ಒಮ್ಮೆ ನಕ್ಕು ಬಿಡಿ - ೨೦

ಒಮ್ಮೆ ನಕ್ಕು ಬಿಡಿ - ೨೦

ಒಮ್ಮೆ ನಕ್ಕು ಬಿಡಿ - ೨೦
ಮನೋಚಿಕಿತ್ಸಾಲಯದ ಡಾಕ್ಟರ್ ಹತ್ತಿರ ಒಬ್ಬಾತ ಬಂದಿದ್ದ, ನೋಡಲು ಸಾಕಷ್ಟು ವಿದ್ಯಾವಂತೆನಂತೆ ಇದ್ದ. ಡಾಕ್ಟರ್ ಆತನನ್ನು ಪ್ರಶ್ನಿಸಿದರು
"ನಿಮ್ಮ ಸಮಸ್ಯೆ ಏನು ತಿಳಿಸುತ್ತೀರ"
"ಆಗಲಿ ಡಾಕ್ಟರ್ , ಏಕೊ ಎಲ್ಲರೂ ನನ್ನನ್ನು ಹುಚ್ಚ ಅಂತ ಅಂದುಕೋತಾರೆ" ಎಂದ
"ಏಕೆ ನಿಮ್ಮಲ್ಲೇನು ವಿಶೇಷ , ಏಕೆ ಹಾಗೆಂದುಕೊಳ್ತಾರೆ?" ಡಾಕ್ಟರ್ ಗೆ ಕುತೂಹಲ
"ಏನಿಲ್ಲ ಸಾರ್ ನನಗೆ ಈ ಹತ್ತಿ ಬಟ್ಟೆಯ ಕಾಲುಚೀಲ (cotton socks ) ಅಂದ್ರೆ ಸ್ವಲ್ಪ ಇಷ್ಟ ಹಾಗಾಗಿ" ಅಂತ ತಿಳಿಸಿದ.
"ಛೇ ಅದರಲ್ಲೇನು ತಪ್ಪು , ಈಗ ನೋಡಿ ನನಗೂ ಕಾಟನ್ ಸಾಕ್ಸ್ ಗಳೆ ಇಷ್ಟ" ಅಂದರು ಡಾಕ್ಟರ್. ರೋಗಿಗೆ ಖುಷಿಯೊ ಖುಷಿ,
"ಹೌದಾ ಡಾಕ್ಟರ್ ನಿಮಗೂ ಹತ್ತಿಯ ಕಾಲುಚೀಲವೆ ಇಷ್ತವಾ? ನಿಮಗೆ ಹೇಗೆ ಇಷ್ಟ ? ಪಲ್ಯದ ಜೊತೆಗೆ ಅಥವ
ಚಟ್ನಿಯ ಜೊತೆಗೋ " ಅಂತ ಕುತೂಹಲದಿಂದ ಪ್ರಶ್ನಿಸಿದ.
ಅವನನ್ನೆ ದಿಟ್ಟಿಸಿದ ಡಾಕ್ಟರ್ ನರ್ಸನ್ನು ಕರೆದರು, ಮತ್ತು ಈ ವ್ಯಕ್ತಿಯನ್ನು ಕೂಡಲೆ ಅಡ್ಮಿಟ್ ಮಾಡಿ ಅಂತ ತಿಳಿಸಿದರು

Rating
No votes yet