಿ ಕಲಿಸಲು ಮುಂದಾದಾಗ ಪ್ರಪಂಚದ ಯಾವೊಂದು ದೇಶದವರೂ ಸಹ ಅದಕ್ಕಸ್ಟು ಪ್ರಾಮುಖ್ಯತೆ ಕೊಡಲಿಲ್ಲ,ಅದು ಬಹುತೇಕ ವಿಪಲ ಪ್ರಯತ್ನವೇ ಅಂದುಕೊಂಡರು, ಆದರೆ ಸಣ್ಣ ಕಿಡಿ ಸಹ ಬಹು ಬೇಗ ಹರಡಿ ಸುತ್ತಮುತ್ತಿನದೆಲ್ಲವನು ನಾಶ ಮಾಡಬಹುದೆನ್ನುವದನ್ನು ಮರೆತರೆಂದೆ ಹೇಳಬಹುದು...
ಈಗ ಆ 'ಮುಬಾರಕ್ ಹಠಾವೋ ಚಳುವಳಿ' ತೀವ್ರ ಮಟ್ಟಕ್ಕೆ ತಲುಪಿ , ಮುಬಾರಕ್ ಮಗ, ಹೆಂಡತಿ ಮಕ್ಕಳೆಲ್ಲ ದೇಶ ಬಿಟ್ಟು ರಾತ್ರೋ ರಾತ್ರಿ ಪರದೇಶಕ್ಕೆ ಪ್ರಾಣ ಉಳಿಸಿಕೊಳ್ಳಲು ವಿಮಾನವತ್ತಿ ಪರಾರಿಯಾದರು...
ಬಹುಕಾಲ ದುರಹಂಕಾರದ ಆಡಳಿತ ನಡೆಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಮುಬಾರಕ್ ಮೊದಲೆಲ್ಲ ಆ ಚಳುವಳಿಯನ್ನ ಕಡೆಗಣಿಸಿದರು, ಆ ಚಳುವಳಿ ಈ ಮಟ್ಟಕ್ಕೆ ಹೋಗಬಹುದೆನ್ನು ಸಣ್ಣ ಸುಳಿವೂ ಸಹಾ ಅವರಿಗೆ ಸಿಗಲಿಲ್ಲ.
ಮೊದ ಮೊದಲು ಕಡೆಗಣಿಸಿ, ನಂತರ ಸೈನ್ಯ ಬಿಟ್ಟು ಕೆಲವೊಬ್ಬರನ್ನು ಸಾಯಿಸಿದರೂ, ಅಲ್ಲಿಯ ಜನ ಬಗ್ಗದೆ ಜಗ್ಗದೆ ಮುಬಾರಕ್ ಗೆ ಈಗ ದೇಶ ಬಿಟ್ಟು ಪಲಾಯನ ಮಾಡದೆ ಬೇರೆ ವಿಧಿಯೇ ಇಲ್ಲದಂತಾಗಿದೆ ....
ಕೆಲವೊಂದು ಪತ್ರಿಕಾ ಸುದ್ಧಿಗಳ ಪ್ರಕಾರ ಈ ಜನರ ಚಳುವಳಿ, ದಂಗೆ ಹಿಂದೆ ಅಮೆರಿಕಾದ ಕುತಂತ್ರವಿದೆ ಎಂಬ ಸುದ್ಧಿ ಇದೆ....
ಅಮೆರಿಕಾದ ಸ್ವಭಾವ ಗೊತ್ತಿರುವವರಿಗೆ ಇದು ನಿಜವಿರಬಹುದು ಎಂದೆನಿಸದೆ ಇರದು...ಆಗಾಗ ದೇಶ ದೇಶಗಳ ನಡುವೆ ವೈಮನಸ್ಯ ಮೂಡಿಸಿ ಅಲ್ಲಿ ಮಧ್ಯಸ್ತಿಕೆ ವಹಿಸಿದಂತೆ ಮಾಡಿ ಕೈ ಕೊಡುವ ಅಮೇರಿಕ ಈ ಚಳುವಳಿಗೆ ಸಹಾ ಬೆಂಬಲ ಕೊಟ್ಟಿರಬಹುದು, ಮತ್ತು ಅದಕ್ಕೆ ಅಮೆರಿಕಾದ ಕೆಲವೊಂದು ದೂರದೃಷ್ಟಿಯ ಯೋಜನೆಯೂ ಮತ್ತ್ತು ಮಧ್ಯ ಏಷ್ಯಾದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು , ತನ್ನ ಕೈ ಗೊಂಬೆ ಸರಕಾರವನ್ನು ಸ್ಥಾಪಿಸಲು ಸಹಾ ಅದಕ್ಕೆ ಮನಸಿರಬಹುದು.
ಈಗ ಇದನ್ನೇ ನಮ್ಮ ದೇಶಕ್ಕೆ ಅನ್ವಯ್ಸಿ ನೋಡುವುದಾದರೆ, ಸ್ವಾತಂತ್ರ ಪೂರ್ವದಲ್ಲಿ ಕೋಟ್ಯಾಂತರ ಜನ, ಶತಮಾನಗಳ ಕಾಲ ವಿದೇಶಿಯರ ದಬ್ಬಾಳಿಕೆ ತುತ್ತಾಗಿ, ಸಿಟ್ಟಾಗಿ ,ಒಟ್ಟಾಗಿ ಪ್ರಾಣಕ್ಕೆ ಕುತ್ತು ಬಂದರೂ ಹೆದರದೆ ಒಗ್ಗಟ್ಟಾಗಿ ಕೋಟ್ಯಾಂತರ ಸಂಖ್ಯೆಯಲ್ಲಿ ಬಾಗವಹಿಸಿ ತನು-ಮನ-ಧನ ಅರ್ಪಿಸಿ ,ಕೊನೆಗೆ ಪ್ರಾಣ ಸಹಾ ಅರ್ಪಿಸಿ ತಂದ ಆ 'ಸ್ವಾತಂತ್ರ್ಯದ' ಗತಿ ಈಗ ಹೇಗಾಗಿದೆ ನೋಡಿ!
ಎಲ್ಲೆಲ್ಲೂ ಅತ್ತ್ಯಾಚಾರ, ಅನಾಚಾರ, ಸ್ವಜನ ಪಕ್ಷಪಾತ , ಹಗರಣಗಳ ಸರಮಾಲೆ, ಆಡಳಿತದವರು, ವಿರೋಧ ಪಕ್ಷವನ್ನು, ವಿರೋಧ ಪಕ್ಷಗಳವರು ಆಡಳಿತ ಪಕ್ಷವನ್ನು ಈ ಹಗರಣಗಳಿಗೆ ದೂಷಿಸುತ್ತ ಕಾಲ ವ್ಯಯಿಸುತ್ತಿದ್ದಾರೆ...
ಒಮ್ಮೆ ಯೋಚಿಸಿ ಸ್ವಾತಂತ್ರ ಪೂರ್ವದಲ್ಲಿ ಗಾಂಧೀ, ನೆಹರೂ ಸುಭಾಶ್, ಆಜಾದ್, ತಿಲಕ, ಅಂತ ಮಹಾನ್ ಚೇತನಗಳ ಕರೆಗೆ ಓಗೊಟ್ಟು ತನು ಮನ ಧನ ಕೊನೆಗೆ ಪ್ರಾಣ ಸಹಾ ಅರ್ಪಿಸಿ ಅಮರ ಆದರು. ಈಗ ಮತ್ತೊಮ್ಮೆ ನಮ್ಮ ಸ್ವಾತಂತ್ರ್ಯಕ್ಕಲ್ಲದಿದ್ದರೂ , ನಮ್ಮ ದೇಶದ ಈಗಿನ ಜ್ವಲಂತ ಸಮಸ್ಯೆಗಳಿಗಾಗಿ ಹೋರಾಡೋಣ ಬನ್ನಿ ಎಂದು ಯಾರನ್ನಾದರೂ ಕರೆಯಿರಿ, ಬರ್ತಾರೆಯೇ ನೋಡೋಣ! ಭಾರತದ ಪ್ರಸ್ತುತ ಜನರೆಲ್ಲಾ ತಂತಮ್ಮ ದಿನ ನಿತ್ಯದ ಜಂಜಡಗಳಲ್ಲೇ ಮಗ್ನರಾಗಿ , ಈ ದೇಶದ ಬಗ್ಗೆ ಚಿಂತಿಸಲು ಅರೆ ಗಳಿಗೆಯೂ ಯಾರೊಬ್ಬರಿಗೂ ಮನಸೀಲ್ಲವೇ ಎಂದೆನಿಸುವುದು ಸಹಜ. ಸ್ವಾತಂತ್ರ್ಯ ಬಂದ ಕೇವಲ ೬೪ ವರ್ಷಗಳಿಗೆ ನಮ್ಮ ದೇಶದ ಸ್ಥಿತಿ ಹೀಗಾದರೆ ಇನ್ನು ತಲೆ ತಲಾಂತರಗಳಿಗೆ ಪರಿಸ್ತಿತಿ ಅದೆಸ್ತು ಗಮ್ಭೀರವಾಗಬೇಡ ಸ್ವಲ್ಪ ಊಹಿಸಿಕೊಳ್ಳಿ..ಸದ್ಯದ ಸ್ಥಿತಿ ಹೇಗಿದೆಯಂದರೆ ಮೊದಲು ನಾನು, ನಮ್ಮ ಮನೆಯವರು, ನಂತರ ಸ್ನೇಹಿತರು ಅವರ ಮನೆಯವರು, ಬಂಧು ಬಳಗ, ಆಮೇಲೆ ಅಕ್ಕ ಪಕ್ಕದವರು, ಕೊನೆಗೆ ಈ ದೇಶ, ಈ ಪ್ರಪಂಚ ಅನ್ನುವ ಹಾಗಿದೆ ಭಾರತದವರ ಮನೋಭಾವ, ಮುಂದುವರೆದ , ಅಸ್ಟೇ ಏಕೆ ಹಿಂದೆ ಬಿದ್ದ ದೇಶಗಳವರೂ ಸಹಾ ಇಂತಾಹದ್ದಕ್ಕೆ (ಭ್ರಷ್ಟಾಚಾರ ,ಕೊಲೆ ಸುಲಿಗೆ , ಅತ್ಯಾಚಾರ, ಅನಾಚಾರ,) ಧಂಗೆ ಎದ್ದು ಅದಕ್ಕೆ ಪರಿಹಾರ ಕಂಡುಕೊಂಡಿದ್ದಾರೆ, ನಮ್ಮ ದೇಶಕ್ಕೆಕೆ ಇದು ಸಾಧ್ಯವಿಲ್ಲ ಅಂತ ನಮಗೆಲ್ಲ ಅನ್ನಿಸುವುದು ಸಹಜ...
ಅಲ್ಲಾಗುವುದು ಇಲ್ಲೇಕೆ ಸಾಧ್ಯವಿಲ್ಲ ಅಂದರೆ ಅದಕ್ಕೆ ಕಾರಣ ನಾವೇ..... ಹೌದು ಎಲ್ಲರೂ ಇದನ್ನೆಲ್ಲಾ ಯಾರೋ ಯಾವತ್ತೋ ಮಹಾ ಪುರುಷರು ಜನ್ಮ ತಾಳಿ
ಬಂದು ಇದಕ್ಕೆಲ್ಲ ಅಂತ್ಯ ಕಾಣಿಸುತಾರೆ ಅನ್ನುವುದು ನಮ್ಮ ತಲ-ತಲಾಂತರದಿಂದ ಬಂದ ಅನಿಸಿಕೆ...
ಇನ್ನೊಂದು ಕಾರಣವೆಂದರೆ ಎಲ್ಲಾದರೂ ಏನಾದರು ಅದರಿಂದ ಪ್ರಯೋಜನವಾದರೆ(ನಮಗೆ) ಮಾತ್ರ ಆ ತರಹದ್ದಕ್ಕೆ ಜನ ತಯಾರು, ಅಲ್ಲಿ ನಯಾ ಪೈಸೆ ಪ್ರಾಯೋಜನೆ ಇಲ್ಲ ಅಂದರೆ ಯಾರೊಬ್ಬರು ಅಂತಹದ್ದಕ್ಕೆ ಮುಂದೆ ಬರಲ್ಲ.
ಮತ್ತೊಂದು ಕಾರಣ ಹಾಗೆ ಮುಂದೆ ಬಂದರೂ, ಯಾರೊಬ್ಬರೂ ನಾಯಕರಾಗಲು ಮುಂದೆ ಬರಲ್ಲ.. ಇದು ಅನುಭವ ಕಲಿಸಿದ ಇತಿಹಾಸದ ಪಾಠ .. ಇಂತ ಚಳುವಳಿ, ಧಂಗೆಗೆ ಪ್ರೋತ್ಸಾಹ ಕೊಡುವವರೂ , ಮುಂದಾಳತ್ವ ವಹಿಸಿಕೊಳ್ಳುವವರು ಅವರ ಪ್ರಾಣದ ಮೇಲಿನ ಆಶೆಯನ್ನೇ ಬಿಡಬೇಕು! ಈಗಿನ ತರಾತುರಿಯ ಜೀವನದಲ್ಲಿ ಈ ತರಹದ್ದಕ್ಕೆ ಅದ್ಯಾರು ತಾನೇ ಯೋಚಿಸಿ, ಮುಂದೆ ಬರುತ್ತಾರೆ,
ಹಾಗಾದರೆ ಈಜಿಪ್ಟ್ ನಲ್ಲಿ ಆದದ್ದು ನಮ್ಮ ದೇಶದಲ್ಲಿ ಆಗದೆ?
ಆಗಬಹುದು ...
ಆಗುವುದೇ ಆದರೆ ಈ ಜಾದೂ ಭಾರತದಲ್ಲಿ ಅದ್ಯಾವಾಗ ಆಗುವುದು...????
ನನಗಂತೂ ಗೊತ್ತಿಲ್ಲ ....
ನಿಮಗೆ ಗೊತ್ತ?
Comments
ಉ: ಈಜಿಪ್ಟ್ ನಲ್ಲಿ ಆದ ಕ್ರಾಂತಿ, ಭಾರತದಲ್ಲಿ ಆಗದೇಕೆ?
In reply to ಉ: ಈಜಿಪ್ಟ್ ನಲ್ಲಿ ಆದ ಕ್ರಾಂತಿ, ಭಾರತದಲ್ಲಿ ಆಗದೇಕೆ? by GOPALAKRISHNA …
ಉ: ಈಜಿಪ್ಟ್ ನಲ್ಲಿ ಆದ ಕ್ರಾಂತಿ, ಭಾರತದಲ್ಲಿ ಆಗದೇಕೆ?
ಉ: ಈಜಿಪ್ಟ್ ನಲ್ಲಿ ಆದ ಕ್ರಾಂತಿ, ಭಾರತದಲ್ಲಿ ಆಗದೇಕೆ?