ಬಾಲ್ಯ

ಬಾಲ್ಯ

ಕವನ

ಈ ಸುಂದರ ಸಂಜೆಯಲ್ಲಿ,

ನೆನಪುಗಳು ಮರುಕಳಿಸುತ್ತಿವೆ,

ಸುಂದರವಾದ ಬಾಲ್ಯದ ನೆನಪುಗಳು.

ಗೆಳೆಯ-ಗೆಳತಿಯರೊಂದಿಗೆ ನಲಿದಾಡಿದ

ಆ ಕ್ಷಣಗಳು...

ಆಕಾಶದ ಚಂದ್ರಮ-ಚುಕ್ಕಿಗಳಂತೆ,

ಗುರು-ಶಿಷ್ಯರಿಂದ

ತುಂಬಿ ತುಳುಕುವ ಆ ಕೋಣೆಗಳು.

ಹಾದಿ-ಕುಣಿದ, ಆಡಿದ,ಓಡಿದ,

ಆ ಮೈದಾನಗಳು.

ಮರಳಿ ಬರುವುದೇ ಆ ಸುಂದರವಾದ ಜೀವನ?

ಬರೀ ಸ್ಮರಣೆಯಲ್ಲೇ ಸಾಗುವುದು

ನಮ್ಮ ಮುಂದಿನ ಜೀವನ.

ಆಗಾಗ್ಗೆ ಬರುತಿರಲಿ ಈ ಸುಂದರ

ಸವಿನೆನಪುಗಳ ಪ್ರವಾಹ,

ತಿಳಿಯಾಗಲಿ ನನ್ನ ಮನದ

ದುಃಖ ದುಮ್ಮಾನದ ಕಲರವ

 

ರೇಣುಕಾ.ಬ.ಬಿರಾದಾರ.