ಮುಂಬೈನ ಹಿಮಾಲಯಾ ಕೋ.ಹೌ.ಸೊ.ಯಲ್ಲಿರುವ ಹಿಮಾಲಯೇಶ್ವರ ದೇವಾಲಯದಲ್ಲಿ, ಮಹಾಶಿವರಾತ್ರಿ ಆಚರಣೆ

ಮುಂಬೈನ ಹಿಮಾಲಯಾ ಕೋ.ಹೌ.ಸೊ.ಯಲ್ಲಿರುವ ಹಿಮಾಲಯೇಶ್ವರ ದೇವಾಲಯದಲ್ಲಿ, ಮಹಾಶಿವರಾತ್ರಿ ಆಚರಣೆ

 

 

 

 

 

 

ಸುಮಾರು ೩೦ ವರ್ಷಗಳಿಂದ, ಮುಂಬೈಮಹಾನಗರದ  ಘಾಟ್ಕೋಪರ್ (ಪ) ನಲ್ಲಿರುವ ಹಿಮಾಲಯೇಶ್ವರ ಮಂದಿರದ ಜೀರ್ಣೋದ್ಧಾರದ ಕೆಲಸ ಕಳೆದ ೬ ತಿಂಗಳಿನಿಂದ ನಡೆದಿದ್ದು,  ಈ ಕಾರ್ಯದಲ್ಲಿ ಎಲ್ಲಾ ಶಿವಭಕ್ತರು, ದಾನಿಗಳ ಸಹಯೋಗ ಹಾಗೂ ಹಿಮಾಲಯೇಶ್ವರ್ ಶಿವನ ಮಹಾಕೃಪೆಯಿಂದ  ಆದರ್ಶಮಹಿಳಾಮಂಡಲ ಪೂರ್ಣಗೊಳಿಸಿತು. ಮಹಾಶಿವರಾತ್ರಿಯ ಪಾವನದಿನದಂದು ಮಂದಿರದ  ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯ ಮಹಾಕಾರ್ಯವನ್ನು ವಿಧಿವತ್ತಾಗಿ ನೆರೆವೇರಿಸಬೇಕೆಂಬ ಹಂಬಲವನ್ನು ಭಕ್ತಾದಿಗಳು ಹೊಂದಿದ್ದರು. ಅದರ ಪ್ರಕಾರ, ಪ್ರಸಕ್ತ ವರ್ಷ ಸನ್, ೨೦೧೧ ರ, ಮಾರ್ಚ್, ೨ ರಂದು, ಮಹಾಶಿವರಾತ್ರಿ ಹಬ್ಬವನ್ನು ಇಲ್ಲಿನ ಶ್ರದ್ಧಾಳುಗಳು ಅತ್ಯಂತ ಭಕ್ತಿ ಶ್ರದ್ಧೆ ಉತ್ಸಾಹಗಳಿಂದ ಆಚರಿಸಿದರು.  ಆದರ್ಶ ಮಹಿಳಾಮಂಡಲದ ಸದಸ್ಯೆಯರ ಮುಂದಾಳತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು ಈ ಪ್ರಕಾರವಾಗಿದ್ದವು. 
* ಪ್ರಾಣಪ್ರತಿಷ್ಠೆ- ಬೆಳಿಗ್ಯೆ ೭ ರಿಂದ ಪ್ರಾರಂಭ,

* ಅಭಿಷೇಕ ಬೆಳಿಗ್ಯೆ ೭ ರಿಂದ
* ತೀರ್ಥ ಪ್ರಸಾದ ಮಧ್ಯಾನ್ಹ ೧ ರ ನಂತರ,
* ಭಜನ್ ಕೀರ್ತನ್ ಮಧ್ಯಾನ್ಹ ೩ ಗಂಟೆಯ ಬಳಿಕ
* ಮಹಾಭಂಡಾರ್  ಸಾಯಂಕಾಲ್ ೭ ಗಂಟೆಗೆ,