ಕದ್ದು ನಿನ್ನ ಕಡೆ ನೋಡುವಾಗಲೇ..

ಕದ್ದು ನಿನ್ನ ಕಡೆ ನೋಡುವಾಗಲೇ..

ಕವನ

 ನೆಡೆ ನೆಡೆ ನೆಡೆದು, ತುಡಿ ತುಡಿ ತುಡಿದು

ತಡವರಿಸಿತು ಹೃದಯ, ನಿನ್ನ ನೋಡಿದಾಗ
ನುಸು ನುಸು ಕನಸು, ಕ್ಷಣ ಕ್ಷಣಕು
ತೇವಗೊಂದಿದೆ ತನುವು, ಈಗ ಜೊತೆಯಾಗು
ಕಾಡಿದೆ ಮತ್ತೆ ಕಾಡಿದೆ, ಪ್ರೀತಿಯು ಶುರುವಾಗಿದೆ
ಕದ್ದು ನಿನ್ನ ಕಡೆ ನೋಡುವಾಗಲೇ, ಏನೊ ಒಂಥರ ಆಗಿದೆ
 
ಕೆಂದಾವರೆ ತೋಟದ ಒಡೆಯ ನಾನು ಇಲ್ಲಿಹೆ
ಮುದ್ದು ಗುಮ್ಮನಂತೆ ಬಂದು ನೀ ಹೃದಯ ಕದ್ದು ಒಯ್ದಿಹೆ
ಮುಂಜಾವೆದ್ದು ನಿನ್ನ ನನೆದು ನಿದಿರೆಗೆ ಮತ್ತೆ ಜಾರಿದೆ
ಕಣ್ಣಮುಚ್ಚಿ ತೆರೆಯುವ ತನಕ ನಿನ್ನ ಕನಸೆ ತುಂಬಿದೆ
ಮುಗಿಯದ ಮಾಯೆಯಿದು, ಪ್ರೇಮದ ಆಟವಿದು
ನೀ ಯಾರೆಂದು ಕೇಳಿದರೆ ಹೆಸರು ಹೇಳಲಾಗದು
 
ರಚ್ಚೆ ಹಿಡಿದೆ ನಿನಗಾಗಿ, ಕಚ್ಚಿದೆ ಒಲವು ಹಿತವಾಗಿ
ಮೆಚ್ಚಿರುವ ಮನಸೆ ನಿನ್ನ ನೆಚ್ಚಿರುವೆ ಕನಸೆ
ಕೂಗಿ ಹೇಳಬೇಕೆ ನಾನು? ಈ ಮೌನ ತಿಳಿಸದೇನು?
ನಿನ್ನ ನೆನೆದ ಕತ್ತಲು ಕೂಡ ಹಾಗೆಯೆ ಬೆಳಕಾಯ್ತು
ಗಡಿಯಾರ ನೆಡೆಯದೆ ನಿಂತು, ನೀ ಏಲ್ಲಿ ಏನು ಏಂತು?
ಹೇಳಿದೆ ನನ್ನಲಿ ಬಂದು, ನನ್ನ ಉಸಿರು ನೀನು ಏಂದು
 
ತಂಗಾಳಿ ನನ್ನ ಮನಸಿಂದು, ಬಿರುಗಾಳಿ ತಂದೆ ನೀನು
ಶಾಂತ ಕಡಲಂತೆ ನಾನು, ಸುನಾಮಿತಂತು ಒಲವು
ಸುಳಿಗೆ ಸಿಕ್ಕ ನಾವಿಕ ನಾನು, ಬದುಕೊ ಆಸೆ ನೀನು
ಪ್ರೇಮವೇ ಜೀವನದ ಮೊದಲ ಪಾಠವೊ..?
 
                                                -ಸುರೇಂದ್ರ ನಾಡಿಗ್ ಹೆಚ್ ಏಂ

Comments