ಮೇಘದ ಮೇಲೇರಿ ಬರುತಾಳೆ ನನ್ನೋಳು

ಮೇಘದ ಮೇಲೇರಿ ಬರುತಾಳೆ ನನ್ನೋಳು

ಕವನ

 


ಮೇಘದ ಮೇಲೇರಿ ಬರುತಾಳೆ ನನ್ನೋಳು
ಮಾಗಿಯ ಕಾಲದ ಸವಿಜೇನು
ಶ್ರಾವಣದ ಕೋಗಿಲೆಯ ಕಂಠದ ಸಿರಿಯಿವಳು
ನನ್ನಿ ಹೃದಯವೆ ನಿಂಗೆ ಉಡುಗೊರೆಯು


ಸ್ವಾಗತಕೆ ನೂರು ಜನಪದರ ಹಾಡು
ನೀ ನನ್ನ ಮನದ ಲಾಲಿ ಹಾಡು
ನೀಲಿ ಬಾನಲ್ಲಿ, ಹೊಂಗಿರಣದ ರಥದಲ್ಲಿ
ನನ್ನನ್ನೆ ನೋಡುತ್ತ ನಗುತಿಹಳು


ಚೈತ್ರಾದ ಚಿಲುಮೆಯೆ ಸ್ಪೂರ್ತಿಯ ಸೆಲೆಯೆ
ಬಾ ಬೆಳ್ಳಿ ಬಾನ ಸಾಗರಿಯೆ
ರವಿಯ ರಥದಿ ಚಂದ್ರನ ಸಾರಥಿ
ಬಾ ಬೇಗ ನಿನಗಾಗಿ ನಾ ಕಾಯುತ್ತಿಹೆನೆ


ಹಸಿರ ಕಣಿವೆ ನೀಲಿ ಸಾಗರದ ಮೇಲೆ
ಬೆಳದಿಂಗಳ ತಂಪಾಗಿ ಬಾ ಮಡಿಲಿಗೆ
ನನ್ನ ಉಸಿರಿಗೆ ಉಸಿರಾಗಿ, ಜೀವಕ್ಕೆ ಜೊತೆಯಾಗಿ
ಸೇರುಬಾ ನನ್ನ ಹಂಸಕುಲೆ..


                    ಸುರೇಂದ್ರ ನಾಡಿಗ್ ಹೆಚ್. ಎಮ್