ಮುತ್ತುಗಳ ಲೆಕ್ಕ
ಬೇಟದಾಟದಲಿರೆ ಇನಿಯ ಇನಿಯೆ, ಮುತ್ತಿನ ಸರವವಳದು ಹರಿಯೆ
ಮೂರಲ್ಲೊಂದು ಉರುಳಿದವು ನೆಲಕೆ; ಐದರಲೊಂದು ಹಾಸಿಗೆ ಕೆಳಗೆ;
ಅವಳು ಹುಡುಕಿದಳು ಆರಲ್ಲೊಂದು; ಇನಿಯ ಹೆಕ್ಕಿಹನು ಹತ್ತರಲೊಂದು
ದಾರದಲೀಗ ಉಳಿದರೆ ಆರು, ಸರದಲಿ ಮೊದಲೆಷ್ಟು ಮುತ್ತಿದ್ದಾವು ಹೇಳು!
ಸಂಸ್ಕೃತ ಮೂಲ: ಭಾಸ್ಕರಾಚಾರ್ಯನ ’ಲೀಲಾವತಿ’ ಯ ೫೬ನೇ ಶ್ಲೋಕ
ಹಾರಸ್ತಾರಸ್ತರುಣ್ಯಾ ನಿಧುವನ ಕಲಹೇ ಮೌಕ್ತಿಕಾನಾಂ ವಿಶೀರ್ಣೇ
ಭೂನೌ ಯಾತಾತ್ರಿಭಾಗಃ ಶಯನತಲಗತಃ ಪಂಚಮಾಂಶೋಂಸ್ಯ ದೃಷ್ಟಃ |
ಪ್ರಾಪ್ತಃ ಷಷ್ಟಾಃ ಸುಕೇಶ್ಯಾ ಗಣಕ ದಶಮಕಃ ಸಂಗ್ರಹೀತಃ ಪ್ರಿಯೇಣ
ದೃಷ್ಟಂ ಷಟ್ಕಂಚ ಸೂತ್ರೇ ಕಥಯ ಕತಿಪಯೈಃ ಮೌಕ್ತಿಕೈರೇಷ ಹಾರಃ ||
-ಹಂಸಾನಂದಿ
ಕೊ: ಈ ಲೆಕ್ಕವನ್ನು ಬಿಡಿಸುವ ಕೆಲಸವನ್ನು ಸಂಪದಿಗರಿಗೆ ಬಿಡಲಾಗಿದೆ :-)
ಕೊ.ಕೊ: ಈ ಪದ್ಯದ ಬಗ್ಗೆ,
ಲೀಲಾವತಿಯ ಬಗ್ಗೆ ಹೆಚ್ಚಿನ ಹಿನ್ನಲೆಗಾಗಿ ಇಲ್ಲಿ ಚಿಟಕಿಸಿ
.
Rating
Comments
ಉ: ಮುತ್ತುಗಳ ಲೆಕ್ಕ
In reply to ಉ: ಮುತ್ತುಗಳ ಲೆಕ್ಕ by kamath_kumble
ಉ: ಮುತ್ತುಗಳ ಲೆಕ್ಕ
ಉ: ಮುತ್ತುಗಳ ಲೆಕ್ಕ