ನೋಡ ಬನ್ನಿ ನಂ ಶಿವಮೊಗ್ಗ

ನೋಡ ಬನ್ನಿ ನಂ ಶಿವಮೊಗ್ಗ

ಕವನ

 ನೋಡ ಬನ್ನಿ ನಂ ಶಿವಮೊಗ್ಗ

ಚಾರಣ, ಇತಿಹಾಸಕೆ ಸ್ವರ್ಗ
 
ಇತಿಹಾಸದ ಕೆಳದಿ ,ಕಲಸೆಗಳು
ಇಲ್ಲೇ ಇಹುದು ಇಕ್ಕೇರಿ
ನೋಡಬನ್ನಿರಿ ಜೋಗ ಜಲಪಾತ
ಹೊನ್ನೆಮರಡು, ಮುಪ್ಪಾನೆ|1|
 
ಮಂಡಗದ್ದೆಯ ಪಕ್ಷಿಧಾಮವು
ತ್ಯಾವರೆಕೊಪ್ಪದ ಹುಲಿಸಿಂಹ
ಸಕ್ರೆಬೈಲಿನ ಆನೆ ಕ್ಯಾ೦ಪನು
ಮಲೆನಾಡ ಸಿರಿಯ ನೋಟವನು|2|
 
ಕಾನೂರ ಕೋಟೆ, ಕೊಡಚಾದ್ರಿ
ಜೈನ ತಾಣ ಹುಂಚ, ಕು೦ದಾದ್ರಿ
ನಗರದ ಕೋಟೆ, ಕವಲೇ ದುರ್ಗ
ಕುಪ್ಪಳ್ಳಿಯ ಸುಂದರ ನಿಸರ್ಗ|3|
 
ಮಾರಿಚನ ಕೊಂದ ಮ್ರುಗವಧೆ
ಮತ್ಸ್ಯಧಾಮ ಚಿಬ್ಬಲಗೆರೆ
ಸಿಗಂದೂರು,ತುಮರಿ, ಮುಳುಗಡೆ
ಬರೆದು ಮುಗಿಯದೀ ಹಲವು ತಾಣಗಳ
ನೋಡಬನ್ನಿರೆಂಬ, ನಮ್ಮೊಡನೆ ನಲಿಯಿರೆಂಬ 
ಆತ್ಮೀಯ ಆಹ್ವಾನ ನಿಮ್ಮತ್ತ|4|