ನೆದೇರ್ಲಂಡ್ಸ್ ಚಲನಚಿತ್ರೋತ್ಸವ - ಕನ್ನಡ ಸಿನೆಮಾ

ನೆದೇರ್ಲಂಡ್ಸ್ ಚಲನಚಿತ್ರೋತ್ಸವ - ಕನ್ನಡ ಸಿನೆಮಾ

ಎಲ್ಲರಿಗೂ ನಮಸ್ಕಾರ, ನಾನು ಸತೀಶ್ ಸಿ ವಿ - ಕೆಲವು ತಿಂಗಳುಗಳಿಂದ ಸಂಪದ ಸದಸ್ಯನಾಗಿದ್ದೇನೆ. ಆದರೆ ಸಂಪದದಲ್ಲಿ ಬರೆಯುವುದಕ್ಕೆ ಆಗಿರಲಿಲ್ಲ.

ಈಗ ಸದ್ಯಕ್ಕೆ ನೆದೇರ್ಲಂಡ್ಸ್ ನಲ್ಲಿ ಇಂಗ್ಲೆಂಡ್‌ನಿಂದ ಒಂದು ತಿಂಗಳ ಮಟ್ಟಿಗೆ ಬಂದಿದ್ದೇನೆ. ಇಲ್ಲಿ, ರಾಟೇರ್‌ದಮ್ ಅಂತರರಾಷ್ಛ್ರ್ಟ್ರೀಯ ಚಲನಚಿತ್ರೋತ್ಸವ ನಡಯುತ್ತಿದೆ. ಈ ವರ್ಷದ ವಿಶೇಷವೇನೆಂದರೆ ನಮ್ಮ ಕನ್ನಡ ಚಲನಚಿತ್ರ ಆಯ್ಕೆಯಾಗಿರುವುದು - ಗಿರೀಶ್ ಕಾಸರವಳ್ಳಿ ನಿರ್ದೇಶನದ - ನಾಯಿಯ ನೆರಳು ಚಲನಚಿತ್ರ. ಜನವರಿ 28 ರಂದು ನಾನು ಈ ಚಿತ್ರದ ಪ್ರದರ್ಶನಕ್ಕೆ ಸ್ನೇಹಿತರೊಂದಿಗೆ ಹೋಗಿದ್ದೆ.

ಚಿತ್ರವು ಬಹಳ ಚೆನ್ನಾಗಿದೆ. ಗಿರೀಶ್ ಮತ್ತು ಅವರ ತಂಡಕ್ಕೆ ಶುಭಾಶಯಗಳು. ಸಿನಿಮಾ ಹಾಲ್ ಜನರಿಂದ ಭರ್ತಿಯಾಗಿತ್ತು. ಸ್ಥಳೀಯ ಜನರು ಸಿನೆಮಾವನ್ನು ಬಹಳ ಆಸಕ್ತಿಯಿಂದ ವೀಕ್ಷಿಸಿದರು ಮತ್ತು ಒಳ್ಳೆಯ ಅಭಿಪ್ರಾಯಗಳನ್ನು ನೀಡಿದರು.

ಕೆಲವರನ್ನು ನಾನು ಮಾತನಾಡಿಸಿದೆ ಮತ್ತು ನಮ್ಮ ಭಾಷೆ ಮತ್ತು ಕನ್ನಡ ಸಂಸ್ಕೃತಿ ಬಗ್ಗೆ ಸ್ವಲ್ಪ ವಿವರಗಳನ್ನು ಸಹ ಹೇಳಿದೆ. ಅವರು ಸಿನಿಮಾದಲ್ಲಿ ತೋರಿಸಿದ ಕರ್ನಾಟಕದ ಸ್ಥಳಗಳ ಬಗ್ಗೆ ಬಹಳ ಆಸಕ್ತಿ ವಹಿಸಿದರು.

Rating
No votes yet