ಕೊಳಲೇ ! ನೀನೇನು ಪುಣ್ಯಗೈದೆ
ಕೊಳಲೇ ! ನೀನೇನು ಪುಣ್ಯಗೈದೆ
ಬಲನನುಜನ ಕರಕಮಲವ ಸೇರಲು
ಎನು ಪುಣ್ಯಗೈದೆ
ನೀನಿನ್ನೇನು ಪುಣ್ಯಗೈದೆ
ಮುರಳಿಯೆ ಮಾಧವನಧರಾಮೃತವನು
ನಿರುತ ಸವಿಯುತಿರುವೆ
ಅದರೊಳು ಒಲಾಡುತಲಿರುವೆ
ಗಿರಿಧರನಕರಸ್ಪರ್ಶದ ಪುಲಕದಿ
ಮುಳುಗಿಹೋಗಿಬಿಡುವೆ
ಜಗದ ಜಂಜಡವನೆ ಮರೆವೆ
ನಿನ್ನಜನ್ಮಕೆ ತಾಣವನಿತ್ತ
ಗೋವರ್ಧನ ಧನ್ಯ
ನಿನ್ನ ನೀರುಣಿಸಿ ಬೆಳೆಸಿದ ಯಮುನೆಯೆ
ಭೂತಳದೊಳು ಮಾನ್ಯೆ
ನಿನ್ನೊಡನಾಡಿ ಬೆಳೆದ ತರುಲತೆಗಳು
ಮಾಡಿದವೇಂ ಯೋಗ
ನಿನ್ನ ಬಳಿ ಸುಳಿದು ಹಸಿರಮೇದತುರು
ಕರುಗಳದೇಭಾಗ್ಯ
ನಂದನಂದನನ ಕಿವಿಯೊಳಗುಸಿರು ನೀ
ಸಂದರ್ಭವನೋಡಿ
ಒಂದೆ ಕಟಾಕ್ಷದ ವೀಕ್ಷಣ ಬೀರಲಿ
ಮಂದಭಾಗ್ಯಳ ನೋಡಿ
ಹೂವಿನ ಜೊತೆಯಲಿ ನಾರೂ ಸ್ವರ್ಗವ
ಸೇರುವಂತೆ ನಾನೂ
ಮೋಹನ ಮುರುಳಿಯೆ ನಿನ್ನಯ ದಯದಲಿ
ಪಾವನವಾಗುವೆನು
ಪ್ರೇರಣೆ-ಕೃಷ್ಣ ಕರ್ಣಾಮೃತ(ಲೀಲಾಶುಕ)
ಅಯಿ ಮುರುಲಿ!ಮುಕುಂದಸ್ಮೇರವಕ್ತ್ರಾರವಿಂದ
ಶ್ವಸನ ಮಧುರಸಜ್ಞೇ ತ್ವಾಮ್ ಪ್ರಣಮ್ಯಾದ್ಯ ಯಾಚೇ
ಅಧರಮಣಿ ಸಮೀಪಮ್ ಪ್ರಾಪ್ತವತ್ಯಾಂ ಭವತ್ಯಾಂ
ಕಥಯರಹಸಿಕರ್ಣೇ ಮದ್ದಶಾಂ ನಂದ ಸೂನೋಃ
Rating
Comments
ಉ: ಕೊಳಲೇ !
ಉ: ಕೊಳಲೇ !
In reply to ಉ: ಕೊಳಲೇ ! by raghumuliya
ಉ: ಕೊಳಲೇ !
ಉ: ಕೊಳಲೇ ! ನೀನೇನು ಪುಣ್ಯಗೈದೆ