ನಿನ್ನ ಮೌನ ರಾಗದ ಇಂಪನ.....
ಕವನ
ನಿನ್ನ ಮೌನ ರಾಗದ ಇಂಪನ
ಮನದ ತುಂಬೆಲ್ಲಾ ಆವಾಹನ
ನಾನು ಕಾಣದ ಪ್ರೀತಿಯ ಅವತರಣ
ಯಾಕೆ ಹೀಗೆ ಅಂತ ನಾನು ಹೇಳೆನಾ !!
ಸೆಳೆವ ಕಣ್ಣ ನೋಟಕೆ, ಸೊರಗಿ ಹೋಗಲೇ
ಅದರ ಪ್ರೀತಿ ಸೆಳೆತಕೆ, ಮುದುರಿ ಕೊಳ್ಳಲೇ
ಮುಗ್ಧ ಮಗುವಿನಂತೆ ನನ್ನ ಮುದ್ದಿಸು,
ಅದರ ನಗುವಿನಂತೆ ಒಮ್ಮೆ ಅಣಕಿಸು ,
ಮಳೆಯ ಹನಿ ಪ್ರೇಮಕೆ, ತೋಯ್ದು ಹೋಗುವೆ
ಹಸಿರ ಒಡಲ ಬಸಿರಿಗೆ, ªÀÄÆಕನಾಗುವೆ,
ನೀಲಿ ಬಾನಿನಂತೆ ನನ್ನ ಅಪ್ಪಿಕೋ
ಅದರ ರೀತಿಯಂತೆ ಒಮ್ಮೆ ಸೆಳೆದುಕೊ.
ನಾನು ಕಾಣದ ಪ್ರೀತಿಯ ಅವತರಣ....
ನೆನಪ ಸಿಹಿ ಕಾಟಕೆ, ಕನಸು ಕಾಣಲೇ
ಅಲ್ಲಿ ªÀÄÆಡುವ ಪ್ರೀತಿ ನನ್ನದೆನ್ನಲೇ,
ಇರುಳ ಹಣತೆಯಾಗಿ ಒಮ್ಮೆ ಪಸರಿಸು
ಅದರ ರೀತಿಯಂತೆ ನನ್ನ ಬೆಳಗಿಸು .
ನಿನ್ನ ಮೌನ ರಾಗದ ಇಂಪನ....