ಬಜೇಟ ಬಂತು ಬಜೇಟ

ಬಜೇಟ ಬಂತು ಬಜೇಟ

ಕವನ

 ಬಜೇಟ ಬಂತು ಬಜೇಟ

ಸರಕಾರ ತಂತು ಬಜೇಟ

ನಾಡಿನ ಅಭಿವೃಧ್ಧಿಗೆ

ಹಣದಲ್ಲಿರುವ ಬಜೇಟ

ನೂರಕ್ಕಿಲ್ಲ ಬೆಲೆ ಈಗ

ಕೋಟಿಯಲ್ಲಿದೆ ಖರ್ಚಿನ ವೇಗ

ರಾಜಕಾರಣಿಗಳ ಆಶ್ವಾಸಣೆ

ಕುಂದಿದೆ ಸತ್ಯದ ವಾಸನೆ

ಸಿಂಹಾಸನ ಏರಿದೆ ಬಂಗಾರ

ನಿಜ ರೂಪವೆ ಸ್ತ್ರೀಗೆ ಶೃಂಗಾರ

ಸ್ವಾರ್ಥದ ಕೆಲಸಕೆ ಬೇಕಿದೆ ಲಾಭ

ವ್ಯಾಪಾರಿಗಳ ಮನ ಅಗಲಾದ ನಭ

ಹೇಳಿದ ಹಾಗೆ ಮಾಡುವರಿಲ್ಲ

ಮಾಡಿದ್ದನ್ನು ಹೇಳುವರಿಲ್ಲ

ಬದಲಾಗಿದೆ ಕಾಲ ಈಗ ಕಲಿಯುಗ

ಒಳೆಯ ಕೆಟ್ಟದ್ದು ತಿಳಿಯುವುದಿಲ್ಲ

ನಿರುದ್ಯೋಗದ ಚಿಂತೆಗೆ ಕಡಿವಾಣ

ನಡೆಯದಿರಲಿ ರಾಜಕೀಯದ ರಾಮಾಯಣ

ಬಜೇಟ ಬಂತು ಬಜೇಟ

ಶುಭವಾಗಲಿ ಎಂದಿತು ಬಜೇಟ