ಸೋಲೆಂಬ ಅವಕಾಶವನ್ನು ಗುರ್ತಿಸುವುದು ಪರ್ಯಾಯ ಚಿಂತನೆ -- ಗಾದೆಗೊಂದು ಗುದ್ದು

ಸೋಲೆಂಬ ಅವಕಾಶವನ್ನು ಗುರ್ತಿಸುವುದು ಪರ್ಯಾಯ ಚಿಂತನೆ -- ಗಾದೆಗೊಂದು ಗುದ್ದು

(೩೪೬) ’ಸೋಲು’ ಎಂಬ ಪದವನ್ನು ’ಅವಕಾಶ’ವೆಂಬ ಪದದಿಂದ ಸ್ಥಳಾಂತರಿಸುವ ಕ್ರಮವನ್ನು ಪರ್ಯಾಯ ಚಿಂತನೆ ಎನ್ನುತ್ತೇವೆ.

(೩೪೭) ನನಗೆ ದೇವರನ್ನು ತೋರಿಸಿ. ಮೊದಲಿಗೆ ಆತ ಅಸ್ಥಿತ್ವದಲ್ಲಿರುವನೋ ಹೇಗೆ ಎಂದು ವಿಚಾರಿಸುವೆ. ನಂತರ ಆತನ ಇರುವಿಕೆಯನ್ನೇ ಅನುಮಾನಿಸುವಂತಹ ನನ್ನಂತಹ ಮೂರ್ಖ ಜೀವಿಗಳನ್ನು ಸೃಷ್ಟಿಸಿದ ಆತನ ಮೂರ್ಖತನ ಎಂತಹದ್ದು ಎಂದು ವಿವರಿಸಿ ಹೇಳುವೆ.

(೩೪೮) ಕೆಲವು ಪ್ರಾಣಿಗಳು ಸಾಕುಪ್ರಾಣಿಗಳಾಗಿಬಿಡುವ ಖಾಯಿಲೆಯಿಂದ ನರಳುತ್ತವೆ. ಇದೇ ಖಾಯಿಲೆಯು ಮನುಷ್ಯರಲ್ಲಿ ಉಂಟಾದಾಗ ಅದನ್ನು ’ಸ್ಟಾಕ್‍ಹೋಮ್ ಸಿಂಡ್ರೋಮ್’ ಎನ್ನುತ್ತೇವೆ.

(೩೪೯) ಗೋಡೆಗೊಂದು ಇಟ್ಟಿಗೆ, ದೇಹಕ್ಕೊಂದು ಅಣು ಮತ್ತು ವಿಶ್ವವನ್ನು ಗ್ರಹಿಸುವ ಆಸೆ -- ಈ ಮೂರೂ ಸಹ ವಿಶಾಲ ಚಿಂತನೆಯ ಕೊರತೆಯಿಂದ ನರಳುತ್ತವೆ.  

(೩೫೦) ಮೂಗುನತ್ತು ಮತ್ತು ಕಿವಿಯೋಲೆಯು ಮಾಂಸಖಂಡವನ್ನು ಒಳಗಿನಿಂದ ಛೇದಿಸುತ್ತ ತನ್ನಲ್ಲಿನ ಬಿರುಕನ್ನೇ ಮರೆತುಬಿಡುತ್ತವೆ! ಕಳ್ಳರು ಮಾತ್ರ ಆ ಬಿರುಕನ್ನು ಕಿತ್ತು ತೋರಿಸುತ್ತಾರೆ!

 

Rating
No votes yet