ಜೀವನ: ಚಿಕ್ಕ ಹಾಗು ಚೊಕ್ಕ ವಿವರಣೆ

ಜೀವನ: ಚಿಕ್ಕ ಹಾಗು ಚೊಕ್ಕ ವಿವರಣೆ

ಒಂದು ದಿನ ದೇವರು ನಾಯಿಯನ್ನು ಸೃಷ್ಠಿಸಿ ಹೇಳಿದ:

" ನೀನು ದಿನವಿಡೀ ಒಂದೆಡೆ ಕೂತು ಯಾರನ್ನೆ ಕಂಡರು, ನಿನ್ನ ಬಳಿ ಯಾರೇ ಸುಳಿದರೂ, ಬೊಗಳುತ್ತಿರು. ಇದಕ್ಕಾಗಿ ನಾನು ನಿನಗೆ ಇಪ್ಪತ್ತು ವರ್ಷಗಳ ಜೀವಿತಾವಧಿಯನ್ನು ಕೊಡುತ್ತೇನೆ. "

ನಾಯಿ ಹೇಳಿತು: " ಇಪ್ಪತ್ತು ವರ್ಷ ಬಹಳ ದೀರ್ಘವಾಯಿತು. ಹೀಗೆ ಮಾಡು, ನನಗೆ ಕೇವಲ ಹತ್ತು ವರ್ಷಗಳನ್ನು ದಯಪಾಲಿಸಿ, ಮಿಕ್ಕ ಹತ್ತು ವರ್ಷಗಳನ್ನು ನಿನ್ನ ಬಳಿಯೆ ಇರಿಸಿಕೊ.. "

ದೇವರು ಒಪ್ಪಿದ.

 

ಎರಡನೆ ದಿನ ದೇವರು ಕೋತಿಯನ್ನು ಸೃಷ್ಠಿಸಿ ಹೇಳಿದ:

" ನೀನು ನಿನ್ನ ಕೋತಿ ಚೇಷ್ಟೆಗಳನ್ನು ಮಾಡುತ್ತಾ, ಎಲ್ಲರನ್ನು ನಗಿಸು. ಇದಕ್ಕಾಗಿ ನಾನು ನಿನಗೆ ಇಪ್ಪತ್ತು ವರ್ಷಗಳ ಜೀವಿತಾವಧಿಯನ್ನು ಕೊಡುತ್ತೇನೆ.."

ಕೋತಿ ಹೇಳಿತು : " ಕೋತಿಯಾಟಗಳಿಗೆ ಇಪ್ಪತ್ತು ವರ್ಷಗಳೇ..? ತುಂಬಾ ದೀರ್ಘವಾಯಿತು. ಹೀಗೆ ಮಾಡಿದರೆ ಹೇಗೆ ? ಕೇವಲ ಹತ್ತು ವರ್ಷಗಳನ್ನು ನನಗೆ ಕೊಟ್ಟು, ಉಳಿದ ಹತ್ತನ್ನು ನೀನೆ ಇರಿಸಿಕೊ.. "

ದೇವರು ಒಪ್ಪಿದ.

 

ಮೂರನೆ ದಿನ ದೇವರು ಹಸುವನ್ನು ಸೃಷ್ಠಿಸಿ ಹೇಳಿದ: " ನೀನು ಹೊಲದಲ್ಲಿ, ಬಿಸಿಲು ಮಳೆಯೆನ್ನದೆ ಕೆಲಸ ಮಾಡು. ಕರುಗಳನ್ನು ಹೊಂದಿ, ಹಾಲನ್ನು ಕೊಟ್ಟು ರೈತನ ಸಂಸಾರವನ್ನು ಉಧ್ದರಿಸು. ಇದಕ್ಕಾಗಿ ನಾನು ನಿನಗೆ ಅರವತ್ತು ವರ್ಷಗಳ ಆಯಸ್ಸನ್ನು ಕೊಡುತ್ತೇನೆ."

ಹಸು ಹೇಳಿತು: " ಇಷ್ಟು ಕಠಿಣವಾದ ಜೀವನವನ್ನು ಅರವತ್ತು ವರ್ಷಗಳ ಕಾಲ ಸಾಗಿಸು ಎಂದು ಹೇಳುತ್ತಿರುವೆಯಲ್ಲ .. ? ನನಗೆ ಕೇವಲ ಇಪ್ಪತ್ತು ವರ್ಷಗಳನ್ನು ದಯಪಾಲಿಸು, ಮಿಕ್ಕ ನಲವತ್ತು ವರ್ಷಗಳನ್ನು ನಿನ್ನಲ್ಲೆ ಇರಿಸಿಕೊ.. "

ದೇವರು ಈಗಲು ಒಪ್ಪಿದ.

 

ನಾಲ್ಕನೆ ದಿನ ದೇವರು ಮನುಷ್ಯನನ್ನು ಸೃಷ್ಠಿಸಿ ಹೇಳಿದ:

" ಜೀವನವನ್ನು, ತಿನ್ನುತ್ತಾ, ಕುಡಿಯುತ್ತಾ, ಕಾಲ ಕಳೆಯುತ್ತಾ, ಆಡುತ್ತಾ, ಮದುವೆ ಮಾಡಿಕೊಂಡು ಸಂತೋಷದಿಂದ ಅನುಭವಿಸು. ಇದಕ್ಕಾಗಿ ನಾನು ನಿನಗೆ ಇಪ್ಪತ್ತು ವರ್ಷಗಳನ್ನು ಕೊಡುತ್ತೇನೆ.. "

ಮನುಷ್ಯ ಹೇಳಿದ: " ಕೇವಲ ಇಪ್ಪತ್ತು ವರ್ಷಗಳೇ.. ?? ಸಾಲದು. ದಯಮಾಡಿ ನನಗೆ ನನ್ನ ಇಪ್ಪತ್ತು ವರ್ಷ, ಹಸು ಹಿಂದಿರುಗಿಸಿರುವ ನಲವತ್ತು ವರ್ಷ, ಕೋತಿ ಹಿಂದಿರುಗಿಸಿರುವ ಹತ್ತು ವರ್ಷ ಮತ್ತು ನಾಯಿ ಹಿಂದಿರುಗಿಸಿರುವ ಹತ್ತು ವರ್ಷಗಳನ್ನು ಕರುಣಿಸು. ಒಟ್ಟು ಎಂಭತ್ತು ವರ್ಷಗಳಾಗುತ್ತವೆ. ಏನೆನ್ನುವೆ..??

 

ದೇವರು " ನೀನೆ ಕೇಳಿಕೊಂಡಿರುವುದರಿಂದ, ಕರುಣಿಸುತ್ತೇನೆ."

 

ಹಾಗಗಿಯೆ, ನಾವು ನಮ್ಮ ಮೊದಲ ಇಪ್ಪತ್ತು ವರ್ಷಗಳನ್ನು ತಿಂದು, ಕುಡಿದು, ಮೋಜುಮಾಡಿ ಅನುಭವಿಸುತ್ತೇವೆ. ಮುಂದಿನ ನಲವತ್ತು ವರ್ಷಗಳನ್ನು, ನಮ್ಮ ಸಂಸಾರದ ಪೋಷಣೆಗಾಗಿ ಬಿಸಿಲು, ಛಳಿ, ಮಳೆಯೆನ್ನದೆ ದುಡಿಯುತ್ತೇವೆ. ಮುಂದಿನ ಹತ್ತು ವರ್ಷಗಳು, ಮೊಮ್ಮಕ್ಕಳನ್ನು ಸಂತೋಷಪಡಿಸಲು ಮ‍ಂಗನಾಟಗಳನ್ನಾಡಲು, ಅವರೊಂದಿಗೆ ಕಾಲಕಳೆಯಲು ಉಪಯೋಗಿಸುತ್ತೇವೆ. ಕೊನೆಯ ಹತ್ತು ವರ್ಷಗಳನ್ನು ಮನೆಯ ಒಂದು ಮೂಲೆಯಲ್ಲಿ ಕುಳಿತು, ಸುಖಾಸುಮ್ಮನೆ ಎಲ್ಲರ ಮೇಲೆ ರೇಗುವುದರಲ್ಲಿ ಕಳೆಯುತ್ತೇವೆ....

 

ಆದ್ದರಿಂದ ಜೀವನದ ಸಂಕೀರ್ಣತೆಯನ್ನು ಅರ್ಥೈಸಿಕೊಂಡು ಬದುಕಬೇಕು.

 

 

ಕೃಪೆ: ಮಿಂಚಂಚೆ 

Rating
No votes yet

Comments