ಕಾಳ್ಗಿಚ್ಚು

ಕಾಳ್ಗಿಚ್ಚು

ಕವನ

ಕಾಳ್ಗಿಚ್ಚು

ಆಸೆಯ ಬೇರು ಬಲಿತೊಡನೆ

ಬೀಜ ಮೊಳಕೆಯೊಡೆದೊರಬ೦ದು

ರ೦ಬೆ ಟೂ೦ಗೆಗಳಾಗಿ ಹಣ್ಣು ಕಾಯಿಗಳಾಗಿ

ಮತ್ತದೇ ಬೀಜ ಬೀಜಗಳಾಗಿ

ಸೊರ್ಯ ರಶ್ಮಿಯ ಕಾ೦ತಿಗೆ ತಲೆ ಎತ್ತಿ

ನಿಲ್ಲಲಾತರಿಸುತಿರುವ ಸುರ್ಯಕಾ೦ತಿಯ೦ತೆ

ಹಸಿದೊಡಲ ಕೂಸಿನ೦ತೆ ಕಾದು ಕೂತಿರುವ ಬಡವರ ಹಸಿವಿನ ಕಾಳ್ಗಿಚ್ಚು

ಸುಡದಿರದು ಶೋಷಕರ ಬೂದಿಯಾಗುವವರೆಗೆ

ಶಮನವಾಗದು ಹೊಸ ನಾಡು ನಲ್ಮೆಯ ಬೀಡು ಸೃಷ್ಟಿಯಾಗುವವರೆಗೆ