ಒಮ್ಮೆ ನಕ್ಕು ಬಿಡಿ _ ೧೬ (ಬೆಳಗ್ಗೆ ತಿಂದಿದ್ದು ಏನು?)

ಒಮ್ಮೆ ನಕ್ಕು ಬಿಡಿ _ ೧೬ (ಬೆಳಗ್ಗೆ ತಿಂದಿದ್ದು ಏನು?)

ಕೊಳಕಾಗಿ ಶಾಲೆಗೆ ಬರುತ್ತಿದ್ದ ತಿಂಮನಿಗೆ ಟೀಚರ್ ಬುದ್ದಿ ಹೇಳುತ್ತಿದ್ದರು,

"ದಿನವೂ ಶುಭ್ರವಾಗಿ ಬರಬೇಕು ತಿಂಮ, ನಿನ್ನ ಮುಖನೋಡು ಬೆಳಗ್ಗೆ ಎದ್ದು ತಿಂಡಿತಿಂದ ನಂತರ ಮುಖ, ಬಾಯಿ ತೊಳದೆ ಇಲ್ಲ, ನಿನ್ನ ಮೂತಿನೋಡಿದರೆ ಬೆಳಗ್ಗೆ ಏನು ತಿಂಡಿತಿಂದೆ ಅಂತ ಹೇಳಿಬಿಡಬಹುದು ಹೇಳಲಾ?" ಎಂದರು.

ತಿಂಮನಿಗೆ ಏನೊ ಕುತೂಹಲ ಇಷ್ಟಗಲ ಕಣ್ಣರಳಿಸಿ "ಹೇಳಿ ಟೀಚರ್" ಅಂತ ಕೇಳಿದ.

ಆಕೆ ನಗುತ್ತ

"ನೋಡು ಈ ದಿನ ಬೆಳಗ್ಗೆ ಉಪ್ಪಿಟ್ಟು ತಿಂದು ಬಂದಿದ್ದೀಯ, ಬಾಯ ಎರಡು ಕಡೆ ಅದು ಮೆತ್ತಿಕೊಂಡಿರುವುದು ಕಾಣಿಸುತ್ತಿದೆ ಸರಿಯ? " ಎಂದರು.

ಅದಕ್ಕೆ ತಿಂಮ

"ತಪ್ಪು ಟೀಚರ್ ಇವತ್ತು ಬೆಳಗ್ಗೆ ನಾನು ತಿಂದದ್ದು ಇಡ್ಲಿ , ಉಪ್ಪಿಟ್ಟು ನಿನ್ನೆ ಬೆಳಗ್ಗೆ ತಿಂದದ್ದು" ಅಂತ ಇಷ್ಟಗಲ ಹಲ್ಲು ಬಿಟ್ಟ.

ಈಗ ಕಣ್ಣರಳಿಸುವ ಸರದಿ ಪಾಪ ಟೀಚರ‍್ದು

 

(ಕೇಳಿದ್ದು : ಬೀಚಿಯವರ ಹಾಸ್ಯಗಳಿಂದ)

Rating
No votes yet

Comments