ಜಯಂತರ ಪಾತ್ರಗಳು, ಮನಸ್ಸು ಮತ್ತು ಜಗ್ಜಿತ್ರ ಹಾಡುಗಳು

ಜಯಂತರ ಪಾತ್ರಗಳು, ಮನಸ್ಸು ಮತ್ತು ಜಗ್ಜಿತ್ರ ಹಾಡುಗಳು

 


ಜೀವನದ ಹಲವು ಮಜಲುಗಳಲ್ಲಿ ನಮ್ಮದೆನ್ನಿಸುವಷ್ಟು ಆಪ್ಯಾಯಮಾನವಾದ ಸಂಗತಿಗಳಿರುವಂತೆಯೇ, ಯಾರೋ ಅಪರಿಚಿತ್ರದ್ದೆನ್ನಿಸುವಷ್ಟು ನಮ್ಮದೇ ಸಂಗತಿಗಳಿರುತ್ತವೆ. ಅಥವಾ ನಾವು ಹಾಗೆ ಕರೆಯಲು ಇಚ್ಚಿಸುತ್ತೆವೆಯೋ ಏನೋ ಇದುವರೆವಿಗೂ ಈ ಭಾವ ಒಂದು ಒಗಟಿನಂತೆಯೇ ನನಗೆ ತೋರಿದೆ. ಈ ವಿಷಯಗಳಲ್ಲಿ ಅಂತರ್ಮುಖಿಯಾಗಿ ಯೋಚಿಸಿದಷ್ಟೂ ಒಮ್ಮೊಮ್ಮೆ ಏನೋ ಕಳೆದುಕೊಂಡಂತೆ ಮತ್ತೊಮ್ಮೆ  ಏನೋ ಅಸಾಧ್ಯವಾದುದನ್ನು ಸಾಧಿಸಿದಂತೆ ಸುಖಃ ದುಖಃ ಗಳ ಸಮ್ಮಿಳಿತ ಭಾವ. ಈ ಭಾವ ಯಾವಾಗಲೂ ಮೂಡುವುದಿಲ್ಲ, ಸಾಮಾನ್ಯವಾಗಿ ನಾನು ಅನುಭವಿಸಿದಂತೆ, ಜಗಜಿತ್ ಸಿಂಗ್ ರ ಆ ಗಂಭೀರ ಧ್ವನಿಯಲ್ಲಿನ "ಕಾಗಜ್ ಕಿ ಕಷ್ತಿ ", " ಶಾಮ್ ಸೆ ಆಂಖ್ ಮೇ ನಮೀ ಸಿ ಹೈ" ಹಾಡುಗಳನ್ನು ಕೇಳುವಾಗ, ಜಯಂತರ ಕಥೆಗಳಲ್ಲಿನ ಪಾತ್ರಗಳ ತೊಲಳುವಿಕೆಯ ಚಿತ್ರಣಗಳನ್ನು ಓದಿದಾಗ ಹಾಗು ಅದನ್ನು ಕಲ್ಪಿಸಿಕೊಂಡಾಗ. ಮೊಹಮ್ಮದ್ ರಫಿಯ ಹಳೆಯ ಹಾಡುಗಳನ್ನೋ, ಲತಾರ ಹಳೆಯ ಹಾಡುಗಳನ್ನೋ ಕೇಳಿದಾಗ ಮನಸಿನ ದುಖಗಳೆಲ್ಲ ಕವಿತೆಯಂತೆ, ತೊದಲು ನುಡಿಗಳಂತೆ, ಅಪೂರ್ಣ ಚಿತ್ರಗಳಂತೆ, ನಮ್ಮ ಕಣ್ಣ ಮುಂದೆ ಹಾದು ಹೋದಂತೆ ಭಾಸವಾಗುತ್ತದೆ.  ಆಗಲೇ ಮನ ಹಾಡುತ್ತದೆ.....

 

ಏಕೆ ಕಾಡುವೆ ಹೀಗೆ ನನ್ನ

ಜಯಂತರ ಕಥೆಯ ಪಾತ್ರಗಳಂತೆ,

ಜಗಜಿತ್ರ ಆ ಆಳ ಧ್ವನಿಯಂತೆ,

ರಫಿಯ ಆ ಭಾವದ ಲಹರಿಯಂತೆ,

ಲತಾರ ಹಾಡಿನ ಝಾರಿಯಂತೆ.

 

ಏಕೆ ಕಾಡುವೆ ನನ್ನ ನೀ ಮನವೇ

ಮರಳದ ಆ ಹಳೆಯ ಬಾಲ್ಯಕ್ಕೆ

ಮತ್ತೊಮ್ಮೆ ಆ ಶಾಲೆಯ ಕೊನೆಯ ಬೆಂಚಿಗೆ 

ಒಳಗೊಳಗೇ ಕಾಡುವ ಆ ಸ್ನೇಹಕ್ಕೆ 

 

ಹೀಗೇಕೆ ಬೇಡುವಂತೆ ಮಾಡುವೆ ನೀ

ಹಳೆಯ ಸ್ನೇಹದ ಮಧುರ ಸವಿಗೆ

ಗೆಳತಿಯ ನೆನೆದು ಮನದಲ್ಲೇ ಮಂಡಿಗೆ ತಿಂದ ಬಗೆಗೆ

ಗೆಳೆಯರೊಂದಿಗೆ ಬೆರೆತು ನಕ್ಕ ನಗೆಗೆ

ಅದುವೇ ಜೀವನವೆಂದು ಇಂದು ಅರಿತ ಬಗೆಗೆ  
Rating
No votes yet